Asianet Suvarna News Asianet Suvarna News

ಎಲ್‌ಜಿ ಉತ್ಪನ್ನಗಳ ಅತ್ಯುದ್ಭತ ಅನುಭವಕ್ಕೆ ಇನ್ನೋವೇಷನ್ ಗ್ಯಾಲರಿ

ಹಿಂದೆಂದೂ ಇಲ್ಲದಂತೆ ಎಲ್‌ಜಿ ತನ್ನ ಗ್ರಾಹಕರ ಅನುಭವವನ್ನು ಪುನರ್ ವ್ಯಾಖ್ಯಾನಿಸಲು ಮುಂದಾಗಿದೆ. ಕಂಪನಿ ನೀಡುತ್ತಿರುವ ಹಲವು ಆಫರಿಂಗ್ಸ್ ಬಗ್ಗೆ ಬಿ2ಬಿ ಮತ್ತು ಬಿ2ಬಿ2ಸಿ ಗ್ರಾಹಕರಿಗೆ ಸಂಪೂರ್ಣ ಅರಿವು ಮೂಡಿಸಲು ಎಲ್‌ಜಿ ಎಲೆಕ್ರ್ಟಾನಿಕ್ಸ್ ಬಿ2ಬಿ ಗ್ಯಾಲರಿ ಸೃಷ್ಟಿಸಿದೆ. ನೋಯ್ಡಾದಲ್ಲಿರುವ ಕಂಪನಿಯ ಕಾರ್ಪೋರೇಟ್ ಕಚೇರಿಯಲ್ಲಿರುವ ಈ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಟ್ಟ ಉತ್ಪನ್ನಗಳನ್ನು ಗ್ರಾಹಕರು ಪರೀಕ್ಷಿಸಿ ಅನುಭವವನ್ನು ಪಡೆಯಬಹುದು. ಪಾಲುದಾರರೊಂದಿಗೆ ಕೈ ಜೋಡಿಸಿದ ಎಲ್‌ಜಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತಲೂ ಗಮನ ಹರಿಸಿದೆ. ಏನಿದೆ ಈ ಗ್ಯಾಲರಿಯಲ್ಲಿ. ಇಲ್ಲಿದೆ ಫುಲ್ ಡಿಟೇಲ್ಸ್.

LG B2B innovation gallery set up in coportate office Noida
Author
Bengaluru, First Published Dec 18, 2020, 6:55 PM IST

ಈಗಿನ ಬಿ2ಬಿ ಗ್ರಾಹಕರು ತಮ್ಮ ಹೂಡಿಕೆಯಿಂದ ಆಗುವ ಸಂಪೂರ್ಣ ಲಾಭದ ಕಡೆ ಗಮನ ಹರಿಸುತ್ತಾರೆ. ಬರುವ ಲಾಭದ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡು ಹೂಡಿಕೆಗೆ ಮುಂದಾಗುತ್ತಾರೆ. ಈ ಕೊರೋನಾ ವೈರಸ್ ಸೋಂಕಿನ ಸಮಯದಲ್ಲಿ ಬಿ2ಬಿ ಕ್ಷೇತ್ರದಲ್ಲಿ ಗ್ರಾಹಕರು ಅಭಿವೃದ್ಧಿಯ ಅನುಭವ ಪಡೆಯುವುದು ಸವಾಲೇ ಸರಿ. ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಸ್ಥಾಪಿತವಾದ ಬ್ರ್ಯಾಂಡ್‌ಗಳನ್ನು ನೋಡಲು ಪಯಣಿಸುವುದು ಈ ಸಂದರ್ಭದಲ್ಲಿ ಅಷ್ಟು ಸುಲಭವಲ್ಲ. ಆದ್ದರಿಂದ ಗ್ರಾಹಕರಿಗೆ ಕಂಪನಿಯ ಉತ್ಪನ್ನಗಳ ಬಗ್ಗೆ ಬಿ2ಬಿ ಅನುಭವ ಪಡೆಯುವುದು ಕಷ್ಟ. ಗ್ರಾಹಕರಲ್ಲಿ ಒಂದು ಉತ್ಪನ್ನದ ಬಗ್ಗೆ ನಂಬಲರ್ಹ ವಿಶ್ವಾಸ ಮೂಡಿಸಲು ಕಂಪನಿಗಳೂ ಹರ ಸಾಹಸ ಪಡುತ್ತಿವೆ. ಗ್ರಾಹಕರನ್ನು ಎಂಗೇಜ್ ಆಗಿಡಲು ಸಾಂಪ್ರಾದಾಯಿಕ ಪದ್ಧತಿ ಈ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ.  

ಹೊಸ ಮತ್ತು ನವೀನ ಪರಿಹಾರಗಳನ್ನು ಕಂಡು ಕೊಳ್ಳುವುದರಲ್ಲಿ ಎಲ್‌ಜಿ ಸದಾ ಮುಂದು. ನವೀನ ತಂತ್ರಜ್ಞಾನ ಬಳಸಿಕೊಂಡು, ಗ್ರಾಹಕರಿಗೆ ಅನುಕೂಲವಾಗುವಂಥ ವಾತಾವರಣ ಸೃಷ್ಟಿಸುವಲ್ಲಿ ಎಲ್‌ಜಿ ಯಾವಾಗಲೂ ಯತ್ನಿಸುತ್ತದೆ. ಅನುಭವಿ ಮಾರುಕಟ್ಟೆ ಉದ್ಯೋಗಿಗಳು ಗ್ರಾಹಕರಿಗೆ ಒಳ್ಳೇ ಅನುಭವ ನೀಡುವಂಥ ಕಾರ್ಯ ನಿರ್ವಹಿಸುವಲ್ಲಿ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ. ಉತ್ಪನ್ನಗಳ ಮೌಲ್ಯವನ್ನು ಗ್ರಾಹಕರಿಗೆ ವಿವರಿಸುವಲ್ಲಿ ಈ ಮಾರ್ಕೆಟಿಂಗ್ ತಡ ಸಹಕರಿಸುತ್ತದೆ. ಕೋವಿಡ್-19ರಿಂದ ಜಗತ್ತು ಸಹಜ ಸ್ಥಿತಿಗೆ ಮರಳುತ್ತಿದ್ದು, ಪಾಲದಾರರೊಂದಿಗೆ ಗ್ರಾಹಕರಿಗೆ ಅಗತ್ಯ ಪರಿಹಾರ ನೀಡಿ, ಬ್ಯುಸಿನೆಸ್ ಮುಂದುವರಿಸುವಲ್ಲಿ ಸಕ್ರಿಯವಾಗಿದೆ. ತನ್ನ ಸಾಂಪ್ರದಾಯಿಕ ಪದ್ಧತಿಯಿಂದ ಹೊರ ಬಂದು, ವಿಭಿನ್ನವಾಗಿ ಯೋಚಿಸಿದ ಎಲ್‌ಜಿ, ಬಿ2ಬಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. 

ನೋಯ್ಡಾದಲ್ಲಿರುವ ಕಾರ್ಪೋರೇಟ್ ಕಚೇರಿಯಲ್ಲಿ ಎಲ್‌ಜಿ ಸುಮಾರು 14300 ಚದುರಡಿ ಜಾಗದಲ್ಲಿ ಬಿ2ಬಿ ನಾವೀನ್ಯ ಗ್ಯಾಲರಿ ಸೃಷ್ಟಿಸಿದೆ. ಕಂಪನಿಯ ಪ್ರತಿಯೊಂದೂ ಉತ್ಪನ್ನಗಳ ಅನುಭವ ಪಡೆಯಲು, ಪರೀಕ್ಷಿಸಲು ಹಾಗೂ ಸರ್ವಿಸ್‌ಗಾಗಿ ಇರುವ ಪ್ರದೇಶ. ಇಲ್ಲಿ ಬಿ2ಬಿ ಮತ್ತು ಬಿ2ಬಿ2ಸಿ ಉತ್ಪನ್ನಗಳು ಲಭ್ಯ. ಪ್ರೊಡಕ್ಟ್ ತಯಾರಿಸಿದ ಹಾಗೂ ಪಾಲದಾರರೊಂದಿಗೆ ನೇರವಾಗಿ ವ್ಯವಹರಿಸಲು ಈ ಗ್ಯಾಲರಿಯಲ್ಲಿ ಅವಕಾಶ ಇರಲಿದೆ. ಕಾರ್ಪೋರೇಟ್, ಶಿಕ್ಷಣ, ಚಿಲ್ಲರೆ ವ್ಯಾಪಾರ, ಹೊಟೇಲ್ ಉದ್ಯಮ, ಸಾರಿಗೆ, ಸರಕಾರ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರ, ಗೃಹಪಯೋಗಿ ಉತ್ಪನ್ನಗಳನ್ನು ಬಳಸುವ ಗ್ರಾಹಕರಿಗೆ ಅಗತ್ಯ ಇರುವ ಅನುಭವವನ್ನು ಒದಗಿಸಲು ಕಂಪನಿ ಮುಂದಾಗಿದೆ. 

ಪ್ರವೇಶ ದ್ವಾರ, ಮಾಹಿತಿ ಡಿಸ್ಪ್ಲೇ ಝೋನ್ಸ್, ಸಿಸ್ಟಂ ಏರ್ ಕಂಡೀಷನರ್ ಝೋನ್, ಐಟಿ ಝೋನ್, ಬಿ2ಬಿ2ಸಿ ಝೋನ್ ಮತ್ತು ಮುಕ್ತ ಸಂಹವನ ಪ್ರದೇಶಗಳಾಗಿ ಈ ಗ್ಯಾಲರಿಯನ್ನು ವಿಭಾಗಿಸಲಾಗಿದೆ. 

ಪ್ರವೇಶ ದ್ವಾರದಲ್ಲಿಯೇ ಅತಿಥಿಗಳನನ್ನು ಎಲ್‌ಜಿ ಉತ್ಪನ್ನಗಳಾದ ರೆಫ್ರಿಜರೇಟರ್, ಒಎಲ್‌ಇಡಿ ಡಿಸ್ಪ್ಲೇ ಮತ್ತು ವಾಷಿಂಗ್‌ ಮಷಿನ್‌ನಂಥ ಉತ್ಪನ್ನಗಳು ಸ್ವಾಗತಿಸುತ್ತವೆ. ಅತ್ಯುತ್ತಮ ತಂತ್ರಜ್ಞಾನ ಹಾಗೂ ಜಾಗತಿಕ ಮಟ್ಟದ ಗುಣಮಟ್ಟೊಂದಿಗೆ ತಯಾರಿಸಿದ ಈ ಉತ್ಪನ್ನಗಳು ಗ್ರಾಹಕರ ಮನ ಗಲ್ಲುವಲ್ಲಿ ಅನುಮಾನವೇ ಇಲ್ಲ. ಈ ಕಾಲಮಾನದ ಗ್ರಾಹಕರು ನಿರೀಕ್ಷಿಸುವ ಎಲ್ಲ ಬೇಡಿಕೆಗಳನ್ನು ಎಲ್‌ಜಿ ಉತ್ಪನ್ನಗಳು ಈಡೇರಿಸುತ್ತವೆ ಎಂಬುದರಲ್ಲಿ ಅನುಮಾನವೇ ಇಲ್ಲ. 

ಎಲ್‌ಇಝಿ ಸೈನೇಜ್, ಡಿಜಿಟಲ್ ಸೈನೇಜ್ ಮತ್ತು ಕಮರ್ಷಿಯಲ್ ಟಿವಿ ಸೊಲ್ಯೂಷನ್ಸ್‌ನೊಂದಿಗೆ ಇನ್ಫಾರ್ಮೇಷನ್ ಡಿಸ್ಪ್ಲೇ ಝೋನ್ ಗ್ರಾಹಕರನ್ನು ಸ್ವಾಗತಿಸುತ್ತದೆ. ಇವು ವಿವಿಧ ವ್ಯವಹಾರಗಳಿಗೆ ಸಂಬಂಧಿಸಿದ ಉತ್ಪನ್ನಗಳಾಗಿವೆ. 

LG B2B innovation gallery set up in coportate office Noida


ಎಲ್ಇಡಿ ಸೈನೇಜ್ ಮೂಲಕ ಎಲ್‌ಜಿ ತನ್ನ ಪ್ರಮುಖ ಪ್ರದರ್ಶನ (ಡಿಸ್ಪ್ಲೇ) ತಂತ್ರಜ್ಞಾನವನ್ನು ವಿಸ್ತರಿಸಿ ಅಭೂತಪೂರ್ವ ದೃಶ್ಯ ಕಾರ್ಯಕ್ಷಮತೆ ಹಾಗೂ ಸ್ಥಿರತೆಯನ್ನು ಹೊಂದಿದ ಹೆಗ್ಗಳಿಕೆ ಪಡೆದಿದೆ. ಆಲ್ಫಾ 7 ಇಂಟೆಲಿಜೆಂಟ್ ಪ್ರೊಸೆಸರ್, ಎಚ್‌ಡಿಆರ್ ಪ್ರೊಸೆಸರ್, ಎಚ್‌ಡಿಆರ್ 10 ಪ್ರೋನಿಂದಾಗಿ ಎಲ್‌ಜಿ ಎಲ್ಇಡಿಯನ್ನು ವಿಶಾಲ ಪರದೆ ಮೇಲೆ ವೀಕ್ಷಿಸುವ ಸಲುವಾಗಿ ಕಲರ್ ಡಿಸ್ಟೋರೇಷನ್ ಅನ್ನೂ ಕಡಿಮೆ ಮಾಡಲಾಗಿದೆ. ಸಭಾ ಕೊಠಡಿಗಳು, ಬೋರ್ಡ್ ರೂಂಗಳು, ಲಾಬಿ, ಸಭಾಂಗಣ, ಹೋಂ ಸಿನಿಮಾ ಥಿಯೇಟರ್, ಕಂಟ್ರೋಲ್ ರೂಂ ಸೇರಿ ಇನ್ನೂ ಹಲವು ಸೌಲಭ್ಯಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಒಳಾಂಗಣ 1.5 / 2.0/2.5 ಪಿಕ್ಸೆಲ್ ಪಿಚ್ ಎಲ್ಇಡಿಯನ್ನು ಈ ವಲಯದಲ್ಲಿ ನೋಡಬಹುದು. 

ಎಲ್‌ಜಿ ಎಲ್ಇಡಿಯು ಬ್ಲಾಕ್-ಎಲ್ಎಸ್ಎಎ ಸರಣಿಯ ಬ್ಲಾಕ್-ಅಸೆಂಬ್ಲಿ ವಿನ್ಯಾಸ ಹೊಂದಿದೆ. ಈ ಮೂಲಕ ಹೆಚ್ಚುವರಿ ಕೇಬಲ್‌ಗಳನ್ನು ಬಳಸದೇ ವಿದ್ಯುತ್ ಮತ್ತು ಸಿಗ್ನಲ್ ಅನ್ನು ಕ್ಯಾಬಿನೆಟ್‌ಗೆ ಸಂಕೇತಗಳ ಮೂಲಕ ರವಾನಿಸುತ್ತಿದೆ. ಇದರಿಂದ ಸಮಯ, ವೆಚ್ಚ ಉಳಿಯುವುದಲ್ಲದೆ, ಯಾವುದೇ ತೊಡಕಿದೆಲ್ಲದೆಯೇ 4ಕೆ ಯುಹೆಚ್ಡಿ ರೆಸಲ್ಯೂಶನ್ ಮತ್ತು 16:9  ಅನುಪಾತದಲ್ಲಿ ಸಿಗ್ನಲ್ ಅನ್ನು ತಲುಪಿಸುತ್ತದೆ.

LG MAGNIT  (ಎಲ್‌ಜಿ ಮ್ಯಾಗ್ನಿಟ್) – ಹೊಸ ಮೈಕ್ರೋ ಎಲ್ಇಡಿ ಸೈನೇಜ್ ಸೊಲ್ಯೂಷನ್ಸ್ ಎಲ್‌ಜಿ ಸ್ವಾಮ್ಯದ ಬ್ಲ್ಯಾಕ್ ಕೋಡಿಂಗ್ ಡಿಸ್ಪ್ಲೇ ತಂತ್ರಜ್ಞಾನ ಹೊಂದಿದ್ದು, ಅತ್ಯುತ್ತಮ ವೀಕ್ಷಣಾ ಗುಣಮಟ್ಟದೊಂದಿಗೆ ಸುದೀರ್ಘ ಕಾಲ ಬಾಳಿಕೆ ಬರುತ್ತದೆ. ಮೈಕ್ರೋ ಎಲ್ಇಡಿ ಸೆಲ್ಫ್-ಎಮಿಸ್ಸೀವ್ ಮೈಕ್ರೋಮೀಟರ್ ಹಾಗೂ ಸ್ಕೇಲ್ ಪಿಕ್ಸಲ್ ಅನ್ನು ಸಬ್ ಸ್ಟ್ರೇಟ್ ಬೋರ್ಡ್‌ಗೆ ನೇರವಾಗಿ ಅಳವಡಿಸಲಾಗಿರುತ್ತದೆ. ಏಕೆಂದರೆ, ತೀಕ್ಷ್ಣ ದೃಶ್ಯಾವಳಿಗಳ ಜೊತೆಗೆ ಸುಧಾರಿತ ಕಾಂಟ್ರಾಸ್ಟ್ ಹಾಗೂ  ವಿಶಾಲ ಕೋನದಲ್ಲಿ ನೋಡುವ ಆಯಾಮವನ್ನು ಇದು ಒದಗಿಸುತ್ತದೆ. 

ಎಚ್‌ಡಿಆರ್ 10ಪ್ರೋ ಮತ್ತು ಅತ್ಯುದ್ಬುತ ಮೇಲ್ಮೈ, ಸೌಂಡ್ ಕಪಲ್ಡ್‌ನಿಂದ “130 ಆಲ್ – ಇನ್ – ಒನ್ ಪ್ರೀಮಿಯಂ” ಅನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಅಲ್ಲದೇ, ವಿವಿಧ AV ಕಂಟ್ರೋಲ್ ಸಿಸ್ಟಮ್ ಜೊತೆಗೆ ಬೇಕಾದಂತೆ ಅಳವಡಿಸಿಕೊಳ್ಳಬಹುದಾದ ಈ ಸಾಧನವನ್ನು ಕಾರ್ಪೋರೇಟ್ ಬೋರ್ಡ್ ರೂಮ್ಸ್ ಮತ್ತು ಮೀಟಿಂಗ್ ರೂಮುಗಳಿಗೆ ಹೇಳಿ ಮಾಡಿಸಿದಂತಿದೆ. 

ಇಂಟರ್ಯಾಕ್ಟಿವ್ ಡಿಜಿಟಲ್ ಬೋರ್ಡ್, ಒಎಲ್ಇಡಿ ಶ್ರೇಣಿ (ಪಾರದರ್ಶಕ, ಕರ್ವ್ಡ್, ಹೊಟೇಲ್ ಟಿವಿ, ವಾಲ್ ಪೇಪರ್ ಸೈನೇಜ್), ದೊಡ್ಡ ಸ್ವರೂಪದ ಡಿಸ್ಪ್ಲೇ, ಸೂಪರ್ ನ್ಯಾರೋ ಈವನ್ ಬೇಸಲ್ ವಿಡಿಯೋ ವಾಲ್, ಹೈ-ಬ್ರೈಟ್ನೆಸ್ ಹೊರಾಂಗಣ ಮತ್ತು 88 ಅಲ್ಟ್ರಾ ಸ್ಟ್ರೆಚ್ ಸೈನೇಜ್ ಸೇರಿದಂತೆ ಇನ್ನಿತರೆ ಪ್ರಮುಖ ಉತ್ಪನ್ನಗಳು ಡಿಸ್ಪೇನಲ್ಲಿರೋ ಪ್ರಮುಖ ಆಕರ್ಷಣೆಗಳಾಗಿವೆ.

'ಎಲ್‌ಜಿ ಕನೆಕ್ಟರ್ ಕೇರ್' ಅನ್ನು ಸಹ ಈ ಗ್ಯಾಲರಿಯಲ್ಲಿದ್ದು, ಗ್ರಾಹಕ ಸಂಬಂಧಿ ಸ್ಥಳಗಳಲ್ಲಿ ಸ್ಥಾಪಿಸಲಾದ ಸಂಕೇತ ಪ್ರದರ್ಶನಗಳ ಕಾರ್ಯಾಚರಣೆಯನ್ನು ದೂರದಿಂದಲೇ ನಿರ್ವಹಿಸಲು ಕ್ಲೌಡ್ ಸರ್ವಿಸ್ ಸೌಲಭ್ಯವಿದೆ. ಎಲ್‌ಜಿ ಸೇವಾ ತಂಡವು ಎಲ್ಲ ಸಮಯದಲ್ಲೂ ಮೇಲ್ವಿಚಾರಣೆ ನಡೆಸಲಿದ್ದು, ಈ ಮೂಲಕ ದೋಷ ಪತ್ತೆ ಮತ್ತು ರಿಮೋಟ್ ಕಂಟ್ರೋಲ್ ಸೇವೆಗಳನ್ನು ನೀಡುತ್ತದೆ.

ಬದಲಾಗುತ್ತಿರುವ ಜಗತ್ತಿಗೆ ಆರೋಗ್ಯಕರ ವಾತಾವರಣ ಕಲ್ಪಿಸಲು ಎಲ್‌ಜಿ ಬದ್ಧವಾಗಿದ್ದು, ತನ್ನ ಉತ್ಪನ್ನಗಳಲ್ಲಿ ಕಲಾತ್ಮಕ ವಿನ್ಯಾಸ, ಸುಸ್ಥಿರ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿದೆ. ಈ ತಳಹದಿಯಲ್ಲಿ ಸಿಸ್ಟಮ್ ಏರ್ ಕಂಡೀಷನರ್ ವಲಯವನ್ನು ರಚಿಸಲಾಗಿದೆ. 

LG B2B innovation gallery set up in coportate office Noida

ಈ ತತ್ವವನ್ನು ಗಮದಲ್ಲಿಟ್ಟುಕೊಂಡೇ ಸಿಸ್ಟಮ್ ಏರ್ ಕಂಡೀಷನ್ ಝೋನನ್ನು ರಚಿಸಲಾಗಿದೆ. ಇದು ಪ್ರಮುಖ ನವೀನ ಉತ್ಪನ್ನಗಳಾದ ಸ್ಲೇಕೆಸ್ಟ್ 1-ವೇ ಮತ್ತು 4-ವೇ ಕ್ಯಾಸೆಟ್ಟ್‌ಗಳನ್ನು ವಿಶಿಷ್ಟ ಮತ್ತು ಪರಿಣಾಮಕಾರಿ 5 ಹಂತದ ಏರ್ ಫಿಲ್ಟ್ರೇಶನ್ ಕಿಟ್ ಅನ್ನು ಒಳಗೊಂಡಿದೆ. ಇದು ಧೂಳಿನ ಶೇ. 99ರಷ್ಟು ಕಣಗಳನ್ನು ತೊಡೆದು ಹಾಕುವುದಲ್ಲದೇ, ಬ್ಯಾಕ್ಟೀರಿಯಾ, ದುರ್ವಾಸನೆ,  ಜೊತೆಗೆ ತುಂಬಾ ಸಣ್ಣಗಿನ ಧೂಳಿನ ಕಣಗಳನ್ನೂ ತೆಗೆದು ಹಾಕುತ್ತದೆ. ಈ ಫೀಚರ್ ಆರೋಗ್ಯಕರ ವಾತಾವರಣವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ 4-ವೇ ಕ್ಯಾಸೆಟ್ ವಿಶೇಷ ಹಾಗೂ ಪರಿಣಾಮಕಾರಿಯಾದ ಮಾನವ ಪತ್ತೆ ಸಂವೇದಕವನ್ನು ಹೊಂದಿದೆ. ಇದು ಆ ಕೋಣೆಯಲ್ಲಿ ಎಷ್ಟು ಜನರಿದ್ದಾರೆಂಬುದನ್ನು ಕಂಡು ಕೊಂಡು, ಅವರಿಗೂ ತಲುಪುವಂತೆ ಗಾಳಿಯ ಹರಿವನ್ನು ನಿರ್ವಹಿಸುತ್ತದೆ. ಈ ಕ್ಯಾಸೆಟ್ಟ್‌ಗಳು ತೆಳುವಾಗಿದ್ದು, ಉತ್ಕೃಷ್ಟ ಗುಣಮಟ್ಟದೊಂದಿಗೆ ವೃತ್ತಾಕಾರವಾಗಿದೆ. ಚಿಕ್ಕದಾಗಿ, ಚೊಕ್ಕವಾಗಿರುವ ಈ ಏಸಿ 360 ಡಿಗ್ರಿಯಲ್ಲಿಯೂ ಗಾಳಿ ಆಡುವಂತೆ ಮಾಡುತ್ತದೆ. ಬೇರೆ ಎಲ್ಲ ಉತ್ಪನ್ನಗಳಿಗೆ ಹೋಲಿಸಿದಲ್ಲಿ ಇದು ಶೇ.30ರಷ್ಟು ಹೆಚ್ಚಿಗೆ ಗಾಳಿ ಆಡುವಂತೆ ಮಾಡುತ್ತದೆ. ಈ ವಿನ್ಯಾಸಕ್ಕೆ 1-ವೇ ಕ್ಯಾಸೆಟ್ ಜೊತೆಗೆ ರೆಡ್ ಡಾಟ್ ಡಿಸೈನ್ ಪ್ರಶಸ್ತಿ.ಯ ಗರಿ ಮುಡಿಗೇರಿದೆ. ಎಲ್‌ಜಿಯ ಮತ್ತೊಂದು ಸುಸ್ಥಿರ ಆವಿಷ್ಕಾರವೆಂದರೆ ಹೈಡ್ರೋಕಿಟ್ ಆಗಿದೆ. ಇದು ಸಮರ್ಪಕ ಬಿಸಿ ನೀರನ್ನು ಒದಗಿಸಲಿದ್ದು, ಸ್ನಾನಕ್ಕೆ, ಬಿಸಿನೀರಿನ ಪೂಲ್‌ಗಳು, ಸ್ಪಾಗಳು ಮತ್ತು ಆಸ್ಪತ್ರೆಗಳಿಗೆ ಹೇಳಿ ಮಾಡಿಸಿದಂತಿವೆ. LG BECON ಕಟ್ಟಡ ನಿಯಂತ್ರಣ ಮತ್ತು ಶಕ್ತಿ ನಿರ್ವಹಣೆಯನ್ನು ಮಾಡುತ್ತದೆ. ಇದು HVAC ಸಿಸ್ಟಮ್ ಮೇಲ್ವಿಚಾರಣೆಯನ್ನು ಎಲ್ಲ ಸಮಯದಲ್ಲೂ ನಿರ್ವಹಿಸುತ್ತದೆ. ಯಾವ ಗಾತ್ರದಲ್ಲಿ ಬೇಕಾದಲೂ ಲಭ್ಯವಿರುವ ಈ ಉತ್ಪನ್ನ, ಯಾರಿಗೆ ಬೇಕಾದರೂ ಅಗತ್ಯವಿರುವ ತಂಪು ತಂಪಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಅನುಮಾನವೇ ಇಲ್ಲ.  

ಎಲ್‌ಜಿಯ ಅತ್ಯಂತ ಉತ್ಕೃಷ್ಟ ಉತ್ಪನ್ನಗಳಲ್ಲಿ ಒಂದಾದ ಮಲ್ಟಿ V 5 ಉತ್ಪನ್ನವು ಭಾರತದಲ್ಲಿ ಈಗಷ್ಟೇ ಬಿಡುಗಡೆಯಾಗಿದೆ. ಇದು ವಿಶಿಷ್ಠ ಫೀಚರ್‌ಗಳನ್ನು ಹೊಂದಿದ್ದು, ಎರಡು ಸೆನ್ಸಿಂಗ್‌ಗಳನ್ನು ಒಳಗೊಂಡಿದೆ. ಇದು ಸಿಸ್ಟಮ್ ದಕ್ಷತೆಯನ್ನು ಸುಧಾರಿಸುವುದಲ್ಲದೆ, ಇದರಲ್ಲಿ ಶಕ್ತಿಯುತ  ಇನ್ವರ್ಟರ್ ಕಂಪ್ರೆಸರ್ ಇದೆ. ಓಷನ್ ಬ್ಲ್ಯಾಕ್ ಫಿನ್ ತಂತ್ರಜ್ಞಾನವು ಸುದೀರ್ಘ ಕಾರ್ಯಕ್ಷಮತೆಯನ್ನು ಖಡಿತಪಡಿಸುತ್ತದೆ. ಇದೊಂದು ಜಾಗತಿಕ ಉತ್ಪನ್ನವಾಗಿದ್ದು, ಭಾರತಕ್ಕೆ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ. 


 

LG B2B innovation gallery set up in coportate office Noida

ವೃತ್ತಿಪರ ಮಾನಿಟರ್‌ಗಳಲ್ಲಿ ಎಲ್‌ಜಿಯ ನವೀನ ತಂತ್ರಜ್ಞಾನವನ್ನು ಐಟಿ ಸೊಲ್ಯೂಷನ್ ವಲಯದಲ್ಲಿ ಕಾಣಬಹುದು. ಸೂಪರ್ ಡಿಸೈನ್ ಮತ್ತು ಅತ್ಯಾಧುನಿಕ ಕಾರ್ಯಕ್ಷಮತೆಯೊಂದಿಗೆ ಅಲ್ಟ್ರಾವೈಡ್ ಮತ್ತು ಅಲ್ಟ್ರಾಫೈನ್ ಡಿಸ್ಪ್ಲೇಗಳು ಇಲ್ಲಿವೆ. ಮೆಡಿಕಲ್ ಗ್ರೇಡ್ ಮಾನಿಟರ್‌ಗಳನ್ನು ನಿಖರ ರೋಗ ಪತ್ತೆ ಮತ್ತು ಹೊಂದಿಕೊಳ್ಳುವ ಬಣ್ಣ ಬಳಕೆಯೊಂದಿಗೆ ಕ್ಲೌಡ್ ಡಿಸೈನ್ ಜೊತೆಗೆ ವರ್ಧಿತ ಭದ್ರತೆ ಹಾಗೂ ಕಡಿಮೆ ವೆಚ್ಚದಲ್ಲಿ  ಲಭ್ಯವಿದೆ. ಹಗುರ ಲ್ಯಾಪ್‌ಟಾಪ್, ಉತ್ತಮ ಕಾರ್ಯಕ್ಷಮತೆ ಜೊತೆಗೆ ಪೋರ್ಟಬಿಲಿಟಿ ಹಾಗೂ ವಿವಿಧ ರೀತಿಯ ವ್ಯವಹಾರಗಳಿಗೆ ಅನುಕೂಲವಾಗುವಂತೆ 4ಕೆ ಪ್ರೊಜೆಕ್ಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 

ವಿಶ್ವದ ಮೊದಲ ಗೇಮ್ ಚೇಂಜರ್ ಜಾಗತಿಕ ತಂತ್ರಜ್ಞಾನದೊಂದಿಗೆ ವರ್ಚುಯಲ್ ಗೇಮಿಂಗ್‌ನಲ್ಲಿ ಸಾಟಿಯಿಲ್ಲದ ನೈಜತೆಗಾಗಿ 4ಕೆ ನ್ಯಾನೋ ಐಪಿಎಸ್ 1 ಎಂಎಸ್ ಅಲ್ಟ್ರಾಗಿಯರ್ ಮಾನಿಟರ್‌ವುಳ್ಳ ಗೇಮಿಂಗ್ ವಲಯವೂ ಇಲ್ಲಿದೆ.  


 

LG B2B innovation gallery set up in coportate office Noida


ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಿ2ಬಿ2ಸಿ ವಲಯವು ಎಲ್‌ಜಿಯ ಗೃಹೋಪಯೋಗಿ ಉಪಕರಣಗಳು ಮತ್ತು ಅಡುಗೆ ಕೋಣೆಗೆ ಸಂಬಂಧಪಟ್ಟ ವಸ್ತುಗಳನ್ನೊಳಗೊಂಡಿದೆ. ಎಲ್‌ಜಿ ಥಿಂಕ್ಯೂ ಶಕ್ತಿಯುಳ್ಳ ಇನ್ಸ್ಟಾ ವ್ಯೂ ಡೋರ್ – ಇನ್-ಡೋರ್ ರೆಫ್ರಿಜರೇಟರ್ಸ್, ವಾಟರ್ ಪ್ಯೂರಿಫೈಯರ್, ಏರ್ ಪ್ಯೂರಿಫೈಯರ್, ಡ್ಯುಯಲ್ ಇನ್ವರ್ಟರ್ ಕಂಪ್ರೆಸ್ಸರ್, ವಾಷರ್, ಡ್ರೈಯರ್ ಇತ್ಯಾದಿಗಳು ಇಲ್ಲಿವೆ. ಒಎಲ್ಇಡಿ ಮತ್ತು ನ್ಯಾನೋಸೆಲ್ ಟಿವಿಗಳು ಹೋಂ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಪ್ರಮುಖವಾಗಿವೆ. ಎಕ್ಸ್-ಬೂಮ್ ಆಡಿಯೋ ಶ್ರೇಣಿ ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಡ್ಯುಯಲ್ ಸ್ಕ್ರೀನ್ ಮೊಬೈಲ್ ಫೋನ್‌ಗಳನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ. 
ಬ್ಯಸಿನೆಸ್ ಮೀಟಿಂಗ್‌ಗಳಿಗೆ, ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಅರ್ಥೈಸಿಕೊಳ್ಳಲು, ಉತ್ಪನ್ನಗಳ ತಾಂತ್ರಿಕ ತರಬೇತಿಗೆ ಮುಕ್ತ ಸಂಹವನ ಪ್ರದೇಶವನ್ನು ಸಂದರ್ಶಕರಿಗಾಗಿ ಮೀಸಲಿಡಲಾಗಿದೆ. 

ಒಟ್ಟಿನಲ್ಲಿ ಇಲ್ಲಿ ಗ್ರಾಹಕರಿಗೆ ಸ್ಪರ್ಶದ ಅನುಭವ ನೀಡಲಾಗುತತ್ದೆ.  ಸೃಷ್ಟಿಸುತ್ತದೆ. ಈ ಮೂಲಕ ಎಲ್‌ಜಿಯ ಬಿ2ಬಿ ನವೀನ ಗ್ಯಾಲರಿಯು ಗ್ರಾಹಕರು ಮತ್ತು ಪಾಲುದಾರರೊಂದಿಗಿನ ದೀರ್ಘಕಾಲದ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ವಿಶ್ವಾಸವನ್ನು ಹೊಂದಿದೆ.

ಇದು ಪ್ರಾಯೋಜಿತ ವರದಿ

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

Follow Us:
Download App:
  • android
  • ios