iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಸಿ ಕಣ್ಣಿನ ಚಿಕಿತ್ಸೆ, ವೈದ್ಯನ ಪ್ರಯತ್ನಕ್ಕೆ ಭರ್ಜರಿ ಯಶಸ್ಸು!
- ಕಣ್ಣಿನ ಚಿಕಿತ್ಸೆ ಮೊಬೈಲ್ ಕ್ಯಾಮಾರ ಬಳಸಿದ ಡಾಕ್ಟರ್
- ಕಣ್ಣಿನ ಸಮಸ್ಯೆ ಸುಲಭವಾಗಿ ಪತ್ತಹಚ್ಚಲು ನೆರವು
- iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಕೆ
ನ್ಯೂಯಾರ್ಕ್(ಅ.03): ವೈದ್ಯಲೋಕಕ್ಕೆ ಅಚ್ಚರಿ ನೀಡಿದ ಘಟನೆ ಅಮೆರಿಕದಲ್ಲಿ(America) ನಡೆದಿದೆ. ಮೊಬೈಲ್ ಕ್ಯಾಮರಾ(Mobile camera) ಬಳಸಿ ಕಣ್ಣಿನ ಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯ(Doctor) ಸುಲಭ ವಿಧಾನ ಪರಿಚಯಿಸಿದ್ದಾರೆ. ಕಳದ ತಿಂಗಳು ಆ್ಯಪಲ್ iPhone 13 ಪ್ರೋ ಮ್ಯಾಕ್ಸ್ ಬಿಡುಗಡೆ ಮಾಡಿತ್ತು. ಇದೇ ಫೋನ್ ಬಳಸಿದ ಡಾ. ಟೊಮಿ ಕೊರ್ನ್ ಕಣ್ಣಿನ ಚಿಕಿತ್ಸೆಯನ್ನು(Eye Treatment) ಯಶಸ್ವಿಯಾಗಿ ಹಾಗೂ ಸುಲಭವಾಗಿ ಮಾಡಿದ್ದಾರೆ.
ಆಂಡ್ರಾಯ್ಡ್‌ಗಿಂತ ಆಪಲ್ ಫೋನುಗಳು ಯಾಕೆ ಬೆಸ್ಟು?ಇತ್ತೀಚೆಗೆ ಬಿಡುಗಡೆಯಾಗುವ ಮೊಬೈಲ್ ಫೋನ್ ಅತ್ಯುತ್ತಮ ಕ್ಯಾಮಾರ ಹೊಂದಿದೆ. ಅದರಲ್ಲೂ ಆ್ಯಪಲ್(Apple) ಐಫೋನ್ ಕ್ಯಾಮಾರ ಅತ್ಯಂತ ಸೂಕ್ಷತೆಯನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. iPhone 13 ಪ್ರೋ ಮ್ಯಾಕ್ಸ್ ಫೋನ್ ಕ್ಯಾಮರಾ ಬಳಸಿ ಕಣ್ಣಿನ ಫೋಟೋ ಹಾಗೂ ವಿಡಿಯೋ ಮೂಲಕ ಸಮಸ್ಯೆಯನ್ನು ಪತ್ತೆ ಹಚ್ಚಲಾಗುತ್ತಿದೆ. iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾದಲ್ಲಿ ಮ್ಯಾಕ್ರೋ ಮೂಡ್ ಮೂಲಕ ಕಣ್ಣಿನ ಪರೀಕ್ಷೆ ನಡೆಸಿದ್ದಾರೆ. ಇದು ಸುಲಭ ಹಾಗೂ ಯಶಸ್ವಿಯಾಗಿದೆ.
ದುರ್ಬಲ ಕಣ್ಣುಗಳ ಶಕ್ತಿ ಹೆಚ್ಚಿಸಲು ಬಯಸಿದರೆ ಈ ಯೋಗಾಸನ ಬೆಸ್ಟ್
iPhone 13 ಪ್ರೋ ಮ್ಯಾಕ್ಸ್ ಮೊಬೈಲ್ ಫೋನ್‌ನಲ್ಲಿರುವ ಕ್ಯಾಮರದಲ್ಲಿ ಅಲ್ಟ್ರಾ ವೈಡ್ ಕ್ಯಾಮರ ಬಳಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಶಾರ್ಪ್ ರೇಸ್ ಮೂಲಕ ಕಣ್ಣಿನ ಸಮಸ್ಯೆ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ ಕಣ್ಣಿನ ಸಮಸ್ಯೆಯನ್ನು ಅಲ್ಟ್ರಾ ವೈಡ್ ಕ್ಯಾಮಾರದಲ್ಲೂ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ ಎಂದು ಡಾ. ಟೊಮಿ ಕೊರ್ನ್ ಹೇಳಿದ್ದಾರೆ.
ಅದೇ ಕಣ್ಣು: ಬಣ್ಣಕ್ಕೂ, ಅದೃಷ್ಟಕ್ಕೂ ಇದ್ಯಾ ಸಂಬಂಧ? ಬೆಕ್ಕಿನ ಕಣ್ಣಿದ್ದರೆ ಒಳ್ಳೇಯದಾ?
ಹೆಚ್ಚು ಗಂಭೀರವಲ್ಲದ, ಸಾಮಾನ್ಯ ಸಮಸ್ಯೆಗಳನ್ನು ಫೋನ್ ಕ್ಯಾಮರಾ ಮೂಲಕ ಪತ್ತೆ ಹಚ್ಚಲು ಸಾಧ್ಯ ಎಂದು ಕೊರ್ನ್ ಹೇಳಿದ್ದಾರೆ. ಸದ್ಯ ಟೆಲಿಕಾಲ್ , ವಿಡಿಯೋ ಕಾಲ್ ಮೂಲಕವೂ ಡಾ. ಕೊರ್ನ್ ಚಿಕಿತ್ಸೆ ನೀಡುತ್ತಿದ್ದಾರೆ. ಕೊರ್ನ್ ಸಾಧನೆ ಇದೀಗ ವೈದ್ಯಲೋಕಕ್ಕೆ ಅಚ್ಚರಿಯಾಗಿದೆ. ವೈದ್ಯಕೀಯ ಸಲಕರಣೆ, ದುಬಾರಿ ಉಪಕರಣದ ಮೂಲಕ ಕಣ್ಣಿನ ಚಿಕಿತ್ಸೆ ಬದಲು ಮೊಬೈಲ್ ಕ್ಯಾಮಾರ ಮೂಲಕ ಸಾಧ್ಯವಾಗುತ್ತಿದೆ ಅನ್ನೋದು ಅಚ್ಚರಿ ತಂದಿದೆ. ಆದರೆ ಗಂಭೀರ ಸಮಸ್ಯೆಗಳಿಗೆ ಹೆಚ್ಚು ಸೌಲಭ್ಯಗಳ ಆಸ್ಪತ್ರೆಗೆ ತೆರಳುವುದು ಒಳಿತು ಎಂದು ಡಾ.ಕೊರ್ನ್ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಸಲಕರಣೆಗಳು ಚಿಕಿತ್ಸಾ ವಿಧಾನವನ್ನು ಸುಲಭವಾಗಿಸುತ್ತಿದೆ. ಇದರ ನಡುವೆ ಡಾ. ಕೊರ್ನ್ ಹೊಸ ವಿಧಾನ ಪತ್ತೆ ಹಚ್ಚಿ ಎಲ್ಲರ ಗಮನಸೆಳೆದಿದ್ದಾರೆ.