Google Fast Pair : ಕ್ರೋಮ್‌ಬುಕ್ ಆ್ಯಂಡ್ರಾಯ್ಡ್ ಫೋನ್ ಕನೆಕ್ಟ್ ಮಾಡುವುದು ಈಗ ಇನ್ನೂ ಸುಲಭ!
ಫಾಸ್ಟ್ ಪೇರ್ (Fast Pair) ಮುಂಬರುವ ದಿನಗಳಲ್ಲಿ ಗೂಗಲ್ ಟಿವಿ ಅಥವಾ ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ಗಳನ್ನು ಆಧರಿಸಿ ಸ್ಮಾರ್ಟ್ ಟಿವಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್ ಹೇಳಿದೆ
Tech Desk: ಗೂಗಲ್ ಬುಧವಾರ (ಜ. 5) ಆಂಡ್ರಾಯ್ಡ್‌ಗೆ ಬರುತ್ತಿರುವ ನವೀಕರಣಗಳ (Update) ಬಗ್ಗೆ ಹಲವು ಘೋಷನೆಗಳನ್ನು ಮಾಡಿದೆ. ಇದು ಬಳಕೆದಾರರಿಗೆ ಗೂಗಲ್ ಸೇವೆಗಳನ್ನು ಹೆಚ್ಚು ಅನುಕೂಲ ಮತ್ತು ಸುಲಭವಾಗಿಸುವ ಗುರಿಯನ್ನು ಹೊಂದಿದೆ. ಟಿವಿಗಳು, ಕ್ರೋಮ್‌ಬುಕ್‌ಗಳು ಮತ್ತು ಸ್ಮಾರ್ಟ್ ಹೋಮ್ ಸಾಧನಗಳಿಗೆ ಫಾಸ್ಟ್ ಪೇರ್ (Fast Pair) ಅನ್ನು ವಿಸ್ತರಿಸುವುದು ಗೂಗಲ್‌ನ ಅತ್ಯಂತ ಮಹತ್ವದ ಬದಲಾವಣೆಗಳಲ್ಲಿ ಒಂದಾಗಿದೆ. ಈ ಬೆನ್ನಲ್ಲೇ ಹೆಡ್‌ಫೋನ್‌ಗಳು ಸ್ವಯಂಚಾಲಿತವಾಗಿ ಆಂಡ್ರಾಯ್ಡ್ ಸಾಧನದಿಂದ ಟ್ಯಾಬ್ಲೆಟ್‌ಗೆ ತಡೆರಹಿತವಾಗಿ ಆಡಿಯೊವನ್ನು ಬದಲಾಯಿಸುವ ಸಾಮರ್ಥ್ಯವನ್ನು ಪಡೆಯುತ್ತವೆ ಎಂದು ಗೂಗಲ್ ತಿಳಿಸಿದೆ. ಕಂಪನಿಯು ಹೆಚ್ಚುವರಿಯಾಗಿ ಆಂಡ್ರಾಯ್ಡ್ ಫೋನ್‌ಗಳೊಂದಿಗೆ ಕ್ರೋಮ್‌ಬುಕ್‌ಗಳನ್ನು ತ್ವರಿತವಾಗಿ ಕನೆಕ್ಟ್ ಮಾಡಲು ಸಹಾಯ ಮಾಡುವ ಅಪ್ಡೇಟ್ ಅನ್ನು ಘೋಷಿಸಿದೆ. ಹೀಗಾಗಿ ಕ್ರೋಮ್‌ಬುಕ್ ಮತು ಆಂಡ್ರಾಯ್ಡ್ ಕನೆಕ್ಟ ಮಾಡುವುದು ಇನ್ನಷ್ಟು ಸುಲಭವಾಗಲಿದೆ.
ಇನ್ನು ಸಾಧನಗಳು ಸಮೀಪದಲ್ಲಿರುವಾಗ ಕನೆಕ್ಟ್ ಆಗಿರುವ Wear OS ಸ್ಮಾರ್ಟ್‌ವಾಚ್ ಅನ್ನು ಬಳಸಿಕೊಂಡು ಬಳಕೆದಾರರು ತಮ್ಮ Chromebook ಮತ್ತು Android ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ಮತ್ತು ಪ್ರವೇಶಿಸಲು ಹೊಸ ಫೀಚರ್ ಪಡೆಯುತ್ತಾರೆ. ಇದು ಕಳೆದ ವರ್ಷ ಆಪಲ್ ಪರಿಚಯಿಸಿದ '‘Unlock with Apple Watch' ' ವೈಶಿಷ್ಟ್ಯದಂತೆಯೇ ಕಾರ್ಯ ನಿರ್ವಹಿಸಿಲಿದೆ. Android ಬಳಕೆದಾರರು ತಮ್ಮ ಸಂದೇಶಗಳನ್ನು ಮತ್ತು ಅಧಿಸೂಚನೆಗಳನ್ನು ನೇರವಾಗಿ Windows PC ಗಳಲ್ಲಿ ಪ್ರವೇಶಿಸಲು ಅನುಮತಿಸಲು Microsoft ಈಗಾಗಲೇ Your Phone app ಅನ್ನು ಹೊಂದಿದ್ದು ಈಗ ಗೂಗಲ್ ಈ ರೀತಿಯ ವೈಶಿಷ್ಟ್ಯ ನೀಡಲಿದೆ.
ಇದನ್ನೂ ಓದಿ: Alphabet Privacy lawsuit: ಗೌಪ್ಯತಾ ನೀತಿ ಉಲ್ಲಂಘನೆ ಆರೋಪ: ಸಿಇಓ ಸುಂದರ್ ಪಿಚೈ ವಿಚಾರಣೆ!
ಬ್ಲೂಟೂತ್ ಪರಿಕರಗಳನ್ನು ತ್ವರಿತವಾಗಿ ಕನೆಕ್ಟ್ ಮಾಡಲು ಪಠ್ಯ ಸಂದೇಶಗಳನ್ನು ಸಿಂಕ್ ಮಾಡಲು ಮತ್ತು Nearby Share ಸೇವೆಯನ್ನು ಬಳಸಿಕೊಂಡು ಫೈಲ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅನುಮತಿಸಲು ವಿಂಡೋಸ್ PC ಗಳಿಗೆ ಫಾಸ್ಟ್ ಪೇರ್ ಅನ್ನು ವಿಸ್ತರಿಸುವುದಾಗಿ Google ಘೋಷಿಸಿದೆ. ಈ ನವೀಕರಣವು ಈ ವರ್ಷದ ಕೊನೆಯಲ್ಲಿ ಏಸರ್, ಎಚ್‌ಪಿ ಮತ್ತು ಇಂಟೆಲ್‌ನಿಂದ ಸಾಧನಗಳಲ್ಲಿ ಲಭ್ಯವಿರಲಿದೆ.
ಫಾಸ್ಟ್ ಪೇರ್ ಮೂಲಕ ಬಳಕೆದಾರರು ತಮ್ಮ Android ಫೋನ್‌ನೊಂದಿಗೆ ಹೊಸ Chromebook ಅನ್ನು ತ್ವರಿತವಾಗಿ ಕನೆಕ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು Google ಲಾಗಿನ್ ಮತ್ತು Wi-Fi ಪಾಸ್‌ವರ್ಡ್‌ನಂತಹ ಮಾಹಿತಿಗೆ ತಕ್ಷಣದ ಆಕ್ಸಸ್ ಒದಗಿಸಲು ಸಾಧ್ಯವಾಗುತ್ತದೆ ಎಂದು Google ಘೋಷಿಸಿದೆ. ಹಾಗಾಗಿ ಬಳಕೆದಾರರು ಈ ಎಲ್ಲ ಮಾಹಿತಿಯನ್ನು ಹೊಸ ಸಾಧನಗಳಲ್ಲಿ ನಮೂದಿಸುವ ಅಗತ್ಯವಿಲ್ಲ. ಈ ಫೀಚರ್ ಈ ವರ್ಷದ ನಂತರ ಬಿಡುಗಡೆಯಾಗಲಿದ್ದೂ ಎಲ್ಲಾ Chromebook ಮಾದರಿಗಳು ಮತ್ತು Android ಆವೃತ್ತಿಗಳು ಅಪ್‌ಡೇಟ್ ಅನ್ನು ಪಡೆದುಕೊಳ್ಳುತ್ತವೆಯೇ ಎಂಬುದನ್ನು Google ಇನ್ನೂ ವಿವರಿಸಿಲ್ಲ.
Apple ಜತೆ Google ಪೈಪೋಟಿ
ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳೊಂದಿಗೆ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ತ್ವರಿತವಾಗಿ ಕನೆಕ್ಟ್ ಮಾಡಲು ಫಾಸ್ಟ್ ಪೇರ್ ನವೆಂಬರ್ 2017 ರಿಂದ ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿದೆ. ಇದು ಆಪಲ್ ಕನೆಕ್ಟ್ ತಂತ್ರಜ್ಞಾನದ ಜತೆಗೆ ಸ್ಪರ್ಧಿಸುವ ಗುರಿ ಹೊಂದಿದ್ದು ಜನರು ತಮ್ಮ Android ಫೋನ್‌ಗಳನ್ನು ಬ್ಲೂಟೂತ್ ಪರಿಕರಗಳೊಂದಿಗೆ 100 ಮಿಲಿಯನ್ ಬಾರಿ ಸಂಪರ್ಕಿಸಲು ಸಹಾಯ ಮಾಡಿದೆ ಎಂದು ವರದಿಯಾಗಿದೆ. ಈಗ ವಿವಿಧ ತಯಾರಕರೊಂದಿಗೆ ಪಾಲುದಾರಿಕೆ ಮತ್ತು ಹೊಸ ಅನುಭವಗಳನ್ನು ತರುವ ಮೂಲಕ ಹೊಸ ಸಾಧನಗಳಿಗೆ ಫಾಸ್ಟ್ ಪೇರ್ ಅನ್ನು ವಿಸ್ತರಿಸಲು ಗೂಗಲ್ ಯೋಜಿಸುತ್ತಿದೆ.
ಕೆಲವೇ ವಾರಗಳಲ್ಲಿ, ಬಳಕೆದಾರರು ತಮ್ಮ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಮೊದಲ ಬಾರಿಗೆ ಆನ್ ಮಾಡಿದಾಗ ಒಂದೇ ಕ್ಲಿಕ್‌ನಲ್ಲಿ ಸ್ವಯಂಚಾಲಿತವಾಗಿ Chromebook ನೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು Google ಹೇಳಿದೆ. Chromebooks ಜೊತೆಗೆ, ಫಾಸ್ಟ್ ಪೇರ್ ಮುಂದಿನ ತಿಂಗಳುಗಳಲ್ಲಿ Google TV ಅಥವಾ Android TV ಪ್ಲಾಟ್‌ಫಾರ್ಮ್‌ಗಳ ಆಧಾರದ ಮೇಲೆ ಸ್ಮಾರ್ಟ್ ಟಿವಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ, ಬಳಕೆದಾರರು ತಮ್ಮ ಹೆಡ್‌ಫೋನ್‌ಗಳನ್ನು ತಮ್ಮ ಟಿವಿಗಳೊಂದಿಗೆ ತ್ವರಿತವಾಗಿ ಸಂಪರ್ಕಿಸಲು ಇದು ಸಹಾಯ ಮಾಡಲಿದೆ.