Google Pay ನಲ್ಲಿ ಹೊಸ ಫೀಚರ್ಸ್: ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ!
ಹಣ ಪಾವತಿ, ಬಿಲ್ ಪಾವತಿ, ಹಣ ವರ್ಗಾವಣೆ, ಹಣ ಸ್ವೀಕರಣೆ ಸೇರಿದಂತೆ ಎಲ್ಲವೂ ಈಗ ಮೊಬೈಲ್ ಮೂಲಕವೇ ನಡೆಯುತ್ತಿದೆ. ಭಾರತದಲ್ಲಿ ಈ ಸೇವೆ ನೀಡವ ಹಲವು ಆ್ಯಪ್‌ಗಳಿವೆ. ಇದರಲ್ಲಿ ಗೂಗಲ್ ಪೇ ಜನಪ್ರಿಯವಾಗಿದೆ. ಇದೀಗ ಗೂಗಲ್ ಪೇ ಹೊಸ ಪೀಚರ್ಸ್ ಸೇರಿಸಿದೆ. ಇದು ಮತ್ತಷ್ಟು ಸಹಕಾರಿಯಾಗಿದೆ.
ನವದೆಹಲಿ(ಆ.30): ಕೇಂದ್ರ ಸರ್ಕಾರದ ಡಿಮಾನಿಸೈಟೇಶನ್ ಬಳಿಕ ಭಾರತದಲ್ಲಿ ನಗದು ವ್ಯವಹಾರಗಳು ಡಿಜಿಟಲ್ ಪೇಮೆಂಟ್ ಆಗಿ ಬದಲಾಗಿದೆ. ತರಕಾರಿ ಅಂಗಡಿ, ಕಿರಾಣಿ ಅಂಗಡಿಯಿಂದ ಹಿಡಿದು ಮಾಲ್, ಹೊಟೆಲ್, ರೆಸ್ಟೋರೆಂಟ್‌ನಲ್ಲಿ ಆ್ಯಪ್ ಮೂಲಕ ಹಣ ಪಾವತಿ ಹೆಚ್ಚಾಗಿದೆ. ಈ ಸೇವೆ ನೀಡುವ ಹಲವು ಆ್ಯಪ್‌ಗಳು ಭಾರತದಲ್ಲಿದೆ. Google pay ಇದರಲ್ಲಿ ಪ್ರಮುಖವಾಗಿದೆ. ಗೂಗಲ್ ಪೇ ಇದೀಗ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಸೇರಿಸುವ ಹೊಸ ಫೀಚರ್ಸ್ ನೀಡುತ್ತಿದೆ.
ಗೂಗಲ್ ಪೇ ಬಳಕೆದಾರರೆ ಎಚ್ಚರ, ನಿಮಗೂ ಇಂಥ ಕರೆ ಬರಬಹುದು!.
ಸದ್ಯ ಗೂಗಲ್ ಪೇ ಆ್ಯಪ್ ಆ್ಯಕ್ಟೀವೇಟ್ ಮಾಡುವಾಗ ಬ್ಯಾಂಕ್ ಅಕೌಂಟ್ ಜೋಡಣೆ ಮಾಡಬೇಕು. ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿದ್ದರೆ ಮಾತ್ರ ಗೂಗಲ್ ಪೇ ಮೂಲಕ ಪಾವತಿ ಮಾಡಬಹುದು. ಇದೀಗ ನಿಮ್ಮ ಗೂಗಲ್ ಪೇ ಖಾತೆಗೆ ಕ್ರೆಡಿಟ್ ಕಾರ್ಡ್ ಹಾಗೂ ಡಿಬಿಟ್ ಕಾರ್ಡ್ ಸೇರಿಸುವ ಆಯ್ಕೆ ನೀಡುತ್ತಿದೆ.
Google Pay ಸೆಟ್ಟಿಂಗ್ಸ್‌ನಲ್ಲಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಸೇರಿಸುವ ಆಯ್ಕೆಯನ್ನು ನೀಡುತ್ತಿದೆ. ನಿಮ್ಮ ಕಾರ್ಡ್ ಸೇರಿಸುವಾಗ ಒಟಿಪಿ ಪಾಸ್‌ವರ್ಡ್ ಮೊಬೈಲ್ ನಂಬರ್‌ಗೆ ಬರಲಿದೆ. ಈ ಪಾಸ್‌ವರ್ಡ್ ನಮೂದಿಸಿದರೆ ಕ್ರೆಡಿಟ್ ಕಾರ್ಡ್ ಅಥವಾ ಡಿಬಿಟ್ ಕಾರ್ಡ್ ಆಕ್ಟೀವೇಟ್ ಆಗಲಿದೆ.
ಆ್ಯಕ್ಸಿಸ್ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ವೀಸಾ ಕಾರ್ಡ್ ಸದ್ಯಕ್ಕೆ ಗೂಗಲ್ ಪೇ ನಲ್ಲಿ ಸೇರಿಸಲು ಅವಕಾಶ ನೀಡಿದೆ. ಇದೀಗ ಟೆಸ್ಟಿಂಗ್ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಭಾರತದಲ್ಲಿ ಗೂಗಲ್ ಈ ಫೀಚರ್ಸ್ ನೀಡಲಿದೆ.