Asianet Suvarna News Asianet Suvarna News

ನಿವೃತ್ತ ಸೇನಾ ಯೋಧರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗವಕಾಶ!

ಇ ಕಾಮರ್ಸ್‌-ವೇದಿಕೆಯಲ್ಲಿ ನಿವೃತ್ತ ಯೋಧರಿಗೆ ಉದ್ಯೋಗಾವಕಾಶ ಕಲ್ಪಿಸಲು ರಕ್ಷಣಾ ಪಡೆಗಳೊಂದಿಗೆ ಪಾಲದಾರಿಕೆಯನ್ನು ಪ್ಲಿಫ್‌ಕಾರ್ಟ್ ಘೋಷಿಸಿದೆ.  ಸೇನಾ ಕಲ್ಯಾಣ ನಿಯೋಜನಾ ಸಂಘಟನೆ (ಎಡಬ್ಯುಪಿಒ) ಜೊತೆ ಪಾಲುದಾರಿಕೆಯಲ್ಲಿ ಇದೀಗ ಈ ಅವಕಾಶ ಘೋಷಿಸಲಾಗಿದೆ.
 

Flipkart announces FlipMarch initiative to onboard Army veterans in its workforce ckm
Author
Bengaluru, First Published Nov 27, 2020, 3:47 PM IST

ಬೆಂಗಳೂರು(ನ.26) : ಭಾರತದ ದೇಶೀಯ ಇ-ಕಾಮರ್ಸ್‌ ಮಾರುಕಟ್ಟೆ ಪ್ರದೇಶ ಫ್ಲಿಪ್‌ಕಾರ್ಟ್‌, ಇಂದು ಸೇನಾ ಪಡೆಗಳ ಸಹಭಾಗಿತ್ವದಲ್ಲಿ, ತಮ್ಮ ಮೌಲ್ಯದ ಸರಣಿಯಲ್ಲಿ ನಿವೃತ್ತಿ ಸೇನಾ ಸಿಬ್ಬಂದಿಯನ್ನು ಒಳಗೊಳ್ಳುವ ‘ಫ್ಲಿಪ್‌ಮಾರ್ಚ್’ ಉಪಕ್ರಮಕ್ಕೆ ಚಾಲನೆ ನೀಡಿತು. ಈ ಉಪಕ್ರಮದ ಭಾಗವಾಗಿ, ಸಂಸ್ಥೆಯಲ್ಲಿ ಪಾಳಿಯ ಮೇಲೆ ಆಯ್ದ ಅಭ್ಯರ್ಥಿಗಳನ್ನು ಗುರುತಿಸಲು ಮತ್ತು ನಿಯೋಜಿಸಲು ಫ್ಲಿಪ್‌ಕಾರ್ಟ್‌ ಸೇನಾ ನಿಯೋಜನೆ ಕಲ್ಯಾಣ ಸಂಘಟನೆ (AWPO)ಯೊಂದಿಗೆ ಫ್ಲಿಪ್‌ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ.

ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಗ್ರೂಪ್ ಇನ್ಶೂರೆನ್ಸ್ ಸೌಲಭ್ಯ!...

ಈ ಉಪಕ್ರಮದಡಿ, ಆಯ್ದ ಸಿಬ್ಬಂದಿಯ ವೈಯಕ್ತೀಕರಿಸಿದ ಸೇರ್ಪಡೆ, ಅವರಿಗೆ ಬದಲಾವಣೆಯನ್ನು ಸುಲಭಗೊಳಿಸಲು ಮತ್ತು ಕಾರ್ಪೊರೇಟ್‌ ಉದ್ಯೋಗಗಳ ವಾತಾವರಣದ ಅರಿಯಲು ನೆರವಾಗುವ ಸಲುವಾಗಿ ಸೆನ್ಸಿಟೈಸೇಶನ್ ಪ್ರೋಗ್ರಾಂಗಳು ಮತ್ತು ಕ್ಯುರೇಟೆಡ್ ಲರ್ನಿಂಗ್ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಫ್ಲಿಪ್‌ಕಾರ್ಟ್‌, ಮಾಜಿ ಸೈನಿಕರಿಗೆ ಹೊಸ ವೃತ್ತಿಜೀವನದ ಹಾದಿಗಳಿಗೆ ಅವಕಾಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ.

ಗ್ರಾಹಕರ ಫ್ಯಾಷನ್ ಅನುಭವವನ್ನು ಹೆಚ್ಚಿಸಲು ABFRL ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!.

ಫ್ಲಿಪ್‌ಕಾರ್ಟ್ ಒಂದು ಸಾಮಾಜಿಕ ಜವಾಬ್ದಾರಿಯುತ ಸಂಸ್ಥೆಯಾಗಿದ್ದು ಅದು ಸಮಾಜ ಮತ್ತು ಅದರ ಪಾಲುದಾರರ ಅಭಿವೃದ್ಧಿಗಾಗಿ  ಕೆಲಸ ಮಾಡುತ್ತದೆ. ಫ್ಲಿಪ್‌ಕಾರ್ಟ್‌ ಈಗಾಗಲೇ ಪ್ರಮುಖ ಹುದ್ದೆಗಳಲ್ಲಿ ಸಶಸ್ತ್ರ ಪಡೆಗಳ ಹಲವು ಮಾಜಿ ಸದಸ್ಯರನ್ನು ಹೊಂದಿದೆ. ಜೊತೆಗೆ, ಈ ಹೊಸ ಉಪಕ್ರಮವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಸಶಸ್ತ್ರ ಪಡೆಗಳ ಸದಸ್ಯರ ನಿಷ್ಠೆ, ಶಿಸ್ತು ಮತ್ತು ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಫ್ಲಿಪ್‌ಕಾರ್ಟ್‌ಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ ಎಂದು ಫ್ಲಿಪ್‌ಕಾರ್ಟ್‌ನ ಚೀಫ್‌ ಪೀಪಲ್ಸ್‌ ಆಫೀಸರ್‌ ಕೃಷ್ಣ ರಾಘವನ್ ಹೇಳಿದ್ದಾರೆ.

ಈ ಪಾಲುದಾರಿಕೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಎರಡು ಪ್ರಭಾವಿ ಸೇವಾ ಪೂರೈಕೆದಾರರನ್ನು ಒಟ್ಟುಗೂಡಿಸುತ್ತದೆ - ಒಂದು ಪ್ರಮುಖ ಸ್ವದೇಶಿ ಇ-ಕಾಮರ್ಸ್ ವೇದಿಕೆಗೆ ಉತ್ತಮ ಮಾರುಕಟ್ಟೆ ಮತ್ತು ಭಾರತೀಯ ಸೇನಾ ಯೋಧರಿಗೆ ಮತ್ತೊಂದು ಅವಕಾಶಗಳನ್ನು ಒದಗಿಸುತ್ತದೆ. ಇದಕ್ಕೆ ಫ್ಲಿಪ್‌ಕಾರ್ಟ್ ಮತ್ತು ಎಡಬ್ಲ್ಯೂಪಿಒ ನಡುವಿನ ಈ ಒಪ್ಪಂದವು ಉದಾಹರಣೆಯಾಗಿದೆ. ಈ ಪಾಲುದಾರಿಕೆ ಪರಸ್ಪರರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮತ್ತು ಸೇನಾ ಯೋಧರಿಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಎಡಬ್ಲ್ಯೂಪಿಒ ವ್ಯವಸ್ಥಾಪಕ ನಿರ್ದೇಶಕ ಮೇಜರ್ ಜನರಲ್ ದೀಪಕ್ ಹೇಳಿದರು.

AWPO ಪ್ರಕಾರ, ಲಾಜಿಸ್ಟಿಕ್ಸ್, ಸಿಬ್ಬಂದಿ ನಿರ್ವಹಣೆ, ಬಿಕ್ಕಟ್ಟು ನಿರ್ವಹಣೆ, ಮತ್ತು ಉತ್ತಮ ತರಬೇತಿ ಪಡೆದ 30-40 ವರ್ಷ ವಯೋಮಾನದ 50,000 ಕ್ಕಿಂತಲೂ ಹೆಚ್ಚು ಸಿಬ್ಬಂದಿ ಪ್ರತಿ ವರ್ಷ ನಿವೃತ್ತಿ ಹೊಂದುತ್ತಾರೆ.

ಫ್ಲಿಪ್‌ಕಾರ್ಟ್‌ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್, “ಒಂದು ಜವಾಬ್ದಾರಿಯುತ ಸಾಂಸ್ಥಿಕ ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಅದರ ಪಾಲುದಾರರನ್ನು ಒಟ್ಟುಗೂಡಿಸುವ ಮಹತ್ವವನ್ನು ಫ್ಲಿಪ್‌ಕಾರ್ಟ್ ಅರ್ಥಮಾಡಿಕೊಂಡಿದೆ. ನಮ್ಮ ಕಾರ್ಯಪಡೆಯ ಮಾಜಿ ಸೈನ್ಯದ ಸಿಬ್ಬಂದಿಯನ್ನು ಸೇರ್ಪಡೆಗೊಳಿಸುವುದು ಸಶಸ್ತ್ರ ಪಡೆಗಳ ಕುರಿತ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಇದು ದೀರ್ಘಕಾಲದ ಸಂಬಂಧಕ್ಕೆ ನಾಂದಿ ಹಾಡುತ್ತದೆ ” ಎಂದಿದ್ದಾರೆ.

 ಫ್ಲಿಪ್‌ಕಾರ್ಟ್ ಪ್ರಸ್ತುತ ಹಲವು ಕಾರ್ಪೊರೇಟ್ ಕಚೇರಿಗಳು, ಪೂರೈಕೆ ಸರಪಳಿ ಕಾರ್ಯಾಚರಣೆಗಳು ಮತ್ತು ಭದ್ರತಾ ನಿರ್ವಹಣೆಯಲ್ಲಿ ಮಾಜಿ ಸೈನ್ಯದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಪೊರೇಟ್ ಕಚೇರಿಗಳಲ್ಲಿ 12,000 ಕ್ಕಿಂತಲೂ ಹೆಚ್ಚು ಪ್ರಬಲ ಸಿಬ್ಬಂದಿ ಹೊಂದಿದ್ದು, ಪೂರೈಕೆ ಸರಪಳಿಯಲ್ಲಿ ಸುಮಾರು 1.8 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

Follow Us:
Download App:
  • android
  • ios