Asianet Suvarna News Asianet Suvarna News

ಜೂನ್ 4 ರಿಂದ ಹಲವು ದೇಶದಲ್ಲಿ ಗೂಗಲ್ ಪೇ ಸ್ಥಗಿತ, ಭಾರತದಲ್ಲಿ ಮುಂದುವರಿಯುತ್ತಾ?

ಜೂನ್ 4ರಿಂದ ಗೂಗಲ್ ಪೇ ಸ್ಥಗಿತಗೊಳ್ಳುತ್ತಿದೆ. ಗೂಗಲ್ ಹೊಸದಾಗಿ ಆರಂಭಿಸಿರುವ ಗೂಗಲ್ ವಾಲೆಟ್ ಸರ್ವೀಸ್ ಆರಂಭಗೊಳ್ಳುತ್ತಿದೆ. ಹಲವು ದೇಶಗಳಲ್ಲಿ ಗೂಗಲ್ ಪೇ ಸ್ಥಗಿತಗೊಳ್ಳುತ್ತಿದೆ.
 

Google discontinues Gpay service in America from June 4th No impact on India ckm
Author
First Published May 31, 2024, 7:23 PM IST

ನವದೆಹಲಿ(ಮೇ.31) ವಿಶ್ವವೇ ಇದೀಗ ಡಿಜಿಟಲೀಕರಣಗೊಂಡಿದೆ. ಪಾವತಿ ವ್ಯವಸ್ಥೆಗಳು ಸಂಪೂರ್ಣ ಡಿಜಿಟಲ್. ಯುಪಿಐ ಮೂಲಕ ಸುಲಭವಾಗಿ ಪಾವತಿ ವ್ಯವಸ್ಥೆ ಇದೀಗ ಜನರ ಜೀವನವನ್ನು ಸುಲಭಗೊಳಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸರ್ವೀಸ್ ಲಭ್ಯವಿದೆ. ಜಿ ಪೇ ಮೂಲಕ ಯುಪಿಐ ಪಾವತಿ, ರೀಚಾರ್ಜ್ ಸೇರಿದಂತೆ ಹಲವು ಸೇವೆಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಜೂನ್ 4 ರಿಂದ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದೆ. 

ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಗೂಗಲ್ ಪೇ ಸರ್ವೀಸ್ ಸ್ಥಗಿತಗೊಳ್ಳುತ್ತಿದೆ. ಇದರ ಬದಲಾಗಿ ಗೂಗಲ್ ವಾಲೆಟ್ ಹೊಸ ಆ್ಯಪ್ ಸೇವೆ ಆರಂಭಗೊಂಡಿದೆ. ಈಗಾಗಲೇ ಈ ಹೊಸ ಆ್ಯಪ್ ಸೇವೆ ನೀಡಲು ಆರಂಭಿಸಿದೆ. ಅಮೆರಿಕ ಸೇರಿದಂತೆ ಕೆಲ ದೇಶದಲ್ಲಿ ಜೂನ್ 4 ರಿಂದ ಗೂಗಲ್ ಪೇ ಕಾರ್ಯನಿರ್ವಹಿಸುವುದಿಲ್ಲ. ಗೂಗಲ್ ಪೇ ಬಳಕೆ ಮಾಡುತ್ತಿರುವ ಗ್ರಾಹಕರು ಗೂಗಲ್ ವಾಲೆಟ್ ಬಳಕೆ ಮಾಡಲು ಕೋರಲಾಗಿದೆ.

ಬೆಂಗಳೂರಿನಲ್ಲಿ ಗೂಗಲ್‌ನ ಹೊಸ ಕಚೇರಿ, ಅಬ್ಬಬ್ಬಾ ತಿಂಗಳ ಬಾಡಿಗೆ ಇಷ್ಟೊಂದು ಕೋಟಿನಾ?

ಭಾರತದ ಗ್ರಾಹಕರ ಕತೆ ಏನು?
ಅಮೆರಿಕ ಸೇರಿದಂತೆ ಕೆಲ ದೇಶದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದೆ. ಆದರೆ ಭಾರತ, ಸಿಂಗಾಪುರ ಸೇರಿದಂತೆ ಇತರ ಕೆಲ ದೇಶದಲ್ಲಿ ಗೂಗಲ್ ಪೇ ಸೇವೆ ಮುಂದುವರಿಯಲಿದೆ. ಈ ದೇಶಗಳಲ್ಲಿ ಗೂಗಲ್ ಪೇ ಸ್ಟಾಂಡ್‌ಲೋನ್ ಆ್ಯಪ್ ಆಗಿ ಮುಂದುವರಿಯಲಿದೆ. ಗ್ರಾಹಕರು ಎಂದಿನಂತೇ ಗೂಗಲ್ ಪೇ ಸೇವೆಯನ್ನು ಬಳಸಿಕೊಳ್ಳಬಹುದು. ಬೇರೆ ದೇಶಗಳಲ್ಲಿ ಗೂಗಲ್ ಪೇ ಸ್ಥಗಿತಗೊಳ್ಳುತ್ತಿರುವ ಯಾವುದೇ ಪರಿಣಾಮ ಭಾರತಕ್ಕೆ ತಟ್ಟುವುದಿಲ್ಲ. ಭಾರತದಲ್ಲಿ ಗೂಗಲ್ ಪೇ ಹಾಗೂ ಗೂಗಲ್ ವಾಲೆಟ್ ಎರಡೂ ಕಾರ್ಯನಿರ್ವಹಿಸಲಿದೆ. ಭಾರತದಲ್ಲಿ ಗೂಗಲ್ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ.

ಗೂಗಲ್ ಪೇ ಬಳಕೆ ಮಾಡುತ್ತಿರುವ ಗ್ರಾಹಕರು ಸುಲಭವಾಗಿ ಗೂಗಲ್ ವಾಲೆಟ್ ಖಾತೆಗೆ ಬದಲಾವಣೆ ಮಾಡಬಹುದು. ಅಮೆರಿಕದಲ್ಲಿ ಇದೀಗ ಬಳಕೆದಾರರು ಗೂಗಲ್ ಪೇನಿಂದ ಗೂಗಲ್ ವಾಲೆಟ್‌ನತ್ತ ಧಾವಿಸುತ್ತಿದ್ದಾರೆ. ಜೂನ್ 4ರಿಂದ ಸ್ಥಗಿತಗೊಳ್ಳುತ್ತಿರುವ ಹಿನ್ನಲೆಯಲ್ಲಿ ಇದೀಗ ಬಳಕೆದಾರರು ಗೂಗಲ್ ವಾಲೆಟ್ ಆ್ಯಪ್ ಡೌನ್ಲೋಡ್ ಮಾಡಿ ರಿಜಿಸ್ಟರ್ಡ್ ಮಾಡುತ್ತಿದ್ದಾರೆ.

125 ಶತಕೋಟಿ ಡಾಲರ್ ನಿವೃತ್ತಿ ನಿಧಿ ಖಾತೆಗಳನ್ನೇ ಆಕಸ್ಮಿಕವಾಗಿ ಡಿಲೀಟ್ ಮಾಡಿದ ಗೂಗಲ್..!

ಗೂಗಲ್ ಪೇ ಸ್ಥಗಿತಗೊಳ್ಳುತ್ತಿರುವ ದೇಶದ ಬಳಕೆದಾರರು ಒಂದು ವೇಳೆ ಜೂನ್ 4ರ ಒಳಗೆ ಗೂಗಲ್ ಪೇ ನಿಂದ ಗೂಗಲ್ ವಾಲೆಟ್‌ಗೆ ವರ್ಗಾವಣೆ ಆಗದಿದ್ದರೆ, ಮತ್ತೊಂದು ಆಯ್ಕೆ ಇದೆ. ಗೂಗಲ್ ಪೇನಲ್ಲಿರುವ ಬ್ಯಾಲೆನ್ಸ್ ಮೊತ್ತವನ್ನು ಗೂಗಲ್ ವಾಲೆಟ್‌ಗಗೆ ವರ್ಗಾಯಿಸಲು ಅಧಿಕೃತ ವೆಬ್‌ಸೈಟ್ ಮೂಲಕ ಸಾಧ್ಯವಿದೆ. ಆಧರೆ ಜೂನ್ 4ಕ್ಕೂ ಮೊದಲು ಸುಲಭಾಗಿ ಆ್ಯಪ್ ಮೂಲಕವೇ ಬ್ಯಾಲೆನ್ಸ್ ಮೊತ್ತ ವರ್ಗಾವಣೆ ಮಾಡಲು ಸಾಧ್ಯವಿದೆ.
 

Latest Videos
Follow Us:
Download App:
  • android
  • ios