Google Down, ಗೂಗಲ್ ಸರ್ಚ್ ಎಂಜಿನ್, ಮ್ಯಾಪ್, ಯೂಟ್ಯೂಟ್ ಸಮಸ್ಯೆಯಿಂದ ಪರದಾಡಿದ ಜನ!
ವಿಶ್ವಾದ್ಯಂತ ಗೂಗಲ್ ಡೌನ್ ಆದ ಪರಿಣಾಮ, ಜನರು ಗೂಗಲ್ ಸರ್ಚ್ ಮಾಡಲು ಸಾಧ್ಯವಾಗದೆ, ಯೂಟ್ಯೂಟ್, ಗೂಗಲ್ ಡ್ರೈವ್, ಗೂಗಲ್ ಮ್ಯಾಪ್ ಬಳಸಲಾಗದೆ ಪರದಾಡಿದ್ದಾರೆ
ನವದೆಹಲಿ(ಆ.09): ಇಂಟರ್ನೆಟ್ ದಿಗ್ಗಜ ಗೂಗಲ್ ತಾಂತ್ರಿಕ ಸಮಸ್ಯೆಗೆ ಜನರು ಹೈರಾಣಾಗಿದ್ದಾರೆ. ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಗೂಗಲ್‌ನಲ್ಲಿ ಸಮಸ್ಯೆ ತಲೆದೋರಿದೆ. ಇದರ ಪರಿಣಾಮ, ಬಳಕೆದಾರರು ಗೂಗಲ್ ಸರ್ಚ್, ಯೂಟ್ಯೂಟ್, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಸೇರಿದಂತೆ ಗೂಗಲ್ ಸೇವೆಗಳನ್ನು ಬಳಸಲಾಗದೆ ಪರದಾಡಿದ್ದಾರೆ. ಜನರು ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಂತೆ ಔಟೇಜ್ ಟ್ರಾಕರ್ ಡೌನ್‌ಡಿಟೆಕ್ಟರ್ ಈ ಕುರಿತು ಮಾಹಿತಿ ನೀಡಿದೆ. ಗೂಗಲ್ ಡೌನ್ ಆಗಿದ್ದು, ಜನರಿಗೆ ತಾಂತ್ರಿಕ ಸಮಸ್ಯೆ ಎದುರಾಗಲಿದೆ ಎಂಬ ಮಾಹಿತಿ ನೀಡಿದೆ. ಆಲ್ಫಾಬೆಟ್ ಇಂಕ್ ಗೂಗಲ್ ವಿಶ್ವದ ಅತೀ ದೊಡ್ಡ ಸರ್ಚ್ ಎಂಜಿನ್ ಆಗಿದೆ. ಗೂಗಲ್ ನೆಚ್ಚಿಕೊಂಡೇ ಇಡೀ ಜಗತ್ತು ನಿಂತಿದೆ. ಹೀಗಾಗಿ ಕೆಲ ಕ್ಷಣಗಳ ತಾಂತ್ರಿಕ ದೋಷ ಬಹುದೊಡ್ಡ ಪರಿಣಾಮ ಬೀರಲಿದೆ. ಸುಮಾರು 45,000ಕ್ಕೂ ಹೆಚ್ಚು ಬಳಕೆದಾರರು ಗೂಗಲ್ ಡೌನ್ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ(ಆ.08) ರಾತ್ರಿಯಿಂದಲೇ ಹಲವು ಬಳಕೆದಾರರಿಗೆ ಗೂಗಲ್ ಸೇವೆ ಬಳಸಲು ಸಾಧ್ಯವಾಗಿಲ್ಲ. ಗೂಗಲ್ ಸರ್ಚ್ ಗೂಗಲ್ ಮ್ಯಾಪ್, ಯೂಟ್ಯೂಬ್ ಸೇರಿದಂತೆ ಹಲವು ಗೂಗಲ್ ಸೇವೆಗಳು ಸ್ಥಗಿತಗೊಂಡಿತ್ತು. ಇದರಿಂದ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಡೌನ್ ಹ್ಯಾಶ್‌ಟ್ಯಾಗ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ . ಆದರೆ ಗೂಗಲ್ ಆ್ಯಪ್‌ಸ್ಟೇಟಸ್ ಡ್ಯಾಶ್‌ಬೋರ್ಡ್‌ನಲ್ಲಿ ಈ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಗೂಗಲ್ ಡೌನ್ ಕುರಿತು ಸ್ವತಃ ಗೂಗಲ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಗೂಗಲ್ ಡೌನ್ ಆಗಿರುವುದಂತೂ ಸತ್ಯ. ಇದನ್ನು ಔಟೇಜ್ ಟ್ರಾಕರ್ ಡೌನ್‌ಡಿಟೆಕ್ಟರ್ ಮಾಹಿತಿ ನೀಡಿದೆ.
Offline Gmail: ಈಗ ಇಂಟರ್ನೆಟ್ ಇಲ್ಲದೇ ಇಮೇಲ್ ಕಳುಹಿಸಬುದು: ಹೇಗೆ ಗೊತ್ತಾ?
ಹೆಚ್ಚಿನ ಬಳಕೆದಾರರಿಗೆ 500 ಎರರ್ ತೋರಿಸಿದೆ. ಇದು ಸಾಮಾನ್ಯವಾಗಿ ಸರ್ವರ್ ಡೌನ್ ಸಮಸ್ಯೆ ವೇಳೆ ತೋರಿಸುವ ನೋಟಿಫಿಕೇಶನ್ ಆಗಿದೆ. ಕಳೆದ ರಾತ್ರಿಯಿಂದ ಭಾರತದಲ್ಲೂ ಗೂಗಲ್ ಡೌನ್ ಆಗಿತ್ತು. ಆದರೆ ಇಂದು ಬೆಳಗ್ಗೆ ಭಾರತದಲ್ಲಿ ಗೂಗಲ್ ಡೌನ್ ಸಮಸ್ಯೆ ನಿವಾರಣೆಯಾಗಿದೆ.
ಆಗಸ್ಟ್ 8ರ ರಾತ್ರಿ 9.12ರ ಹೊತ್ತಿಗೆ ಗೂಗಲ್ ಸಮಸ್ಯೆ ಕಾಣಿಸಿಕೊಂಡಿದೆ. ಗೂಗಲ್ ಸರ್ವರ್ ಡೌನ್ ಸಮಸ್ಯೆ ಎದುರಾದ ಬೆನ್ನಲ್ಲೇ ಬಳಕೆದಾರರು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ಕೂಡ ಹಲವು ಗೂಗಲ್ ಡೌನ್ ಸಮಸ್ಯೆ ಎದುರಿಸಿದ್ದಾರೆ. ಸದ್ಯ ಭಾರತದಲ್ಲಿ ಸಮಸ್ಯೆ ನಿವಾರಣೆಯಾಗಿರುವುದಾಗಿ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿಶ್ವಾದ್ಯಂತ ಎದುರಾಗಿರುವ ಸಮಸ್ಯೆ ಇನ್ನು ಕಾಡುತ್ತಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ದೂರು ದಾಖಲಿಸಿದ್ದಾರೆ.