ಭಾರತಕ್ಕೆ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆಯ ಅಧ್ಯಕ್ಷ ಸ್ಥಾನ!
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪಾಲ್ಗೊಂಡು, ಕೃತಕ ಬುದ್ದಿಮತ್ತೆಯಲ್ಲಿನ ಮಹತ್ತರ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ. ಜಾಗತಿಕ ಪಾಲುದಾರಿಕೆಯ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ಪೂರಕ ವ್ಯವಸ್ಥೆ ನಿರ್ಮಾಣ ಮಾಡುವ ಭರವಸೆ ನೀಡಿದೆ.
ಬಾಲಿ(ನ.21): ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಬಳಕೆ ಹೆಚ್ಚಾಗುತ್ತಿದೆ. ಪ್ರತಿ ರಾಷ್ಟ್ರಗಳು ಕೃತಕ ಬುದ್ದಿಮತ್ತೆಯ ಉಪಯೋಗ ಪಡೆದುಕೊಳ್ಳುತ್ತಿದೆ. ಇದರ ಜೊತೆ ಅಷ್ಟೇ ದುರ್ಬಳಕೆಯೂ ಆಗುತ್ತಿದೆ. ಈ ನಿಟ್ಟಿನಲ್ಲಿ ಇಂಡೋನೇಷಿಯಾದ ಬಾಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಬೆಂಬಲಿಸುವ ಸಭೆಯ ಅಧ್ಯಕ್ಷತೆಯೂ ಭಾರತಕ್ಕೆ ಒಲಿದು ಬಂದಿದೆ. ಭಾರತ ಇದೀಗ ಕೃತಕ ಬುದ್ಧಿಮತ್ತೆಯ (GPAI) ಜಾಗತಿಕ ಪಾಲುದಾರಿಕೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ, ಇದು ಜವಾಬ್ದಾರಿಯುತ ಮತ್ತು ಮಾನವ-ಕೇಂದ್ರಿತ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ (AI) ಬಳಕೆಯನ್ನು ಬೆಂಬಲಿಸುವ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವಹಿಸಿಕೊಂಡ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಎಲೆಕ್ಟ್ರಿಕಾನಿಕ್ಸ್ ಹಾಗೂ ಐಟಿ ಸ್ಕಿಲ್ ಡೆವಲಪ್‌ಮೆಂಟ್ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಆರ್ಟಿಫಿಶಿಯಲ್ ಇಂಟಿಲಿಜೆನ್ಸಿಯಲ್ಲಿ ಪೂರಕ ವ್ಯವಸ್ಥೆ ತರುವ ಭರವಸೆ ನೀಡಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜಾಗತಿಕ ಪಾಲುದಾರಿಕೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದ ರಾಜೀವ್ ಚಂದ್ರಶೇಖರ್, ಕೃತಕ ಬುದ್ದಿಮತ್ತೆಯನ್ನು ಒಳಿತಾಗಾಗಿ, ಅಭಿವೃದ್ಧಿಗಾಗಿ ಬಳಕೆ ಮಾಡುವ ಪೂರಕ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಕಾರಣ ಕೃತಕ ಬುದ್ದಿಮತ್ತೆಯನ್ನು ಹೆಚ್ಚಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆದರೆ ವಿಶ್ವದಲ್ಲಿ ನಾಗರೀಕರು, ಗ್ರಾಹಕರು ಕೃತಕ ಬುದ್ದಿಮತ್ತೆಯನ್ನು ಒಳಿತಾಗಾಗಿ ಬಳಸಿಕೊಳ್ಳಲು ಬೇಕಾದ ಚೌಕಟನ್ನು ಹಾಕಲು ಸದಸ್ಯ ರಾಷ್ಟ್ರಗಳ ಜೊತೆ ಕೆಲಸ ಮಾಡುತ್ತೇವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
70 ಸಾವಿರ ಕೋಟಿ ಎಲೆಕ್ಟ್ರಾನಿಕ್ಸ್ ಉತ್ಪನ್ನ ರಫ್ತು: ರಾಜೀವ್ ಚಂದ್ರಶೇಖರ್
ದುರಪಯೋಗ ತಡೆಯಲು ಬೇಕಾದ ಪೂರಕ ವ್ಯವಸ್ಥೆಯನ್ನು ರೂಪಿಸುತ್ತೇವೆ. ಕೃತಕ ಬುದ್ದಿಮತ್ತೆಯಿಂದ ತಂತ್ರಜ್ಞಾನ, ಹೊಸತನಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅತ್ಯುತ್ತಮ ಸಾಧನ ಹಾಗೂ ಮಾರ್ಗವಾಗಿದೆ. ಸೈಬರ್ ಕಾನೂನಿನಡಿ ಬಳಕೆದಾರರ ಹಾನಿಯನ್ನು ತಡೆಗಟ್ಟಲು ಬೇಕಾದ ವ್ಯವಸ್ಥೆಯನ್ನು ರೂಪಿಸುತ್ತೇವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಹೊಸ ಪರಿಸರ ವ್ಯವಸ್ಥೆ ರೂಪಿಸಲು ಹಾಗೂ ಸಮರ್ಥ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಗೆ ಭಾರತವನ್ನು ಸಜ್ಜುಗೊಳಿಸಲು ಕಾರ್ಯರೂಪಿಸುವುದಾಗಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಡೇಟಾ ಫ್ರೇಮ್‌ವರ್ಕ್, ಸಾರ್ವಜನಿಕರಿಗೆ ಲಭ್ಯವಿರುವ ಡೇಟಾ ಸೆಟ್ ಸೇರಿದಂತೆ ಹಲವು ವಿಚಾಗಳ ಕುರಿತು ರಾಜೀವ್ ಚಂದ್ರಶೇಖರ್ ಬೆಳಕು ಚೆಲ್ಲಿದರು.ಹೊಸ ಪರಿಸರ ವ್ಯವಸ್ಥೆ ರೂಪಿಸಲು ಹಾಗೂ ಸಮರ್ಥ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಗೆ ಭಾರತವನ್ನು ಸಜ್ಜುಗೊಳಿಸಲು ಕಾರ್ಯರೂಪಿಸುವುದಾಗಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಡೇಟಾ ಫ್ರೇಮ್‌ವರ್ಕ್, ಸಾರ್ವಜನಿಕರಿಗೆ ಲಭ್ಯವಿರುವ ಡೇಟಾ ಸೆಟ್ ಸೇರಿದಂತೆ ಹಲವು ವಿಚಾಗಳ ಕುರಿತು ರಾಜೀವ್ ಚಂದ್ರಶೇಖರ್ ಬೆಳಕು ಚೆಲ್ಲಿದರು.