ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಗುಡ್ ನ್ಯೂಸ್, ಬರುತ್ತಿದೆ ಮಹತ್ವದ ಪ್ರೈವೈಸಿ ಫೀಚರ್!
ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಇದೀಗ ಮೆಟಾ ಮಹತ್ವದ ಪ್ರೈವೇಟ್ ಫೀಚರ್ ಪರಿಚಯಿಸುತ್ತಿದೆ. ಬಳಕೆದಾರರ ಖಾಸಗಿತನಕ್ಕೆ ರಕ್ಷಣೆ ನೀಡಲು ಈ ಫೀಚರ್ ತರಲಾಗುತ್ತಿದೆ.
ನವದೆಹಲಿ(ಅ.24) ಭಾರತ ಸೇರಿದಂತೆ ವಿಶ್ವದಲ್ಲೇ ಇನ್‌ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್‌ಸ್ಟಾಗ್ರಾಂ ಅತ್ಯಂತ ಜನಪ್ರಿಯ ಹಾಗೂ ನೆಚ್ಚಿನ ಸೋಶಿಯಲ್ ಮೀಡಿಯಾ ತಾಣವಾಗಿ ಹೊರಹೊಮ್ಮಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳು, ಜನಸಾಮಾನ್ಯರು ಸೇರಿದಂತೆ ಬಹುತೇಕರು ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಮೆಟಾ ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲೇ ಮಹತ್ವದ ಪ್ರೈವೈಸಿ ಫೀಚರ್ ಜಾರಿಗೆ ತರುತ್ತಿದೆ. ಇದರಿಂದ ಬಳಕೆದಾರರ ವೈಯುಕ್ತಿಕ ಮಾಹಿತಿ, ಚಾಟ್, ಪ್ರತಿಕ್ರಿಯೆಗೆ ಮತ್ತಷ್ಟು ಸುರಕ್ಷತೆ ಒದಗಿಸಲಾಗುತ್ತಿದೆ.
ಇನ್‌ಸ್ಟಾಗ್ರಾಂ ಪರಿಚಯಿಸುತ್ತಿರುವ ಪ್ರೈವೈಸಿ ಫೀಚರ್‌ಲ್ಲಿ ಪ್ರಮುಖವಾಗಿ ಬಳಕೆದಾರರ ಮೆಸೇಜ್, ರಿಪ್ಲೈಗಳನ್ನು ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಿಲ್ಲ. ಇಷ್ಟು ದಿನ ಯಾರು ಏನೇ ಮೇಸೆಜ್ ಮಾಡಿದರೂ ಅದರ ಸ್ಕ್ರೀನ್‌ಶಾಟ್ ತೆಗೆಯಲು ಅನುಮತಿ ಇತ್ತು. ಹೀಗಾಗಿ ಹಲವು ಖಾಸಗಿ ಚಾಟ್‌ಗಳ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು. ಇದು ಕೋಲಾಹಲಕ್ಕೆ ಕಾರಣವಾಗಿದೆ. ಪ್ರಕರಣಗಳು ದಾಖಲಾಗಿದೆ, ಸಂಬಂಧಗಳು ಬಿರುಕು ಬಿಟ್ಟ ಉದಾಹರಣೆಗಳಿವೆ.
ಇನ್‌ಸ್ಟಾದಲ್ಲಿ ನಿಮ್ ಹುಡುಗಿ ಪೋಸ್ಟ್ ಸೇವ್ ಮಾಡಿದ್ದೀರಾ? ಹೆಸರು ಗೊತ್ತಾಗೋ ದಿನ ದೂರವಿಲ್ಲ!
ಆದರೆ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಇದೀಗ ಡೈರೆಕ್ಟ್ ಮೆಸೇಜ್ ಅಥವಾ ಮೆಸೇಂಜರ್ ಪ್ರೈವೈಸಿ ಫೀಚರ್ ಮತ್ತಷ್ಟು ಬಿಗಿಗೊಳಿಸುತ್ತಿದೆ. ಯಾರದಾರರೂ ಫೋಟೋ, ವಿಡಿಯೋ ಕಳುಹಿಸಿದರೆ ವೀವ್ ಒನ್ಸ್ ಅಥವಾ ರಿಪ್ಲೇ ಆಯ್ಕೆ ಬರಲಿದೆ. ಸ್ಕ್ರೀನ್‌ಶಾಟ್ ತೆಗೆಯಲು ಅವಕಾಶ ನೀಡುವುದಿಲ್ಲ. ಈ ಫೀಚರ್ ಮೂಲಕ ಮೆಟಾ ಇದೀಗ ಇನ್‌ಸ್ಟಾಗ್ರಾಂ ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.
ಪ್ರಾಯೋಗಿಕ ಹಂತದ ಪ್ರಯೋಗ ಯಶಸ್ವಿಯಾಗಿದೆ. ಶೀಘ್ರದಲ್ಲೇ ಈ ಪ್ರೈವೈಸಿ ಫೀಚರ್ ಜಾರಿಗೆ ಬರಲಿದೆ. ಒಮ್ಮೆ ಈ ಫೀಚರ್ ಲಾಂಚ್ ಆದ ಬಳಿಕ ಎಲ್ಲಾ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಂ ಅಪ್‌ಡೇಟ್ ಮಾಡಿಕೊಳ್ಳಬೇಕು. ತಮ್ಮ ತಮ್ಮ ಪ್ರೊಫೈಸ್ ಸೆಟ್ಟಿಂಗ್ ಮೂಲಕ ಡೈರೆಕ್ಟ್ ಮೆಸೇಜ್ ಸ್ಕ್ರೀನ್‌ಶಾಟ್ ಲಾಕ್ ಮಾಡಿಕೊಳ್ಳಬೇಕು. ಇದರಿಂದ ಯಾರಿಗೂ ನಿಮ್ಮ ಮೆಸೇಜ್ ಸ್ಕ್ರೀನ್‌ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ.
ಈಗಾಗಲೇ ಮೆಟಾ ಕೆಲ ಫಿಲ್ಟರ್ ಫೀಚರ್ ಸೇರಿಸಿದೆ. ಈ ಮೂಲಕ ಪೋಟೋ, ವಿಷಯ ಸೇರಿದಂತೆ ಯಾವುದರಲ್ಲೂ ಅಶ್ಲೀಲತೆಯಿಂದ ದೂರ ಉಳಿಯುವಂತೆ ಮಾಡಿದೆ. ಮೆಟಾ ಮಾರ್ಗಸೂಚಿ ಹಾಗೂ ನಿಯಮ ಉಲ್ಲಂಘಿಸಿದರೆ ಸ್ವಯಂಪ್ರೇರಿತವಾಗಿ ಮೆಟಾ ಕ್ರಮ ಕೈಗೊಳ್ಳಲಿದೆ. ಮಾಡಿದ ಪೋಸ್ಟ್ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲಿದೆ.
ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಕೂಡುಗೆ, ನಿಮ್ಮ ಫೋಟೋವನ್ನೇ ಸ್ಟಿಕ್ಕರ್ ಆಗಿ ಪರಿವರ್ತಿಸುವ ಫೀಚರ್!