ಭಾರತ ಸೇರಿ ವಿಶ್ವದೆಲ್ಲಡೆ ಇನ್‌ಸ್ಟಾಗ್ರಾಂ ಡೌನ್, ಬಳಕೆದಾರರಿಂದ ದೂರಿನ ಬೆನ್ನಲ್ಲೇ ಹರಿದಾಡುತ್ತಿದೆ ಮೀಮ್ಸ್!
ಸಾಮಾಜಿಕ ಮಾಧ್ಯಮಗಳ ಪೈಕಿ ಇನ್‌ಸ್ಟಾಗ್ರಾಂ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ಕಡೆಗಳಲ್ಲಿ ಇನ್‌ಸ್ಟಾಗ್ರಾಂ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಸಾಮಾಜಿಕ ತಾಣದಲ್ಲಿ ಮೀಮ್ಸ್ ಹರಿದಾಡುತ್ತಿದೆ.
ನವದೆಹಲಿ(ಜೂ.09): ಭಾರತ ಸೇರಿದಂತೆ ವಿಶ್ವದ ಬಹುತೇಕ ಭಾಗದಲ್ಲಿ ಇನ್‌ಸ್ಟಾಗ್ರಾಂ ಬಳಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹಲವು ಬಳಕೆದಾರರು ಇನ್‌ಸ್ಟಾಗ್ರಾಂ ಡೌನ್ ಆಗಿದೆ ಎಂದು ದೂರು ನೀಡಿದ್ದಾರೆ. ಹಲವರಿಗೆ ಇನ್‌ಸ್ಟಾ ಆ್ಯಪ್ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಡೌನ್ ಡಿಟೆಕ್ಟರ್. ಕಾಂ ಕೂಡ ಇನ್‌ಸ್ಟಾಗ್ರಾಂ ಡೌನ್ ಆಗಿರುವುದನ್ನು ವರದಿ ಮಾಡಿದೆ. ಆ್ಯಪ್ ಒಪನ್ ಮಾಡಿದ ಬೆನ್ನಲ್ಲೇ ಕ್ಷಮಿಸಿ, ಫೀಡ್ ರಿಫ್ರೇಶ್ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ಸಮಸ್ಯೆಗಳಿವೆ ಎಂಬ ಸಂದೇಶ ತೋರಿಸುತ್ತಿದೆ ಎಂದು ಬಳಕೆದಾರರು ದೂರು ನೀಡಿದ್ದಾರೆ.
ಹಲವು ಬಳಕೆದಾರರು ಟ್ವಿಟರ್ ಮೂಲಕ ಇನ್‌ಸ್ಟಾಗ್ರಾಂ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಕುರಿತು ದೂರು ನೀಡಿದ್ದಾರೆ. ಇಂದು ಬೆಳಗ್ಗೆಯಿಂದ ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ದೂರಿದ್ದಾರೆ. ಒಂದು ವಾರದ ಹಿಂದೆ ಅಮೆರಿಕ ಹಾಗೂ ಲಂಡನ್‌ನಲ್ಲಿ ಇನ್‌ಸ್ಟಾಗ್ರಾಂ ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಇಲ್ಲಿನ ಬಳಕೆದಾರರು ಇನ್‌ಸ್ಟಾ ಆ್ಯಪ್ ಬಳಸಲು ಸಾಧ್ಯವಾಗದೇ ಪರದಾಡಿದ್ದರು.
ಇನ್ಮುಂದೆ ಎಫ್‌ಬಿ, ಇನ್‌ಸ್ಟಾ ಬ್ಲೂಟಿಕ್‌ಗೂ ನೀಡಬೇಕು ಹಣ: ಮಾಸಿಕ 699 ರೂ. ಶುಲ್ಕ
ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್‌ಸ್ಟಾಗ್ರಾಂ ಪ್ರಬಲ ಸಾಮಾಜಿಕ ತಾಣವಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು 2.35 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿ ಇಂದು ಬೆಳಗ್ಗೆ ಇನ್‌ಸ್ಟಾಗ್ರಾಂ ಸಮಸ್ಯೆ ಕಾಣಿಸಿಕೊಂಡಿದೆ. ಆ್ಯಪ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ಬಳಕೆದಾರರು ದೂರು ನೀಡಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಂ ಪ್ರತಿ 5 ದಿನಕ್ಕೊಮ್ಮೆ ಸಮಸ್ಯೆ ಎದುರಿಸುತ್ತಿದೆ. ಇನ್‌ಸ್ಟಾಗ್ರಾಂ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಹರಿದಾಡುತ್ತಿದೆ.
ಇತ್ತೀಚೆಗೆ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಕೂಡ ಬ್ಲೂಟಿಕ್ ಚಂದಾದಾರಿಕೆ ಯೋಜನೆ ಜಾರಿ ಮಾಡಿದೆ. ಇದಾದ ಬಳಿಕ ಹಲವು ಬಾರಿ ಇನ್‌ಸ್ಟಾಗ್ರಾಂ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ ಎಂದು ಬಳಕೆದಾರರು ಹೇಳಿದ್ದಾರೆ. ಮೆಟಾ ಕಂಪನಿ ಕೂಡ ಭಾರತದಲ್ಲಿ ತನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರಿಂದ ಹಣ ಪಡೆದು ವೆರಿಫಿಕೇಶನ್ ಸೌಲಭ್ಯ (ಬ್ಲೂಟಿಕ್) ನೀಡುವ ವ್ಯವಸ್ಥೆ ಆರಂಭಿಸಿದೆ. ಐಒಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರು ತಿಂಗಳಿಗೆ 699 ರು. ಹಾಗೂ ಕೇವಲ ವೆಬ್‌ನಲ್ಲಿ ಇದನ್ನು ಬಳಸುವವರು ತಿಂಗಳಿಗೆ 599 ರು. ನೀಡಿ ವೆರಿಫಿಕೇಶನ್ ಸೌಲಭ್ಯ ಪಡೆಯಬಹುದು.
ಚಾಟ್‌ಜಿಪಿಟಿ ಬಳಸಿ ಹೋಮ್‌ವರ್ಕ್: ಶಿಕ್ಷಕರಿಗೆ ಸಿಕ್ಕಿಬಿದ್ದ ವಿದ್ಯಾರ್ಥಿ : ಪೋಸ್ಟ್ ವೈರಲ್
ವೆಬ್ ವೆರಿಫಿಕೇಶನ್ ಇನ್ನೂ ಆರಂಭವಾಗಿಲ್ಲ. ಆದರೆ, ಮೊಬೈಲ್‌ನಲ್ಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಬಳಸುವವರಿಗೆ ಪೇಯ್ಡ್ ವೆರಿಫಿಕೇಶನ್ ಸೌಲಭ್ಯ ಬುಧವಾರದಿಂದಲೇ ಆರಂಭವಾಗಿದೆ.ಆದರೆ, ಟ್ವೀಟರ್‌ಗೂ ಇದಕ್ಕೂ ಇರುವ ವ್ಯತ್ಯಾಸವೇನೆಂದರೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ ಉಚಿತವಾಗಿ ವೆರಿಫಿಕೇಶನ್ ಬ್ಲೂಟಿಕ್ ಪಡೆದವರಿಗೆ ಆ ಸೌಲಭ್ಯ ಉಚಿತವಾಗಿಯೇ ಮುಂದುವರೆಯಲಿದೆ. ಇದನ್ನು ಮೆಟಾ ಸಿಇಒ ಮಾರ್ಕ್ ಜಕರ್‌ಬಗ್‌ರ್ ಅವರೇ ತಿಳಿಸಿದ್ದಾರೆ. ಆದರೆ, ಇನ್ನುಮುಂದೆ ವೆರಿಫಿಕೇಶನ್ ಸೌಲಭ್ಯ ಪಡೆಯುವವರಿಗೆ ಶುಲ್ಕ ವಿಧಿಸಲಾಗುತ್ತದೆ. ಸರ್ಕಾರಿ ಐಡಿ ಸೇರಿದಂತೆ ಬೇರೆ ಬೇರೆ ದಾಖಲೆಗಳನ್ನು ಪಡೆದು ವೈಯಕ್ತಿಕ ಖಾತೆಗಳನ್ನು ವೆರಿಫೈ ಮಾಡಲಾಗುತ್ತದೆ.