ದಾರಿಯಲ್ಲಿ ನಡೆದರೆ ಸಾಕು ಉತ್ಪಾದನೆಯಾಗುತ್ತೆ ವಿದ್ಯುತ್, IIT ವಿದ್ಯಾರ್ಥಿ ಅನ್ವೇಷಣೆಗೆ ಮೆಚ್ಚುಗೆ!

ತಾಪಮಾನ ಏರಿಕೆ, ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಜಾಗತಿಕ ಮಟ್ಟದಲ್ಲಿ ಗಂಭೀರವಾಗುತ್ತಿದೆ. ಹೀಗಾಗಿ ಪುನರ್ ಬಳಕೆ ಶಕ್ತಿಗಳತ್ತ ಎಲ್ಲಾ ದೇಶ ಚಿತ್ತ ಹರಿಸಿದೆ. ಇದರ ನಡುವೆ ಹಲವು ಅನ್ವೇಷಣೆಗಳು ನಡೆಯುತ್ತಿದೆ. ಇದೀಗ ಭಾರತೀಯ IIT ಸಂಶೋಧಕ ಹೊಸ ರಸ್ತೆ ಅಭಿವೃದ್ಧಿ ಪಡಿಸಿದ್ದು, ಸುಮ್ಮನೆ ನಡೆದರೆ ಸಾಕು ವಿದ್ಯುತ್ ಉತ್ಪಾದನೆಯಾಗಲಿದೆ, ಈ ಕುರಿತ ವಿವರ ಇಲ್ಲಿದೆ.

IIT Mandi student developed a way to generate electricity by simply walking on a street ckm

ಮಂಡಿ(ಜ.04): ದೇಶದಲ್ಲಿ ಹಲವು ಸಂಶೋಧನೆಗಳಾಗುತ್ತಿದೆ. ಈ ಮೂಲಕ ಭಾರತ ಇದೀಗ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಐಐಟಿ ಸಂಸ್ಥೆಯ ಸಂಶೋಧಕ ವಿದ್ಯುತ್ ಉತ್ಪಾದಿಸುವ ರಸ್ತೆ ಅಭಿವೃದ್ಧಿ ಪಡಿಸಿದ್ದಾನೆ. ಈ ರಸ್ತೆಯಲ್ಲಿ ನಡೆದರೆ ಸಾಕು ವಿದ್ಯುತ್ ಉತ್ಪಾದನೆಯಾಗಲಿದೆ. 

iPhone ನಿಂದ iCar:ಬರುತ್ತಿದೆ ಅತ್ಯಾಧುನಿಕ ತಂತ್ರಜ್ಞಾನದ Apple ಎಲೆಕ್ಟ್ರಿಕ್ ಕಾರು!..

ಪೀಜೋಎಲೆಕ್ಟ್ರಿಕ್ ವಸ್ತುಗಳನ್ನು ಒಳಗೊಂಡಿರುವ ರಸ್ತೆಯಲ್ಲಿ ನಡೆದಾಗ ಯಾಂತ್ರಿಕ ಶಕ್ತಿ ಮತ್ತು ವಿದ್ಯುತ್ ಶಕ್ತಿಯನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನವನ್ನು ಬಳಸಿಸಿಕೊಂಡು ರಸ್ತೆ ಅಭಿವೃದ್ಧಿ ಮಾಡಲಾಗಿದ್ದು, ಈ ರಸ್ತೆಯಲ್ಲಿ ನಡೆದಾಗ ಒತ್ತಡದಿಂದ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಸಂಶೋಧನೆಗೆ ಇದೀಗ ಎಲ್ಲರ ಗಮನಸೆಳೆದಿದೆ.

ಈ ರಸ್ತೆಯಿಂದ ಯಾವುದೇ ಅಪಾಯವಿಲ್ಲ. ಇನ್ನು ಪದಾಚಾರಿಗಳ ನಡೆಯುವ ದಾರಿಯಲ್ಲಿ ಈ ರೀತಿ ರಸ್ತೆ ಅಭಿವೃದ್ಧಿ ಪಡಿಸಿದರೆ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಪರಿಸರಕ್ಕೂ ಪೂರಕವಾಗಿರುವ ಕಾರಣ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ. ರಾಹುಲ್ ವೈಶ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios