ದೀಪಾವಳಿಗೆ 20 ಕ್ರೀಡಾ ಆ್ಯಪ್ ಹೊಂದಿರುವ ವೆನ್ಯೂ SQ ಸ್ಮಾರ್ಟ್‌ವಾಚ್ ಲಾಂಚ್!

  • ಹಬ್ಬದ ಸಂಭ್ರಮ ಹೆಚ್ಚಿಸಿದ ಗಾರ್ಮಿನ್ ಇಂಡಿಯಾದ ಸಂಪೂರ್ಣ ಹೊಸ ವೆನ್ಯು ಎಸ್‍ಕ್ಯು ಸ್ಮಾರ್ಟ್‍ವಾಚ್
  • 20 ಕ್ರೀಡಾ ಆ್ಯಪ್‍ಗಳನ್ನು ಒಳಗೊಂಡಿರುವ ಅಗ್ಗದ ಈ ಸ್ಮಾರ್ಟ್‍ವಾಚ್
Garmin India brings more joy to this festival with the all new Venu SQ Smartwatch ckm

ನವದೆಹಲಿ(ನ.12):  ಬಹುತೇಕರು ಈಗ ಸ್ಮಾರ್ಟ್‌ವಾಚ್ ಬಳಸುತ್ತಾರೆ. ಇದು ಕೇವಲ ಸಮಯ ನೋಡಲು ಮಾತ್ರವಲ್ಲ ಅನ್ನೋ ಸತ್ಯ ಎಲ್ಲರಿಗೂ ತಿಳಿದೆ. ಆರೋಗ್ಯ ಕಾಪಾಡಿಕೊಳ್ಳಲು, ದಿನ ನಿತ್ಯದ ಚಟುವಟಿಕೆಗಳಿಗೆ ಸ್ಮಾರ್ಟ್‌ವಾತ್ ಅತ್ಯಂತ ಸಹಕಾರಿ.   ಆಕರ್ಷಕ ಮತ್ತು ಸುಂದರ ಮೈಕಟ್ಟು ಕಾಯ್ದುಕೊಳ್ಳಲು ಬಯಸುವ ಮತ್ತು ದೈಹಿಕ ಕಸರತ್ತು ಮಾಡುವ ಉತ್ಸಾಹಿಗಳ ಹಬ್ಬದ ಋತುವಿನ ಸಂಭ್ರಮ ಹೆಚ್ಚಿಸಲು ಗಾರ್ಮಿನ್ ಇಂಡಿಯಾ,  ಅತ್ಯಾಧುನಿಕ ಸೌಲಭ್ಯ ಹೊಂದಿರುವ  GPS ಸ್ಮಾರ್ಟ್‍ವಾಚ್ – ವೆನ್ಯು SQ ಮತ್ತು ವೆನ್ಯು SQ ಮ್ಯೂಸಿಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವೆನ್ಯು Sq ಶ್ರೇಣಿಯ ಸ್ಮಾರ್ಟ್‍ವಾಚ್‍ಗಳು, ಪ್ರಖರ ಬಣ್ಣದ ಪರದೆ, ತೆಳ್ಳನೆಯ ವಿನ್ಯಾಸ ಮತ್ತು  ದಿನದ ಪ್ರತಿಯೊಂದು ಗಳಿಗೆಯಲ್ಲಿ ಬಳಕೆದಾರರ ಆರೋಗ್ಯ ಮತ್ತು ಫಿಟ್‍ನೆಸ್ ಚಟುವಟಿಕೆಗಳ ಮೇಲೆ ನಿಗಾ ಇರಿಸಲಿವೆ. ಹೊಸ ವೆನ್ಯು Sq, ದೈಹಿಕ ಸಾಮಥ್ರ್ಯ ಸುಧಾರಿಸುವ ಕಸರತ್ತು, ಯೋಗ, ಓಟ, ಈಜಾಟ, ಸೈಕ್ಲಿಂಗ್, ಗಾಲ್ಫ್ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳ 20ಕ್ಕೂ ಹೆಚ್ಚು ಸ್ಪೋಟ್ರ್ಸ್ ಅಪ್ಲಿಕೇಷನ್ಸ್‍ಗಳನ್ನು ಒಳಗೊಂಡಿದೆ. 

ಫಾರ್ ರನ್ನರ್ಸ್ ಹೊಸ ಸ್ಮಾರ್ಟ್‌ವಾಚ್, ಇದು ಅಂತಿಂಥದ್ದಲ್ಲ!

ಸ್ಪೂರ್ತಿದಾಯಕ ಚಟುವಟಿಕೆಗಳಿಗೆ ಅಗತ್ಯವಾದ ವ್ಯಾಪಕ ಸ್ವರೂಪದ ವ್ಯಾಯಾಮ ಮಾಡುವ ತನ್ನ ಬಳಕೆದಾರರಿಗೆ ಹಲವಾರು ಬಗೆಗಳಲ್ಲಿ ಬೆಂಬಲ ನೀಡಲಿದೆ. ಈ ಅನುಕೂಲತೆಗಳಿಗೆ ಹೆಚ್ಚುವರಿಯಾಗಿ ಸಂಗೀತ ಆವೃತ್ತಿಯಾಗಿರುವ ವೆನ್ಯು ಎಸ್‍ಕ್ಯು ಮ್ಯೂಸಿಕ್ - ಮೊಬೈಲ್ ಫೋನ್ ನೆರವಿಲ್ಲದೆ ಸಂಗೀತ ಆಲಿಸಬಹುದಾದ ಸ್ಮಾರ್ಟ್‍ವಾಚ್‍ನಲ್ಲಿಯೇ ಸಂಗೀತ ಸಂಗ್ರಹಿಸುವ ಸೌಲಭ್ಯ ಒಳಗೊಂಡಿರಲಿದೆ.

ಕ್ರೀಡೆಗಳ ಆ್ಯಪ್ ಜತೆಗೆ, ಈ ಸ್ಮಾರ್ಟ್ ಕೈಗಡಿಯಾರಗಳು, ಆರೋಗ್ಯದ ಮೇಲೆ ನಿಗಾ ಇರಿಸುವ ಸೌಲಭ್ಯಗಳಾದ ಗುಣಮಟ್ಟದ ನಿದ್ದೆಗೆ ಕಾರಣವಾಗುವ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಅಳೆಯುವ ಪಲ್ಸ್ ಒಎಕ್ಸ್2, ಉಸಿರಾಟದ ಮೇಲೆ ನಿಗಾ ಇರಿಸುವ, ಅಸಹಜ ಹೃದಯ ಬಡಿತದ ಎಚ್ಚರಿಕೆ ನೀಡುವ (ಗರಿಷ್ಠ ಮತ್ತು ಕನಿಷ್ಠ), ಋತುಚಕ್ರದ ಮೇಲೆ ನಿಗಾ ಇರಿಸುವ, ಒತ್ತಡದ ಮಟ್ಟ ಅಳೆಯುತ್ತಲೇ ವಿಶ್ರಾಂತಿ ತೆಗೆದುಕೊಳ್ಳುವುದನ್ನು ನೆನಪಿಸುವುದೂ ಸೇರಿದಂತೆ ಆರೋಗ್ಯ ರಕ್ಷಣೆಗೆ ವಹಿಸಬೇಕಾದ ಕಾಳಜಿ ನೆನಪಿಸುವ ವಿಶೇಷ ಸೌಲಭ್ಯಗಳನ್ನು ಒಳಗೊಂಡಿವೆ.

ಈ ವಾಚ್ ಮೂಲಕ ಹಣವನ್ನೂ ವರ್ಗಾಯಿಸಬಹುದು!.

 ಬಳಕೆದಾರರಿಗೆ ಹೆಚ್ಚು ಅನುಕೂಲತೆ ಕಲ್ಪಿಸಲು ವೆನ್ಯು ಎಸ್‍ಕ್ಯು, ಸ್ಮಾರ್ಟ್‍ವಾಚ್ ಮೋಡ್‍ನಲ್ಲಿ ಬ್ಯಾಟರಿಯು 6 ದಿನಗಳವರೆಗೆ ಮತ್ತು ಜಿಪಿಎಸ್ ಮೋಡ್‍ನಲ್ಲಿ 14 ಗಂಟೆಗಳವರೆಗೆ ಬಾಳಿಕೆ ಬರಲಿದೆ.  ಹಬ್ಬಗಳ ಸಂದರ್ಭದಲ್ಲಿ ಸಂಪೂರ್ಣ ಹೊಸದಾದ ವೆನ್ಯು ಎಸ್‍ಕ್ಯು ಪರಿಚಯಿಸಿರುವುದರ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿರುವ ಗಾರ್ಮಿನ್ ಇಂಡಿಯಾದ ನಿರ್ದೇಶಕ ಅಲಿ ರಿಜ್ವಿ ಅವರು, ‘ಶ್ರೇಷ್ಠ ದರ್ಜೆಯ ಉತ್ಪನ್ನ ಮತ್ತು ಉನ್ನತ ಮಟ್ಟದ ತಂತ್ರಜ್ಞಾನ ಆವಿಷ್ಕಾರಗಳನ್ನು ಬಳಸಿಕೊಂಡು ನಮ್ಮ ಗ್ರಾಹಕರ ಅಗತ್ಯಗಳನ್ನೆಲ್ಲ ಪೂರೈಸಲು ನಾವು ಸದಾಕಾಲವು ಆದ್ಯತೆ ನೀಡುತ್ತಿದ್ದೇವೆ. ಇಂದು ಮಾರುಕಟ್ಟೆಗೆ ಪರಿಚಯಿಸಿದ ವೆನ್ಯು ಎಸ್‍ಕ್ಯು ಸ್ಮಾರ್ಟ್‍ವಾಚ್‍ಗಳ ಮೂಲಕ ನಾವೀಗ ಹೊಸ ಮಾರುಕಟ್ಟೆ ವಲಯ ಪ್ರವೇಶಿಸಿದ್ದೇವೆ. ಇಲ್ಲಿ ಗ್ರಾಹಕರು ಗಾರ್ಮಿನ್ ಸ್ಮಾರ್ಟ್‍ವಾಚ್‍ಗಳನ್ನು  ಸ್ಪರ್ಧಾತ್ಮಕ ಬೆಲೆಯಲ್ಲಿ, ಸ್ಮಾರ್ಟ್‍ವಾಚ್‍ನಲ್ಲಿ ಅಂತರ್ಗತವಾಗಿರುವ 20 ವಿವಿಧ ಬಗೆಯ ಕ್ರೀಡೆಗಳ ಕಿರುತಂತ್ರಾಂಶ (ಸ್ಪೋಟ್ರ್ಸ್ ಆ್ಯಪ್)  ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿರುವುದರ ಜತೆಗೆ ಸಂಗೀತ ಸಂಗ್ರಹಿಸಬಹುದಾದ, ಗುಣಮಟ್ಟದ ನಿದ್ದೆಗೆ ಕಾರಣವಾಗುವ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಅಳೆಯುವ ಪಲ್ಸ್ ಒಎಕ್ಸ್2, ದಿನದ ಎಲ್ಲ ಸಂದರ್ಭಗಳಲ್ಲಿಯೂ (24/7) ನಿರ್ವಹಣಾ ಸೌಲಭ್ಯಗಳನ್ನು ಒಳಗೊಂಡ ಸ್ಮಾರ್ಟ್‍ವಾಚ್‍ಗಳನ್ನು ಖರೀದಿಸಬಹುದು’ ಎಂದು ಹೇಳಿದ್ದಾರೆ.

ವೆನ್ಯು ಎಸ್‍ಕ್ಯುನಲ್ಲಿ ಲಭ್ಯ ಇರುವ ದೈಹಿಕ ಕಸರತ್ತಿನ ಆಯ್ಕೆಗಳ ಜತೆಗೆ,  ಹೊಸ ವರ್ಕ್‍ಔಟ್‍ಗಳನ್ನು ಗಾರ್ಮಿನ್ ಕನೆಕ್ಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು, ಗ್ರಾಹಕರು ತಮ್ಮದೇ ಆದ ಸ್ವಂತ ವರ್ಕ್‍ಔಟ್‍ಗಳನ್ನು ನಿಗದಿಪಡಿಸಬಹುದು. 5 ಕಿ.ಮೀ ದೂರದವರೆಗಿನ ಅಥವಾ ಅದಕ್ಕಿಂತ ಹೆಚ್ಚಿನ ದೂರದ ಗಾರ್ಮಿನ್ ಕೋಚ್‍ನ ಉಚಿತ ತರಬೇತಿಯು ಓಟಗಾರನ ಗುರಿ ಮತ್ತು ಸಾಧನೆಗೆ ಪೂರಕವಾಗಿರಲಿದೆ. ಬಳಕೆದಾರರಿಗೆ ಹೆಚ್ಚುವರಿ ಸ್ಪೂರ್ತಿ ನೀಡಲು ಗಾರ್ಮಿನ್ ಕೋಚ್ ವರ್ಚುವಲ್ ವೈಯಕ್ತಿಕ ತರಬೇತುದಾರನ ಪಾತ್ರ ನಿರ್ವಹಿಸಲಿದೆ. 

ವಿನೂತನ ಬಗೆಯ ಬಾಡಿ ಬ್ಯಾಟರಿಯ ನೆರವಿನಿಂದ ಬಳಕೆದಾರರು ತಮ್ಮ ದೈಹಿಕ ಸಾಮಥ್ರ್ಯದ ಮೇಲೆ ನಿರಂತರವಾಗಿ ನಿಗಾ ಇರಿಸಬಹುದು. ಅದರಿಂದ ದೈಹಿಕ ಕಸರತ್ತು ಮಾಡಬೇಕಾದ ಸಮಯ, ವಿರಾಮ ಪಡೆಯುವ ಮತ್ತು ನಿದ್ರಿಸುವ ಸಮಯವನ್ನು ನಿಗದಿಪಡಿಸಬಹುದು.

ಮಾಹಿತಿ ಸಂದೇಶ: ಒಳಬರುವ ಕರೆ, ಸಂದೇಶ, ಸಾಮಾಜಿಕ ಮಾಧ್ಯಮಗಳ ಹೊಸ ವಿವರ, ಕ್ಯಾಲೆಂಡರ್ ಜ್ಞಾಪನೆ ಮತ್ತಿತರ ಸಂಗತಿಗಳÀ ಬಗ್ಗೆ ಮಾಹಿತಿ ನೀಡುವ ಸ್ಮಾರ್ಟ್ ವ್ಯವಸ್ಥೆ1 ಇದರಲ್ಲಿದೆ. ಆಂಡ್ರಾಯ್ಡ್ ಬಳಕೆದಾರರು ಈ ಸಾಧನದಿಂದಲೇ ಟೆಕ್ಸ್ಟ್ ಸಂದೇಶ ಕಳಿಸಬಹುದು.

ಸಂಗೀತ ಸಂಗ್ರಹ:  ವೆನ್ಯು ಎಸ್‍ಕ್ಯು ಮ್ಯೂಸಿಕ್  ಆವೃತ್ತಿಯಲ್ಲಿ ಹಾಡುಗಳನ್ನು ಅಥವಾ ಪ್ಲೇಲಿಸ್ಟ್‍ಗಳನ್ನು2 ಡೌನ್‍ಲೋಡ್ ಮಾಡಿಕೊಳ್ಳಬಹುದು. ಸಂಗೀತ ಸೇವೆ ಒದಗಿಸುವ ಸ್ಪೂಟಿಫೈ ಮತ್ತು ಅಮೆಜಾನ್ ಮ್ಯೂಸಿಕ್‍ನಿಂದಲೂ ಡೌನ್‍ಲೋಡ್ ಮಾಡಿಕೊಳ್ಳಬಹುದು.  

ಸುರಕ್ಷತೆ ಮತ್ತು ನಿಗಾ ವ್ಯವಸ್ಥೆ: ಹೊರಗೆ ತಿರುಗುವಾಗ, ಓಡುವಾಗ ಅಥವಾ ಸವಾರಿ ಮಾಡುವಾಗ ನಡೆಯುವ ಆಕಸ್ಮಿಕವಾಗಿ ಸಂಭವಿಸುವ ಅವಘಡಗಳ ಮಾಹಿತಿಯನ್ನು ತುರ್ತಾಗಿ ಸಂಪರ್ಕಿಸಬೇಕಾದವರಿಗೆ ಘಟನಾ ಸ್ಥಳದ ನೈಜ ವಿವರಗಳನ್ನು ರವಾನಿಸಲಿದೆ. 

ವೈಯಕ್ತೀಕರಣ: ಆ್ಯಪ್‍ಗಳನ್ನು, ಪುಟ್ಟ ಗ್ಯಾಜೆಟ್‍ಗಳನ್ನು ಗಾರ್ಮಿನ್ ಕನೆಕ್ಟ್ ಐಕ್ಯು ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಗ್ರಾಹಕರು ತಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಬಹುದು.

ಹೊಂದಾಣಿಕೆ: ವೆನ್ಯು ಎಸ್‍ಕ್ಯು ಅನ್ನು ಬಹುತೇಕ ಯಾವುದೇ ಸ್ಮಾರ್ಟ್‍ಫೋನ್ ಜತೆ ಸುಲಭವಾಗಿ ಸಂಪರ್ಕಿಸಬಹುದು. (ಆಂಡ್ರಾಯ್ಡ್ ಖಿಒ ಮತ್ತು ಆ್ಯಪಲ್ ಲ  ಮೊಬೈಲ್‍ಗಳ ಜತೆ) 
 
ಬೆಲೆ: ಹೊಸ ಶ್ರೇಣಿಯ ವೆನ್ಯು ಎಸ್‍ಕ್ಯು ಆಕರ್ಷಕ ಬೆಲೆ ರೂ 21,090 ಮತ್ತು ವೆನ್ಯು ಎಸ್‍ಕ್ಯು ಮ್ಯೂಸಿಕ್ ರೂ  26,290  ಗಳಿಗೆ ದೊರೆಯಲಿವೆ. 
 

Latest Videos
Follow Us:
Download App:
  • android
  • ios