ಇದೇ ತಿಂಗಳ 21ರಿಂದ ಟ್ವಿಟರ್‌ನಲ್ಲಿ ಎಡಿಟ್ ಬಟನ್ ಫೀಚರ್ ಲಭ್ಯ!

*ಟ್ವಿಟರ್‌ ಬಳಕೆದಾರರ ಬಹುದಿನಗಳ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹತವಾಗಿದೆ.
*ಟ್ವೀಟ್ ಎಡಿಟ್ ಮಾಡುವ ಫೀಚರ್ ಅನ್ನು ಸೆಪ್ಟೆಂಬರ್ 21ರಿಂದ ಆರಂಭಿಸಲಿದೆ
*ಆರಂಭದಲ್ಲಿ ಬ್ಲೂ ಟಿಕ್ ಗುರುತು ಹೊಂದಿದವರಿಗೆ ಮಾತ್ರ ಈ ಫೀಚರ್ ದೊರೆಯಲಿದೆ

Edit button feature will available on twitter from this month 21 and not for all

ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್‌ (Twitter) ಕೊನೆಗೂ ಎಡಿಟ್ (Edit) ಬಟನ್ ಪರಿಚಯಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಮೊದಲಿಗೆ ಈ ಎಡಿಟ್ ಬಟನ್ ಬ್ಲೂ ಟಿಕ್ ಬಳಕೆದಾರಿಗೆ ಮಾತ್ರವೇ ದೊರೆಯಲಿದ್ದು. ಆ ಬಳಿಕ ಎಲ್ಲ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಗಳಿವೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಯಾರು ತಿಂಗಳಿಗೆ 4.99 ಡಾಲರ್ ಪಾವತಿಸುತ್ತಾರೋ ಮತ್ತು ಬ್ಲೂ ಟಿಕ್ ಪಡೆದುಕೊಂಡಿದ್ದಾರೋ ಅವರಿಗೆ ಇದೇ ತಿಂಗಳು 21 ರಿಂದ ಎಡಿಟ್ ಬಟನ್ ಫೀಚರ್‌ ಬಳಸುಲ ಅರ್ಹರಾಗಿರುತ್ತಾರೆ. ಬಳಕೆದಾರರು ಟ್ವೀಟ್ ಮಾಡಿದ ನಂತರ ಎಡಿಟ್ ಟ್ವೀಟ್ ಫೀಚರ್ ಅನ್ನು ಬಳಸಿಕೊಂಡು, ತಾವು ಮಾಡಿದ ಟ್ವೀಟ್‌ಗಳನ್ನು ಬದಲಾಯಿಸಬಹುದು. ಟ್ವೀಟ್ ಅನ್ನು ಮೂಲದಿಂದ ಸಂಪಾದಿಸ(Edit)ಲಾಗಿದೆ ಎಂದು ಓದುಗರಿಗೆ ಸ್ಪಷ್ಟವಾಗಿ ತೋರಿಸಲು,  ಅದು ಐಕಾನ್, ಟೈಮ್‌ಸ್ಟ್ಯಾಂಪ್ ಮತ್ತು ಲೇಬಲ್ ಅನ್ನು ಹೊಂದಿರುತ್ತದೆ.

ಈ ಲೇಬಲ್‌ನ ಉಪಯೋಗದಿಂದ ಎಡಿಟ್ ಆದ ಟ್ವೀಟ್‌ನ ಸಂಪೂರ್ಣ ಮಾಹಿತಿ ದೊರೆಯಲಿದೆ. ಲೇಬಲ್ ಅನ್ನು ಸ್ಪರ್ಶಿಸುವ ಮೂಲಕ, ವೀಕ್ಷಕರು ಟ್ವೀಟ್‌ನ ಎಡಿಟ್ ಇತಿಹಾಸವನ್ನು ನೋಡಬಹುದು. ಇದು ಟ್ವೀಟ್‌ನ ಹಳೆಯ ಆವೃತ್ತಿಯನ್ನು ಒಳಗೊಂಡಿರುತ್ತದೆ. ಕೇಸಿ ನ್ಯೂಟನ್‌ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಮುಂದಿನ ವಾರದಿಂದ ಈ ಎಡಿಟ್ ಕಾರ್ಯದ ಬಗ್ಗೆ ಬಹುತೇಕ ಸಾರ್ವಜನಿಕರಿಗೂ ಗೊತ್ತಾಗಲಿದೆ ಎನ್ನಲಾಗಿದೆ.

ಅಮೆಜಾನ್ ಸೇಲ್ ಟೈಮ್‌ನಲ್ಲಿ OnePlus 10R ಪ್ರೈಮ್ ಬ್ಲೂ ಬಿಡುಗಡೆ

Twitter ಕಂಪನಿಯ ಆಂತರಿಕ ದಾಖಲೆಗಳ ಪ್ರಕಾರ, ಟ್ವೀಟ್‌ಗಳನ್ನು ಎಡಿಟ್ ಮಾಡಲು ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆಯು ಸೆಪ್ಟೆಂಬರ್ 21ರಿಂದ ಆರಂಭವಾಗಲಿದೆ. ಇದೊಂದು ವಿಶಿಷ್ಟ ಫೀಚರ್ ಎಂಬುದು ಬಹುತೇಕ ಅಭಿಪ್ರಾಯವಾಗಿದೆ. ಅಲ್ಲದೇ, ಎಡಿಟ್ ಬಟನ್ ಒದಗಿಸಬೇಕೆಂದು ಬಳಕೆದಾರರು ಮೊದಲಿನಿಂದಲೂ ಕಂಪನಿಗೆ ಆಗ್ರಹಿಸುತ್ತಾ ಬಂದಿದ್ದರು. ಟ್ವಿಟರ್‌ನ ಬಳಕೆದಾರರು, ತಾವು ಮಾಡಿದ ಟ್ವೀಟ್‌ನ ಮುದ್ರಣದೋಷಗಳು ಮತ್ತು ಕಳಪೆ ಭಾಷೆಯನ್ನು ಸರಿಪಡಿಸುವ ಸಲುವಾಗಿ ಎಡಿಟ್ ಬಟನ್ ಫೀಚರ್ ನೀಡುವಂತೆ ಕೆಲವು ವರ್ಷಗಳಿಂದ ವಿನಂತಿಸಿಕೊಂಡು ಬಂದಿದ್ದಾರೆ. ಬಳಕೆದಾರರ ಈ ಬೇಡಿಕೆ ಈಗ ಈಡೇರುವ ಸಮಯ ಬಂದಿದೆ.

ಟ್ವೀಟ್ ಎಡಿಟ್ ಟೂಲ್ ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗುವ ಮೊದಲು, ಆಂತರಿಕವಾಗಿ ಸಣ್ಣ ಪರೀಕ್ಷೆಗೆ ಒಳಗಾಗುತ್ತದೆ ಎಂದು ಟ್ವಿಟರ್ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು. ಟ್ವಿಟರ್ ಬಳಕೆದಾರರನ್ನು ಟೈಪಿಂಗ್ ತಪ್ಪುಗಳನ್ನು ಸರಿಪಡಿಸಲು ಮಾಡಲು, ತಪ್ಪಾದ ಅಥವಾ ಮಿಸ್ ಆದ ಟ್ಯಾಗ್‌ಗಳನ್ನು ಸರಿಪಡಿಸಲು ಪ್ರೋತ್ಸಾಹಿಸುತ್ತದೆ. ಬಳಕೆದಾರರು ವೈಶಿಷ್ಟ್ಯವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ನೋಡಲು ಉದ್ದೇಶಪೂರ್ವಕವಾಗಿ ಸಣ್ಣ ಮಾದರಿ ಗಾತ್ರದೊಂದಿಗೆ ಎಡಿಟ್ ಟ್ವೀಟ್ ಅನ್ನು ಪರೀಕ್ಷಿಸುತ್ತಿದೆ ಎಂದು ಟ್ವಿಟರ್ ಹೇಳಿಕೊಂಡಿದೆ.

ಪರೀಕ್ಷೆಯು ಮೊದಲು ಒಂದು ದೇಶದ ನಿವಾಸಿಗಳಿಗೆ ಮಾತ್ರ ಲಭ್ಯವಿರುತ್ತದೆ, ಇದನ್ನು ಎಲ್ಲೆಡೆ ಕಡೆಗೂ ವಿಸ್ತರಿಸುವ ಮೊದಲು 'ಜನರು ಟ್ವೀಟ್ ಎಡಿಟ್ ಬಟನ್ ಅನ್ನು ಹೇಗೆ ಬಳಸುತ್ತಾರೆ ಎಂಬುದನ್ನು ವೀಕ್ಷಿಸುತ್ತೇವೆ ಮತ್ತು ಅದರಿಂದ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲಿದ್ದೇವೆ' ಎಂದು ಟ್ವಿಟರ್ ಹೇಳಿಕೊಂಡಿದೆ. ಬಳಕೆದಾರರು ಟ್ವೀಟ್‌ಗಳನ್ನು ಹೇಗೆ ಓದುತ್ತಾರೆ, ರಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ ಎಂಬುದರ ಮೇಲೆ ಕಾರ್ಯಚಟುವಟಿಕೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು  ಟ್ವಿಟರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ಮೊಬೈಲ್ ಬ್ಯಾಂಕಿಂಗ್ Virus, ಎಚ್ಚರಿಕೆ ನೀಡಿದ ಸಂಸ್ಥೆ

ಅಂದಾಜು 320 ಮಿಲಿಯನ್ ಸಕ್ರಿಯ ಬಳಕೆದಾರರೊಂದಿಗೆ, ಹಂಚಿಕೊಂಡ ನಂತರ ಪೋಸ್ಟ್‌ಗಳನ್ನು ಬದಲಾಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ ವೈಶಿಷ್ಟ್ಯವನ್ನು ಕಾರ್ಯಗತಗೊಳಿಸಲು  ಟ್ವಿಟರ್‌ಗೆ ಸಾಕಷ್ಟು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಬಳಕೆದಾರರಿಂದ ಅನೇಕ ಮನವಿಗಳ ಹೊರತಾಗಿಯೂ, ಟ್ವಿಟರ್ ದೀರ್ಘಕಾಲದಿಂದಲೂ ಎಡಿಟ್ ಬಟನ್ ಸೇರಿಸುವುದನ್ನು ನಿರಾಕರಿಸಿಕೊಂಡು ಬಂದಿತ್ತು. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಎಡಿಟ್ ಬಟನ್ ಸೇರಿಸುವ ಬಗ್ಗೆ ಪುಕಾರುಗಳಿದ್ದವು. ಕೊನೆಗೂ ಟ್ವಿಟರ್ ಬಹು ಜನರ ಬೇಡಿಕೆಯ ಮನವಿ ಎಡಿಟ್ ಬಟನ್ ಪರಿಚಯಿಸುತ್ತಿದೆ. ಆದರೆ, ಎಲ್ಲ ಬಳಕೆದಾರರಿಗೂ ಈ ಎಡಿಟ್ ಬಟನ್ ಫೀಚರ್ ದೊರೆಯಲು ಇನ್ನೂ ಸ್ವಲ್ಪ ದಿನ ಕಾಯಬೇಕಾಗಿ ಬರಬಹುದು.

Latest Videos
Follow Us:
Download App:
  • android
  • ios