National Startup Day ಫ್ಲಿಪ್‌ಕಾರ್ಟ್‌ ಲೀಪ್‌ನ 2ನೇ ಹಂತದ ಫ್ಲಾಗ್‌ಶಿಪ್‌ ಪ್ರೋಗ್ರಾಂ ಅರಂಭ, ಆಸಕ್ತರಿಂದ ಅರ್ಜಿ ಆಹ್ವಾನ!

  • ಫ್ಲಿಪ್‌ಕಾರ್ಟ್‌ ಲೀಪ್‌ ಅಹೆಡ್‌ ಮತ್ತು ಫ್ಲಿಪ್‌ಕಾರ್ಟ್‌ ಲೀಪ್‌ ಇನೊವೇಷನ್‌ ನೆಟ್‌ವರ್ಕ್‌ಗೆ ಚಾಲನೆ
  • ಸ್ಟಾರ್ಟ್‌ಅಪ್‌ಗಳಿಗೆ ಈಕ್ವಿಟಿ ಆಧಾರಿತ ಹೂಡಿಕೆ ಒದಗಿಸಲಿರುವ ಫ್ಲಿಪ್‌ಕಾರ್ಟ್‌
  •  ಫ್ಲಿಪ್‌ಕಾರ್ಟ್‌ ತಾಂತ್ರಿಕ ತಂಡಗಳೊಂದಿಗೆ ವಾಣಿಜ್ಯ ಪಾಲುದಾರಿಕೆ ಬೆಳೆಸಲು ಅವಕಾಶ 
E commerce firm Flipkart announces Leap Ahead and Leap Innovation Network on startup accelerator program ckm

ಬೆಂಗಳೂರು(ಜ.17): ಭಾರತದ ದೇಶೀಯ ಇ-ಕಾಮರ್ಸ್‌(E commerce) ಮಾರುಕಟ್ಟೆ ಪ್ರದೇಶ ಫ್ಲಿಪ್‌ಕಾರ್ಟ್‌, ತನ್ನ ಪ್ಲಾಗ್‌ಶಿಪ್‌ ಸ್ಟಾರ್ಟ್‌ಅಪ್‌ ವೇಗವರ್ಧಕ ಪ್ರೋಗ್ರಾಂ-ಫ್ಲಿಪ್‌ಕಾರ್ಟ್‌ ಲೀಪ್‌ನ ಪ್ರೋಗ್ರಾಂ ಘೋಷಿಸಿದೆ.  ಆಯ್ದ ಸ್ಟಾರ್ಟ್‌ಅಪ್‌ಗಳಿಗೆ(Startup) ಸೂಕ್ತ ಹಾಗೂ  ಮಾರುಕಟ್ಟೆ ವಿಶಾಲ ಮಾರುಕಟ್ಟೆ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯ ಮೊದಲ ಹಂತದ ಯಶಸ್ವಿ ಮುಕ್ತಾಯದ ನಂತರ, ಫ್ಲಿಪ್‌ಕಾರ್ಟ್‌ ಈಗ ಎರಡು ಹೊಸ ಕಾರ್ಯಕ್ರಮ ಘೋಷಿಸಿದೆ. ಫ್ಲಿಪ್‌ಕಾರ್ಟ್‌ ಲೀಪ್‌ ಅಹೆಡ್‌ (FLA) ಮತ್ತು ಫ್ಲಿಪ್‌ಕಾರ್ಟ್‌ ಲೀಪ್ ಇನೋವೇಷನ್‌ ನೆಟ್‌ವರ್ಕ್ (FLIN). ಫ್ಲಿಪ್‌ಕಾರ್ಟ್‌ ಲೀಪ್‌, ಈ ಯೋಜನೆಯನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್‌ ದಿನದಂದು ಘೋಷಿಸಿದೆ. ಇದು ದೇಶದಲ್ಲಿ ಸ್ಟಾರ್ಟ್‌ ಅಪ್‌ ಸಂಸ್ಕೃತಿಕ ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಗುರುತಿಸಿದ ದಿನವಾಗಿದೆ.

ಈ ಕಾರ್ಯಕ್ರಮವನ್ನು ವಿವಿಧ ಹಂತಗಳಲ್ಲಿ ಸ್ಟಾರ್ಟ್‌ಅಪ್‌ಗಳ ಕ್ರಿಯಾತ್ಮಕ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಎಫ್‌ಎಲ್‌ಎ ಮತ್ತು ಎಫ್‌ಎಲ್‌ಎನ್‌ಗಳು ಸ್ಟಾರ್ಟ್‌ಅಪ್‌ಗಳಿಗೆ ಒಳನೋಟಗಳು, ಮಾರ್ಗದರ್ಶನ ನೀಡುವ ಜೊತೆಗೆ, ಅಗತ್ಯವಿರುವಾಗ ಧನಸಹಾಯದ ಮೂಲಕ ಬೆಂಬಲಿಸುತ್ತದೆ, ಈ ಕಾರ್ಯಕ್ರಮಗಳು ಸ್ಟಾರ್ಟ್‌ಅಪ್‌ಗಳಿಗೆ, ತಮ್ಮ ಬೆಳವಣಿಗೆಯ ಹಂತಗಳಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆ ಅಂತ್ಯದಿಂದ ಪಾಲುದಾರಿಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

Flipkart Big Saving Days Sale 2022: ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ!

ಒಂದು ಸ್ವದೇಶಿ ಕಂಪನಿಯಾಗಿ, ಹೊಸ ಯುಗದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಹೊಸ ಯೋಜನೆಗಳನ್ನು ಘೋ಼ಷಿಸಲು ಸಂತಸವಾಗುತ್ತಿದೆ. ಹಿಂದಿನ ಆರಂಭಿಕ ಯಶಸ್ಸಿನ ಹಿನ್ನೆಲೆಯಲ್ಲಿ, ನಾವು ಫ್ಲಿಪ್‌ಕಾರ್ಟ್ ಲೀಪ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ದೀರ್ಘಾವಧಿಯಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಸಂಬಂಧಿತ ಕೊಡುಗೆಗಳನ್ನು ಕೂಡ ಪರಿಚಯಿಸುತ್ತಿದ್ದೇವೆ. ಆರಂಭಿಕ ಹಂತದಲ್ಲಿನ ಮತ್ತು ಬೆಳವಣಿಗೆಯ ಹಂತದಲ್ಲಿರುವ ಸ್ಟಾರ್ಟ್‌ಅಪ್‌ಗಳಿಗೆ, ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಅಥವಾ ಈಕ್ವಿಟಿ ಹೂಡಿಕೆಗಳು ಅವರ ಉದ್ಯಮವನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಿದೆ ಎಂದು ಫ್ಲಿಪ್‌ಕಾರ್ಟ್‌ನ ಕಾರ್ಪೊರೇಟ್  ಉಪಾಧ್ಯಕ್ಷ  ರವಿ ಅಯ್ಯರ್ ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ ಲೀಪ್‌ ಅಹೆಡ್‌
ಫ್ಲಿಪ್‌ಕಾರ್ಟ್ ಲೀಪ್ ಅಹೆಡ್ ವಿವಿಧ ವಲಯಗಳಲ್ಲಿ ಇತ್ತೀಚಿನ ತಂತ್ರಜ್ಞಾನದ ಅತ್ಯಾಧುನಿಕ ತಂತ್ರಜ್ಞಾನದ ತುದಿಯಲ್ಲಿ ಆರಂಭಿಕ ಹಂತದಲ್ಲಿರುವ ಹಾಗೂ ಫ್ಲಿಪ್‌ಕಾರ್ಟ್‌ನ ಆದ್ಯತೆಯಾಗಿರುವ ವಿಭಿನ್ನ ವ್ಯಾಪಾರ ಮಾದರಿಗಳನ್ನು ಹೊಂದಿರುವ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಕಾರ್ಯಕ್ರಮ ಫಿನ್‌ಟೆಕ್, ಪೂರೈಕೆ ಸರಪಳಿ, ಲಾಜಿಸ್ಟಿಕ್ಸ್, ಸಾಸ್ (SaaS) (ಗ್ರಾಹಕ ತಂತ್ರಜ್ಞಾನದ ಮೇಲೆ ಕೇಂದ್ರೀಕೃತ), ಪರ್ಯಾಯ ವಾಣಿಜ್ಯ, ಬಿ2ಬಿ, ಸಾಮಾಜಿಕ, ಹೆಲ್ತ್‌ಟೆಕ್, ಅಗ್ರಿಟೆಕ್ ಮತ್ತು ಎಡ್‌ಟೆಕ್, ಇತ್ಯಾದಿಗಳತ್ತ ಗಮನ ಹರಿಸಿರುವ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸವ ಗುರಿ ಹೊಂದಿದೆ.

Flipkart Big Saving Days ಆ್ಯಪಲ್ ಐಫೋನ್ 13 ಮೇಲೆ ಭರ್ಜರಿ ಡಿಸ್ಕೌಂಟ್, 19,445 ರೂ ವಿನಾಯಿತಿ!

ಆಯ್ದ ಸ್ಟಾರ್ಟ್‌ಅಪ್‌ಗಳು, ಅನುಭವಿ ಫ್ಲಿಪ್‌ಕಾರ್ಟ್ ನಾಯಕರು, ಕಸ್ಟಮೈಸ್ ಮಾಡಿದ ಪಠ್ಯಕ್ರಮ ಮತ್ತು ಫ್ಲಿಪ್‌ಕಾರ್ಟ್ ತಜ್ಞರು, ಪ್ರಮುಖ ಹೂಡಿಕೆದಾರರು ಮತ್ತು ಉದ್ಯಮ ತಜ್ಞರೊಂದಿಗೆ ಸಂಪರ್ಕ ಬೆಳೆಸುವ 1:1 ನಂತಹ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅಲ್ಲದೆ, ಈ ಕಂಪನಿಗಳು ಫ್ಲಿಪ್‌ಕಾರ್ಟ್‌ನಿಂದ 150 ಸಾವಿರದಿಂದ - 500 ಸಾವಿರ ಡಾಲರ್‌  ನಡುವಿನ ಇಕ್ವಿಟಿ ಹೂಡಿಕೆ ಮತ್ತು ಪರಿಸರ ವ್ಯವಸ್ಥೆಯ ಸಂಪರ್ಕಗಳು, ಸಹ-ಅಭಿವೃದ್ಧಿಪಡಿಸುವ ಉತ್ಪನ್ನಗಳು ಮತ್ತು ತಂತ್ರಗಳನ್ನು ಪಡೆಯುತ್ತಾರೆ.

ಫ್ಲಿಪ್‌ಕಾರ್ಟ್ ಲೀಪ್ ಅಹೆಡ್ ಪ್ರೋಗ್ರಾಂ, ಫ್ಲಿಪ್‌ಕಾರ್ಟ್ ವೆಂಚರ್ಸ್‌ ಕಳೆದ ವರ್ಷ ಘೋಷಿಸಿದ 100 ಮಿಲಿಯನ್‌ ಡಾಲರ್‌ನ ಆರಂಭಿಕ ನಿಧಿಯನ್ನು ಆಧರಿಸಿದೆ.

ಫ್ಲಿಪ್‌ಕಾರ್ಟ್‌ ಲೀಪ್‌ ಇನೋವೇಷನ್‌ ನೆಟ್‌ವರ್ಕ್ (ಎಫ್‌ಎಲ್‌ಐನ್‌)
ಫ್ಲಿಪ್‌ಕಾರ್ಟ್‌ ಲೀಪ್‌ ಇನೋವೇಷನ್‌ ನೆಟ್‌ವರ್ಕ್ ಪ್ರೋಗ್ರಾಂ ಅನ್ನು ದೊಡ್ಡ ಪ್ರಮಾಣದ ಸ್ಟಾರ್ಟ್‌ ಅಪ್‌ಗಳಿಗೆ ಫ್ಲಿಪ್‌ಕಾರ್ಟ್‌ ಉತ್ಪನ್ನಗಳು ಮತ್ತು ಟೆಕ್‌ ತಂಡಗಳೊಂದಿಗೆ ಸಂಪರ್ಕ ಹೊಂದಲು ಅವಕಾಶ ಕಲ್ಪಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಹಲವು ಸಮಸ್ಯೆಗಳನ್ನು ಪರಿಹರಿಸುವ ಪ್ರಬುದ್ಧ ಸ್ಟಾರ್ಟ್‌ಅಪ್‌ಗಳತ್ತ ಗಮನ ಹರಿಸಲಿವೆ-ಅವುಗಳೆಂದರೆ- ಪೂರೈಕೆಯ ಸರಣಿಯ ಮರುಚಿಂತೆ, ರೀಟೇಲ್‌ ಟೆಕ್‌ ನಿರ್ಮಾಣ, ಡಿಜಿಟಲ್‌ ವಾಣಿಜ್ಯದ ವೇಗವರ್ಧನೆ, ಫ್ಯಾಷನ್‌ನ ಭವಿಷ್ಯ ಮತ್ತು ಗ್ರಾಹಕರ ಅನುಭವಗಳನ್ನು ಮರುವ್ಯಾಖ್ಯಾನಿಸುವುದಾಗಿದೆ. ಆಯ್ದ ಸ್ಟಾರ್ಟ್‌ ಅಪ್‌ ಸೆಟ್‌ಗಳು ತಮ್ಮ ಪ್ರಯೋಗಗಳನ್ನು ಪ್ರದರ್ಶಿಸಲು ಮತ್ತು ಫ್ಲಿಪ್‌ಕಾರ್ಟ್‌ನೊಂದಿಗೆ ವಾಣಿಜ್ಯ ಪಾಲುದಾರಿಕೆ ಪಡೆಯಲು ಅವಕಾಶ ಪಡೆಯಲಿವೆ.

Flipkart Health+ ಮೂಲಕ Healthcare ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಫ್ಲಿಪ್‌ಕಾರ್ಟ್!

ಫ್ಲಿಪ್‌ಕಾರ್ಟ್‌ನ ಮುಖ್ಯ ಉತ್ಪನ್ನ ಮತ್ತು ತಂತ್ರಜ್ಞಾನ ಅಧಿಕಾರಿ ಜಯಂದ್ರನ್ ವೇಣುಗೋಪಾಲ್, “ಭಾರತದಲ್ಲಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ವ್ಯವಸ್ಥೆಗೆ ಫ್ಲಿಪ್‌ಕಾರ್ಟ್‌ ತನ್ನ ಬೆಂಬಲವನ್ನು ಮುಂದುವರಿಸುತ್ತಿದ್ದು, ಈ ನಿಟ್ಟಿನಲ್ಲಿ, ಇಂತಹ ಕಾರ್ಯಕ್ರಮಗಳನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಪ್ರೋಗ್ರಾಂ ಫ್ಲಿಪ್‌ಕಾರ್ಟ್ ಲೀಪ್ ಈಗ ಸ್ಟಾರ್ಟ್-ಅಪ್‌ಗಳ ವ್ಯಾಪಕ ನೆಲೆಯನ್ನು ಬೆಂಬಲಿಸುತ್ತದೆ. ಇ-ಕಾಮರ್ಸ್ ಸಮಸ್ಯೆಗಳಿಗೆ ಸಂಬಂಧಿತ ಪರಿಹಾರಗಳನ್ನು ಒದಗಿಸುತ್ತಿರುವ ಕಂಪನಿಗಳನ್ನು ಗುರುತಿಸಲು ಮತ್ತು ಅವರೊಂದಿಗೆ ಕೆಲಸ ಮಾಡಲು ನಾವು ಬಯಸುತ್ತೇವೆ ಮತ್ತು ಇ-ಕಾಮರ್ಸ್‌ನಿಂದ ಹೆಚ್ಚಿನ ಗ್ರಾಹಕರಿಗೆ ಲಾಭ ಒದಗಿಸಲು ಬಯಸುತ್ತೇವೆ. ಮುಂದಿನ 200 ಮಿಲಿಯನ್ ಗ್ರಾಹಕರನ್ನು ತಲುಪುವ ನಮ್ಮ ಪ್ರಯಾಣದಲ್ಲಿ, ದೇಶದ ಕ್ರಿಯಾತ್ಮಕ ಅಗತ್ಯಗಳನ್ನು ಪೂರೈಸುವ ನವೀನ ಪರಿಹಾರಗಳನ್ನು ಹೊಂದಿರುವ ಸ್ಟಾರ್ಟ್-ಅಪ್‌ಗಳ ಸಹಕಾರವನ್ನು ಎದುರು ನೋಡುತ್ತಿದ್ದೇವೆ” ಎಂದರು.

ಎಫ್ಎಲ್‌ಐಎನ್‌ನ ಸ್ಟಾರ್ಟ್‌ ಅಪ್‌ಗಳು ಫ್ಲಿಪ್‌ಕಾರ್ಟ್‌ ಮತ್ತು ವಿವಿಧ ಉದ್ಯಮ ತಜ್ಞರೊಂದಿಗೆ ಹಲವು ವಿಷಯಗಳ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಅವರಿಗೆ ಇ-ಕಾಮರ್ಸ್‌ ಉದ್ಯಮಕ್ಕೆ ಹೊಂದಿಕೆಯಾಗುವಂತೆ ತ್ವರಿತ ಪರಿಹಾರಗಳನ್ನು ನಿರ್ಮಿಸಲು ನೆರವಾಗುತ್ತದೆ. ಅಲ್ಲದೆ, ಇದು ಉದ್ಯಮಿಗಳ ಒಂದು ಪ್ರತ್ಯೇಕ ಸಮುದಾಯವನ್ನು ಕೂಡ ನಿರ್ಮಿಸಲಿದೆ.

2022ರ ಜನವರಿ 17 ರಿಂದ, ಫ್ಲಿಪ್‌ಕಾರ್ಟ್ ಲೀಪ್ ಅಹೆಡ್ ಮತ್ತು ಫ್ಲಿಪ್‌ಕಾರ್ಟ್ ಲೀಪ್ ಇನ್ನೋವೇಶನ್ ನೆಟ್‌ವರ್ಕ್,  ಸ್ಟಾರ್ಟ್‌ಅಪ್‌ಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತದೆ. ಅರ್ಜಿಗಳು  2022ರ ಫೆಬ್ರವರಿ 28ರವರೆಗೆ ತೆರೆದಿರುತ್ತವೆ.
 

Latest Videos
Follow Us:
Download App:
  • android
  • ios