ಆ್ಯಪಲ್‌ನ ಅತೀ ದುಬಾರಿ ಉತ್ಪನ್ನ ವಿಷನ್ ಪ್ರೋ ಬಿಡುಗಡೆ ದಿನಾಂಕ ಬಹಿರಂಗ!

ಆ್ಯಪಲ್ ಕಂಪನಿಯ ಐಫೋನ್, ಐಪ್ಯಾಡ್, ಮ್ಯಾಕ‌್‌ಬುಕ್ ಸೇರಿದಂತೆ ಹಲವು ಉತ್ಪನ್ನಗಳ ಪೈಕಿ ಅತೀ ದುಬಾರಿ ಉತ್ಪನ್ನ ವಿಷನ್ ಪ್ರೋ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಭಾರತ ಸೇರಿದಂತೆ ಎಲ್ಲಾ ಕಡೆ ವಿಷನ್ ಪ್ರೋ ಲಭ್ಯವಾಗಲಿದೆ.

Apple vision pro set to launch January 2024 most expensive wearable headset ckm

ನವದೆಹಲಿ(ಡಿ.27) ಆ್ಯಪಲ್ ಉತ್ಪನ್ನಗಳ ಪೈಕಿ ಬಹು ನಿರೀಕ್ಷಿತ ಉತ್ನನ್ನ ಬಿಡುಗಡೆಗೆ ಸಜ್ಜಾಗಿದೆ. ಆ್ಯಪಲ್ ವಿಷನ್ ಪ್ರೋ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಭಾರತ ಸೇರಿದಂತೆ ಎಲ್ಲಾ ದೇಶದಲ್ಲೂ ಬಿಡುಗಡೆಯಾಗಲಿದೆ. ಆ್ಯಪಲ್ ವಿಷನ್ ಪ್ರೋ ಬೆಲೆ  $3499. ಭಾರತೀಯ ರೂಪಾಯಿಗಳಲ್ಲಿ 2.8 ಲಕ್ಷ ರೂಪಾಯಿ. ಆ್ಯಪಲ್ ಪ್ರೋ ವಿಷನ್ ಉತ್ಪಾದನೆ ನಡೆಯುತ್ತಿದೆ. ಬರೋಬ್ಬರಿ 500,000 ಆ್ಯಪಲ್ ವಿಷನ್ ಪ್ರೋ ವಿವಿಧ ದೇಶಗಳಿಗೆ ರಫ್ತಾಗುತ್ತಿದೆ. 

ಆ್ಯಪಲ್ ವಿಷನ್ ಪ್ರೋ ಕುರಿತು ಆ್ಯಪಲ್ ಸಿಇಒ ಇತ್ತೀಚೆಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದರು. ಆ್ಯಪಲ್ ವಿಷನ್ ಪ್ರೋ ಡಿಜಿಟಲ್ ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡಲಿದೆ. ಕಾರಣ ಸದ್ಯ ಜನರು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಕ್ಯಾಮೆರಾ, ಟಿವಿ ಸೇರಿದಂತೆ ಇತರ ಗ್ಯಾಜೆಟ್ಸ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಆ್ಯಪಲ್ ಪ್ರೋ ವಿಷನ್‌ನಿಂದ ಜನರು ಈ ಗ್ಯಾಜೆಟ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಕುಕ್ ಹೇಳಿದ್ದಾರೆ.

Flipkart Winter Sale: ಹಳೆಯ ಸ್ಮಾರ್ಟ್‌ಫೋನ್‌ ಕೊಡಿ ಸಾಕು, ಅತೀ ಕಡಿಮೆ ಬೆಲೆಗೆ ಸಿಗುತ್ತೆ ಐಫೋನ್‌

ಆ್ಯಪಲ್ ವಿಷನ್ ಪ್ರೋ ಮಿನಿ ಪ್ರಾದೇಶಿಕ ಕಂಪ್ಯೂಟರ್ ರೀತಿ ಕಾರ್ಯನಿರ್ವಹಿಸುತ್ತದೆ. ಈ ವಿಷನ್ ಪ್ರೋ ಇತರರ ಜೊತೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ವಿಶೇಷ ಅಂದರೆ ಈ ವಿಷನ್ ಪ್ರೋವನ್ನು ಕಣ್ಣುಗಳಿಂದಲೂ ನಿಯಂತ್ರಿಸಬಹುದು. ಕೈಗಳು ಹಾಗೂ ಧ್ವನಿಯಿಂದಲೂ ನಿಯಂತ್ರಮ ಸಾಧ್ಯ. ಬಳಕೆದಾರರ ಇಂಟರ್ಪೇಸ್ ಮೂಲಕ ಅತ್ಯುತ್ತಮ ಅನುಭವ ನೀಡಲಿದೆ.

ವಿಷನ್ ಪ್ರೋ ಬಳಕೆದಾರರಿದೆ ಡಿಜಿಟಲ್ ಸಂವಹನ ಸಾಧ್ಯವಾಗಲಿದೆ. ಇದರಲ್ಲಿ ಅಲ್ಟ್ರಾ ಹೈ ರೆಸಲ್ಯೂಶನ್ ಡಿಸ್‌ಪ್ಲೇ ಅಳವಡಿಸಲಾಗಿದೆ. ಪ್ರತಿ ವಿಷವೂ ತಮ್ಮ ಕಣ್ಣ ಮುಂದೆ ನಡೆಯುವ ಅನುಭವ ನೀಡಲಿದೆ. ವರ್ಚುವಲ್ ಜಗತ್ತಿಗಿಂತ ರಿಯಲ್ ಜಗತ್ತಿನ ಅನುಭವ ನಿಮ್ಮದಾಗಲಿದೆ.  

ಆ್ಯಪಲ್ ಕಂಪನಿ ಉತ್ಪನ್ನಗಳು ಭಾರತದಲ್ಲಿ ಇದೀಗ ಉತ್ಪಾದನೆಯಾಗುತ್ತಿದೆ. ಪ್ರಮುಖವಾಗಿ ಐಫೋನ್ ತಯಾರಿಕೆ ಭಾರತದಲ್ಲೇ ನಡೆಯುತ್ತಿದೆ.  ಈವರೆಗೆ ಆ್ಯಪಲ್‌ ಕಂಪನಿಯು ತನ್ನ ಪ್ರತಿಷ್ಠಿತ ಉತ್ಪನ್ನವಾದ ಐಫೋನ್‌ಗಳನ್ನು ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ಜಗತ್ತಿನಾದ್ಯಂತ ಮಾರಾಟ ಮಾಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಉತ್ಪಾದನೆ ಆಧರಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿ ಈಗಾಗಲೇ ಭಾರತವು ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ದೊಡ್ಡ ಜಾಗತಿಕ ಹಬ್‌ ಆಗಿ ಹೊರಹೊಮ್ಮುತ್ತಿದೆ. ಆ್ಯಪಲ್‌ ಕಂಪನಿ ಚೀನಾದಿಂದ ಹೊರಗೂ ತನ್ನ ಉತ್ಪಾದನೆಯನ್ನು ವಿಕೇಂದ್ರೀಕರಿಸಲು ಮುಂದಾಗಿದ್ದು, ಅದರ ಭಾಗವಾಗಿ ಭಾರತದಲ್ಲಿ ಟಾಟಾ ಮೂಲಕ ಐಫೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಿದೆ. 

 

Flipkart Discount Sale: ವರ್ಷಾಂತ್ಯದಲ್ಲಿ ಕೇವಲ 323 ರೂ.ಗೆ ಸಿಗ್ತಿದೆ ಆ್ಯಪಲ್ ಏರ್‌ಪಾಡ್ಸ್‌
 

Latest Videos
Follow Us:
Download App:
  • android
  • ios