ಇನ್‌ಸ್ಟಾಗ್ರಾಂ ರೀಲ್ಸ್ ನೋಡುವಾಗ ಕೈಬೆರಳು ಪದೇ ಪದೇ ಸ್ವೈಪ್ ಮಾಡುತ್ತಲೇ ಇರಬೇಕು. ಮುಂದಿನ ರೀಲ್ಸ್ ನೋಡಲು ಸ್ವೈಪ್ ಮಾಡಲೇಬೇಕು. ಆದರೆ ಇನ್‌ಸ್ಟಾಗ್ರಾಂ ಇದೀಗ ಹೊಸ ಫೀಚರ್ಸ್ ಜಾರಿಗೆ ತರಲು ಮುಂದಾಗಿದೆ. ನೀವು ಮೊಬೈಲ್ ಬೆಡ್ ಮೇಲಿಟ್ಟು ಅರಾಮಾಗಿ ಮಲಗಿಕೊಂಡೆ ಎಲ್ಲಾ ರೀಲ್ಸ್ ನೋಡಬಹುದು.

ನವದೆಹಲಿ (ಜು.18) ಸೋಶಿಯಲ್ ಮೀಡಿಯಾಗಳು, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ಅಪ್‌ಡೇಟ್, ಹಲವು ಫೀಚರ್ಸ್ ನೀಡಿದೆ. ಕಾಲಕ್ಕೆ ತಕ್ಕಂತೆ ಮಹತ್ವದ ಬದಲಾವಣೆ ಕೂಡ ಮಾಡಿಕೊಂಡಿದೆ. ಸದ್ಯ ರೀಲ್ಸ್ ಜಮಾನ. ರೀಲ್ಸ್ ಅಪ್ಲೋಡ್ ಮಾಡುವವರ ಸಂಖ್ಯೆ ಒಂದೆಡೆಯಾದರೆ ರೀಲ್ಸ್ ನೋಡುವವರ ಸಂಖ್ಯೆ ದುಪ್ಪಟ್ಟಿದೆ. ಒಂದೊಂದು ರೀಲ್ಸ್ ನೋಡಲು ಸ್ವೈಪ್ ಮಾಡಲೇಬೇಕು. ಸ್ವೈಪ್ ಮಾಡಿದರೆ ಮಾತ್ರ ಮುಂದಿನ ರೀಲ್ಸ್ ನೋಡಲು ಸಾಧ್ಯವಾಗುತ್ತದೆ. ಇದೀಗ ಇನ್‌ಸ್ಟಾಗ್ರಾಂ ಹೊಸ ಆಟೋ ಸ್ಕ್ರಾಲ್ ಫೀಚರ್ ಜಾರಿಗೊಳಿಸುತ್ತಿದೆ.

ಆಟೋ ಸ್ಕ್ರಾಲ್ ಫೀಚರ್‌ನಿಂದ ರೀಲ್ಸ್ ವೀಕ್ಷಣೆ ಮತ್ತಷ್ಟು ಸುಲಭ

ರೀಲ್ಸ್ ನೋಡುತ್ತಾ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ಒಂದೆರೆಡು ರೀಲ್ಸ್ ಎಂದು ನೂರಾರು ರೀಲ್ಸ್ ನೋಡಿದ ಉದಾಹರಣಗಳೇ ಹೆಚ್ಚು. ಆದರೆ ಇನ್‌ಸ್ಟಾಗ್ರಾಂನಲ್ಲಿ ಎಷ್ಟು ರೀಲ್ಸ್ ನೋಡುತ್ತೀರೋ, ಅಷ್ಟು ಬಾರಿ ಸ್ವೈಪ್ ಮಾಡಬೇಕು. ಆದರೆ ಇನ್‌ಸ್ಟಾಗ್ರಾಂ ಶೀಘ್ರದಲ್ಲೇ ಆಟೋ ಸ್ಕ್ರಾಲ್ ಫೀಚರ್ ಜಾರಿಗೊಳಿಸುತ್ತಿದೆ. ಈ ಆಯ್ಕೆ ಕ್ಲಿಕ್ ಮಾಡಿದರೆ ಸಾಕು, ಮತ್ತೆ ರೀಲ್ಸ್ ನೋಡಲು ಪದೇ ಪದೇ ಸ್ವೈಪ್ ಮಾಡುವ ಅಗತ್ಯವಿಲ್ಲ. ಒಂದು ರೀಲ್ಸ್ ಪ್ಲೇ ಆದ ಬಳಿಕ ತನ್ನಷ್ಟಕ್ಕೆ ಮತ್ತೊಂದು ರೀಲ್ಸ್ ಪ್ಲೇ ಆಗಲಿದೆ. ಇದರಿಂದ ವೀಕ್ಷರು ಮೊಬೈಲ್ ಕೈಯಲ್ಲಿ ಹಿಡಿದುಕೊಳ್ಳಬೇಕಿಲ್ಲ. ಬೆಡ್‌ನಲ್ಲಿ ಅಥವಾ ಟೇಬಲ್ ಮೇಲೆ, ಎಲ್ಲೆ ಇಟ್ಟುಕೊಂಡು ರೀಲ್ಸ್ ನೋಡಬಹುದು.

ನಿಲ್ಲಿಸುವವರೆಗೆ ರೀಲ್ಸ್ ಪ್ಲೇ

ಆಟೋ ಸ್ಕ್ರಾಲ್ ಆಯ್ಕೆಯಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರು ಯಾವುದೇ ಕಸರತ್ತಿಲ್ಲದೆ, ಶ್ರಮ ಇಲ್ಲದೆ ರೀಲ್ಸ್ ನೋಡಬಹುದು. ಆಟೋ ಸ್ಕ್ರಾಲ್ ಆಯ್ಕೆ ಕ್ಲಿಕ್ ಮಾಡಿದರೆ ಸಾಕು, ಬಳಿಕ ನಿಲ್ಲಿಸುವವರೆಗೆ ಅಥವಾ ಆ್ಯಪ್ ಕ್ಲೋಸ್ ಮಾಡುವವರೆಗೆ ರೀಲ್ಸ್ ಪ್ಲೇ ಆಗುತ್ತಲೇ ಇರುತ್ತದೆ.

ಪ್ರಾಯೋಗಿಕ ಹಂತದಲ್ಲಿದೆ ಇನ್‌ಸ್ಟಾ ಆಟೋ ಸ್ಕ್ರಾಲ್ ಫೀಚರ್

ಸದ್ಯ ಪೈಲೆಟ್ ಪ್ರಾಜೆಕ್ಟ್ ಅಡಿಯಲ್ಲಿ ಈ ಫೀಚರ್ ಪ್ರಯೋಗ ನಡೆಯುತ್ತಿದೆ. ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಆಟೋ ಸ್ಕ್ರಾಲ್ ಫೀಚರ್ಸ್ ಲಭ್ಯವಾಗಲಿದೆ. ಕಳೆದ ಕೆಲ ತಿಂಗಳಿನಿಂದ ಇನ್‌ಸ್ಟಾಗ್ರಾಂ ಆಟೋಸ್ಕ್ರಾಲ್ ಫೀಚರ್ಸ್ ಟೆಸ್ಟಿಂಗ್ ನಡೆಯುತ್ತಿದೆ.

ಥರ್ಡ್ ಪಾರ್ಟಿ ಆಟೋ ಸ್ಕ್ರಾಲ್ ಆ್ಯಪ್

ಸದ್ಯ ಇನ್‌ಸ್ಟಾಗ್ರಾಂ ಆಟೋ ಸ್ಕ್ರಾಲ್ ಫೀಚರ್ಸ್ ಲಭ್ಯವಿಲ್ಲ. ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದೆ. ಆದರೆ ಹಲವು ಥರ್ಡ್ ಪಾರ್ಟಿ ಆ್ಯಪ್‌ಳು ಲಭ್ಯವಿದೆ. ಈ ಆ್ಯಪ್‌ಗಳು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಹಲವು ಆ್ಯಪ್‌ಗಳ ರೀಲ್ಸ್‌ಗಳನ್ನು ಆಟೋ ಮೂಡ್‌ಗೆ ಬದಲಾಸುತ್ತದೆ. ಥರ್ಡ್ ಪಾರ್ಟಿ ಆಟೋ ಸ್ಕ್ರಾಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮಾರ್ಗಸೂಚಿ ಪಾಲಿಸಬೇಕು. ಷರತ್ತು ಹಾಗು ನಿಮಯಕ್ಕೆ ಒಕೆ ಕೊಟ್ಟು ಇನ್‌ಸ್ಟಾಲ್ ಮಾಡಿಕೊಂಡರೆ ಸ್ವೈಪ್ ಮಾಡದೇ ರೀಲ್ಸ್ ವೀಕ್ಷಣೆ ಮಾಡಬಹುದು. ಆದರೆ ಈ ಥರ್ಡ್ ಪಾರ್ಟಿ ಆ್ಯಪ್ ಸುರಕ್ಷತೆ ಬಗ್ಗೆ, ನಿಮ್ಮ ಡೇಟಾ ಬಗ್ಗೆ ಎಚ್ಚರವಿರಲಿ.

View post on Instagram