ಏರ್‌ಟೆಲ್ ಗ್ರಾಹಕರಿ ಭರ್ಜರಿ ಆಫರ್, 75ಜಿಬಿ ಉಚಿತ ಡೇಟಾ ಜೊತೆಗೆ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್!
- ಅನ್‌ಲಿಮಿಟೆಡ್ ಕಾಲ್ ಹಾಗೂ 75 ಜಿಬಿ ಡೇಟಾ ಫ್ರೀ
- 6 ತಿಂಗಳವರೆಗೆ ಉಚಿತ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್
- ಹೊಸ ಪ್ಲಾನ್ ಕುರಿತು ತಿಳಿಯಲು ಈ ವರದಿ ಓದಿ
ನವದೆಹಲಿ(ಜೂ.30): ಭಾರತದಲ್ಲಿ ಟೆಲಿಕಾಂ ಸೇವಾ ಸಂಸ್ಥೆಗಳು ಇದೀಗ ಭರ್ಜರಿ ಆಫರ್ ನೀಡುತ್ತಿದೆ. ಇದೀಗ ಏರ್‌ಟೆಲ್ ತನ್ನ ಗ್ರಾಹಕರಿಗೆ ಉಚಿತ ಆಫರ್ ಘೋಷಿಸಿದೆ. ಅನ್‌ಲಿಮಿಟೆಡ್ ಕಾಲ್, 75 ಜಿಬಿ ಉಚಿತ ಡೇಟಾ, ಇದರ ಜೊತೆಗೆ 6 ತಿಂಗಳ ವರೆಗೆ ಅಮೇಜಾನ್ ಪ್ರೈಮ್ ಹಾಗೂ ಹಾಟ್‌ಸ್ಟಾರ್ ಸಂಪೂರ್ಣ ಉಚಿತವಾಗಿದೆ. ಏರ್ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆಯಡಿ ಗ್ರಾಹಕರು ಈ ಸೌಲಭ್ಯ ಪಡೆದುಕೊಳ್ಳುಬಹುದು.
ಏರ್‌ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆಯಡಿಯಲ್ಲಿ ಎರಡನೇ ಸಿಮ್ ಖರೀದಿಸಿದರೆ, ಈ ಉಚಿತ ಆಫರ್ ನಿಮ್ಮದಾಗಲಿದೆ. ಪ್ಲಾನ್ 499 ರೂಪಾಯಿ ಫ್ಯಾಮಿಲಿ ಪ್ಲಾನ್ ಹಾಕಿಕೊಂಡರೆ ಅನಿಯಮಿತ ಸ್ಥಳೀಯ ಕರೆ, ಎಸ್‌ಟಿಡಿ ಹಾಗೂ ರೋಮಿಂಗ್ ಕರೆಗಳು ಉಚಿತವಾಗಿದೆ. ಇನ್ನು ಪ್ರತಿ ತಿಂಗಳು 75 ಜಿಬಿ ಉಚಿತ ಡೇಟಾ ಸಿಗಲಿದೆ. ಇದರ ಜೊತೆಗೆ 200 ಜಿಬಿ ಜೇಟಾ ರೋಲ್ ಓವರ್ ಕೂಡ ಸಿಗಲಿದೆ. ಪ್ರತಿ ದಿನ 100 ಎಸ್ಎಂಎಸ್ ಕೂಡ ಸಿಗಲಿದೆ.
3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಏರಟೆಲ್ 2 ಯೋಜನೆ ಲಾಂಚ್: ಬೆಲೆ ಎಷ್ಟು?
ಫ್ಯಾಮಿಲಿ ಯೋಜನೆ ಹಾಕಿಸಿಕೊಂಡ ಗ್ರಾಹಕರಿಗೆ ಉಚಿತದ ಜೊತೆಗೆ ಮತ್ತೊಂದು ಕೂಡುಗೆ ಸಿಗಲಿದೆ. ಈ ಕೊಡುಗೆಯಲ್ಲಿ ಒಟಿಟಿ ಫ್ಲಾಟ್‌ಫಾರ್ಮ್ ಉಚಿತವಾಗಲಿಲಿದೆ. ಪ್ರಮುಖವಾಗಿ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಹಾಗೂ ಹಾಟ್‌ಸ್ಟಾರ್ 6 ತಿಂಗಳ ಕಾಲ ಉಚಿತವಾಗಲಿದೆ.
ಇಂದು ಬಹುತೇಕ ಮನೆಗಳು ಒಟಿಟಿ ಫ್ಲಾಟ್‌ಫಾರ್ಮ್ ನೆಚ್ಟಿಕೊಂಡಿದೆ. ಅದರಲ್ಲೂ ಎಲ್ಲರು ಜೊತೆಯಾಗಿ ಟಿವಿ ನೋಡುವ ಕಾಲವೂ ಮರೆಯಾಗುತ್ತಿದೆ. ಅವರಿಷ್ಟದ ಹಾಗೂ ಆಸಕ್ತಿಯ ಕ್ಷೇತ್ರಗಳ ವಿಡಿಯೋಗಳನ್ನು, ಸುದ್ದಿಗಳನ್ನು ನೋಡುವುದೆ ಹೆಚ್ಚು. ಹೀಗಾಗಿ ಏರ್‌ಟೆಲ್ ಹೊಸ ಆಫರ್ ಉಪಯುಕ್ತವಾಗಿದೆ.
ಮಕ್ಕಳು ಒಟಿಟಿಯಲ್ಲಿ ಕಣ್ಣಾಡಿಸಿದ ದಿನ ಪೂರ್ತಿಯಾಗುವುದೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಒಟಿಟಿಗಳು ಎಲ್ಲರನ್ನೂ ಆವರಿಸಿಕೊಂಡು ಬಿಟ್ಟಿದೆ. ಹೀಗಾಗಿ ಏರ್‌ಟೆಲ್ ಫ್ಯಾಮಿಲಿ ಪ್ಲಾನ್ ಸೂಕ್ತವಾಗಿದೆ. ಪ್ರತಿಯೊಬ್ಬರ ಮೊಬೈಲ್‌ಗೆ ಬೇರೇ ಬೇರೆ ರಿಚಾರ್ಜ್ ಮಾಡಿಸಿ ನೆಚ್ಚಿನ ವಿಡಿಯೋಗಳನ್ನು ಅಥವಾ ಒಟಿಟಿ ಫ್ಲಾಟ್‌ಫಾರ್ಮ್ ಬಳಕೆ ಮಾಡುವುದು ಕಷ್ಟ. ಹೀಗಾಗಿ ಏರ್‌ಟೆಲ್ ಫ್ಯಾಮಿಲಿ ಪ್ಲಾನ್ ಆಫರ್ ಘೋಷಿಸಿದೆ.
ಜಿಯೋ vs ಏರ್‌ಟೆಲ್: ₹666 ಯೋಜನೆಯಲ್ಲಿ ಯಾವುದು ಉತ್ತಮ ಡೀಲ್?
ನಗರದಲ್ಲಿ 5ಜಿ ಸೇವೆ
ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್-ಐಡಿಯಾ ಈಗಾಗಲೇ ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಲಖನೌ, ಚೆನ್ನೈ, ಹೈದ್ರಾಬಾದ್, ಪುಣೆ ಮತ್ತು ಗಾಂಧೀ ನಗರಗಳಲ್ಲಿ ಟೆಲಿಕಾಂ ಇಲಾಖೆ ನೆರವಿನಿಂದ ನಡೆಸಲಾದ 5ಜಿ ಸ್ಪೆಕ್ಟ್ರಂ ಪ್ರಯೋಗ ನಡೆಸಿದೆ. ಈ ಪ್ರಯೋಗ ಯಶಸ್ವಿಯಾಗಿದೆ.
ಹಾಲಿ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ 5ಜಿ ಸೇವೆ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. ಅತ್ಯಂತ ವೇಗದ ಇಂಟೆರ್ನೆಟ್ ಸೇವೆ ಒದಗಿಸಲು ಅನುವು ಮಾಡಿಕೊಡುವ 5ಜಿ ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡುವ ಅಪರಿಮಿತ ಅವಕಾಶವನ್ನು ಹೊಂದಿದೆ. ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ ಹಲವು ಸೇವೆಗಳನ್ನು ಅತ್ಯಂತ ವೇಗವಾಗಿ ಪಡೆಯಲು ಈ ಸೇವೆ ಅವಕಾಶ ಕಲ್ಪಿಸಲಿದೆ.