ಇನ್‌ಸ್ಟಾಗ್ರಾಂ ಬಳಕೆದಾರರೇ ಗಮನಿಸಿ, ನೀವು ಇನ್‌ಸ್ಟಾದಲ್ಲಿ ರೀಲ್ಸ್ ವಿಡಿಯೋ ಮಾಡುತ್ತೀರಾ? ಇದೀಗ ರೀಲ್ಸ್ ವಿಡಿಯೋಗಾಗಿ ಇನ್‌ಸ್ಟಾಗ್ರಾಂ ಪ್ರತ್ಯೇಕ ಆ್ಯಪ್ ಲಾಂಚ್ ಮಾಡುತ್ತಿದೆ. 

ನವದೆಹಲಿ(ಫೆ.28) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವಿಡಿಯೋ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇನ್‌ಸ್ಟಾ ರೀಲ್ಸ್ ಮೂಲಕವೇ ಹಲವರು ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ, ಸೆಲೆಬ್ರೆಟಿಯಾಗಿ ಮಿಂಚಿದ್ದಾರೆ. ಹಲವರು ಇದೇ ಇನ್‌ಸ್ಟಾ ರೀಲ್ಸ್ ಮೂಲಕವೇ ಆದಾಯವನ್ನೂ ಗಳಿಸುತ್ತಿದ್ದಾರೆ. ಇದೀಗ ಬಳಕೆದಾರರಿಗೆ ಇನ್‌ಸ್ಟಾಗ್ರಾಂ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ರೀಲ್ಸ್ ವಿಡಿಯೋಗಾಗಿ ಇನ್‌ಸ್ಟಾಗ್ರಾಂ ಪ್ರತ್ಯೇಕ ಆ್ಯಪ್ ಲಾಂಚ್ ಮಾಡಲು ಸಜ್ಜಾಗಿದೆ. ಇದು ಇನ್‌ಸ್ಟಾಗ್ರಾಂ ರೀಲ್ಸ್ ಆ್ಯಪ್. ಇಲ್ಲಿ ರೀಲ್ಸ್‌ಗಳ ಅಬ್ಬರ ಇರಲಿದೆ.

ಇನ್‌ಸ್ಟಾಗ್ರಾಂನಲ್ಲಿ ಫೋಟೋ, ವಿಡಿಯೋ ಸೇರಿದಂತೆ ಹಲವು ರೀತಿಯಲ್ಲಿ ಬಳಕೆದಾರರು ಪೋಸ್ಟ್ ಮಾಡಲು ಸಾಧ್ಯವಿದೆ. ಈ ಪೈಕಿ ಇನ್‌ಸ್ಟಾಗ್ರಾಂ ರೀಲ್ಸ್ ಅತ್ಯಂತ ಜನಪ್ರಿಯವಾಗಿದೆ. ಇದೀಗ ರೀಲ್ಸ್‌ಗಾಗಿ ಇನ್‌ಸ್ಟಾಗ್ರಾಂ ಹೊಸ ಆ್ಯಪ್ ಬಿಡುಗಡೆ ಮಾಡುತ್ತಿದೆ. ಇದು ಸಂಪೂರ್ಣ ರೀಲ್ಸ್ ವಿಡಿಯೋ ಮಾತ್ರ. ಪ್ರಮುಖವಾಗಿ ಅಮೆರಿಕದಲ್ಲಿ ಚೀನಾ ಮೂಲದ ಟಿಕ್‌ಟಾಕ್‌ನಿಂದ ಇನ್‌ಸ್ಟಾಗ್ರಾಂ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಇನ್‌ಸ್ಟಾಗ್ರಾಂ ರೀಲ್ಸ್ ಆ್ಯಪ್ ಶೀಘ್ರದಲ್ಲೇ ಲಾಂಚ್ ಮಾಡುತ್ತಿದೆ.

ಇನ್‌ಸ್ಟಾದಲ್ಲಿ ನಿಮ್ ಹುಡುಗಿ ಪೋಸ್ಟ್ ಸೇವ್ ಮಾಡಿದ್ದೀರಾ? ಹೆಸರು ಗೊತ್ತಾಗೋ ದಿನ ದೂರವಿಲ್ಲ!

ಯುಎಸ್‌ನಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ನಡುವಿನ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೆಟಾ ಹೊಸ ಆ್ಯಪ್ ಬಗ್ಗೆ ಚಿಂತಿಸುತ್ತಿದೆ. ರೀಲ್ಸ್‌ಗಾಗಿ ವಿಶೇಷ ಆ್ಯಪ್ ಬಿಡುಗಡೆ ಮಾಡಲು ಇನ್‌ಸ್ಟಾ ಪ್ರಯತ್ನಿಸುತ್ತಿದೆ ಎಂದು ವಿವಿಧ ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಮೆಟಾ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೂ, ಹೊಸ ಆ್ಯಪ್‌ನ ಬಿಡುಗಡೆಯ ಬಗ್ಗೆ ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಟಿಕ್‌ಟಾಕ್‌ನೊಂದಿಗೆ ಸ್ಪರ್ಧಿಸಲು 2018ರಲ್ಲಿ ಮೆಟಾ ಲಸ್ಸೊ ಎಂಬ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತ್ತು, ಆದರೆ ನಂತರ ಅದನ್ನು ಸ್ಥಗಿತಗೊಳಿಸಲಾಯಿತು. 

ಅಮೆರಿಕದಲ್ಲಿ ಚೀನೀ ಶಾರ್ಟ್ ವೀಡಿಯೊ ಆ್ಯಪ್ ಟಿಕ್‌ಟಾಕ್‌ನ ಭವಿಷ್ಯ ಇನ್ನೂ ಅನಿಶ್ಚಿತವಾಗಿರುವ ನಡುವೆಯೇ ಮೆಟಾದ ಈ ಹೊಸ ನಡೆ ಮಹತ್ವ ಪಡೆದುಕೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಟಿಕ್‌ಟಾಕ್‌ನ ನಿಷೇಧವನ್ನು 75 ದಿನಗಳವರೆಗೆ ತಡೆಹಿಡಿಯಲಾಗಿತ್ತು. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಜೋ ಬೈಡನ್ ಸರ್ಕಾರ ಟಿಕ್‌ಟಾಕ್ ಅನ್ನು ಅಮೆರಿಕದಲ್ಲಿ ನಿಷೇಧಿಸಲು ನಿರ್ಧರಿಸಿತು. ಈ ನಿಷೇಧವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

75 ದಿನಗಳ ಕಾಲಾವಕಾಶದ ನಂತರ ಟಿಕ್‌ಟಾಕ್‌ನ ಅಮೆರಿಕನ್ ವ್ಯವಹಾರವನ್ನು ವಶಪಡಿಸಿಕೊಳ್ಳಲು ಎಲೋನ್ ಮಸ್ಕ್ ಸೇರಿದಂತೆ ಹಲವು ಯುಎಸ್ ಟೆಕ್ ದೈತ್ಯರು ಪ್ರಯತ್ನಿಸುತ್ತಿದ್ದಾರೆ. ಮಾತುಕತೆಗಳು ಫಲಪ್ರದವಾದರೆ, ಟಿಕ್‌ಟಾಕ್‌ನ ಮಾಲೀಕರಾದ ಬೈಟ್‌ಡಾನ್ಸ್ ಮತ್ತು ಪಾಲುದಾರರಾಗುವ ಯುಎಸ್ ಕಂಪನಿಗೆ ಟಿಕ್‌ಟಾಕ್‌ನ ಯುಎಸ್ ವ್ಯವಹಾರದಲ್ಲಿ ತಲಾ 50 ಪ್ರತಿಶತದಷ್ಟು ಮಾಲೀಕತ್ವ ಇರುತ್ತದೆ ಎಂದು ಹೇಳಲಾಗುತ್ತಿದೆ. 

ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಕೂಡುಗೆ, ನಿಮ್ಮ ಫೋಟೋವನ್ನೇ ಸ್ಟಿಕ್ಕರ್ ಆಗಿ ಪರಿವರ್ತಿಸುವ ಫೀಚರ್!