Asianet Suvarna News Asianet Suvarna News

ಗೊಂದಲವಿಲ್ಲದೆ ಖರೀದಿಸಬಹುದಾದ ಅತ್ಯುತ್ತಮ 5 ಹೆಡ್‌ಫೋನ್!

ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವುದು ಸವಾಲಿನ ಕೆಲಸ. ಅದರಲ್ಲೂ ಪ್ರತಿ ದಿನ ಹೊಸ ಹೊಸ ಹೆಡ್‌ಫೋನ್ಸ್ ಬಿಡುಗಡೆಯಾಗುತ್ತಿದೆ. ಕಾರಣ ಮಾರುಕಟ್ಟೆಯಲ್ಲಿ ಹತ್ತು ಹಲವು ಬ್ರ್ಯಾಂಡ್ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಹೆಡ್‌ಫೋನ್ ಯಾವುದು? ಈ ಕುರಿತ ವಿವರ ಇಲ್ಲಿವೆ.

5 best ear headphones u can buy under rs 10000 ckm
Author
Bengaluru, First Published Oct 25, 2020, 7:27 PM IST

ಬೆಂಗಳೂರು(ಅ.5):  ಕೊರೋನಾ ವೈರಸ್ ಕಾರಣ ಬೇಕಾಬಿಟ್ಟಿ ತಿರುಗಾಡುವಂತಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಹೆಡ್‌ಫೋನ್ ಅವಶ್ಯಕತೆಯೂ ಹೆಚ್ಚಾಗಿದೆ. ಮ್ಯೂಸಿಕ್ ಆನಂದಿಸಲು, ಪೋಡ್‌ಕಾಸ್ಟ್, ಲೈವ್ ಸ್ಟ್ರೀಮಿಂಗ್, ವರ್ಕ್ ಫ್ರಮ್ ಹೋಮ್, ಕರೆ ಸ್ವೀಕರಿಸಲು ಸೇರಿದಂತೆ ಎಲ್ಲಾ ಕಾರ್ಯಗಳಿಗೆ ಹೊಂದಿಕೆಯಾಗುವ ಹೆಡ್‌ಪೋನ್ ಲಭ್ಯವಿದೆ. ಹೀಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಹೆಡ್‌ಫೋನ್ಸ್ ಕುರಿತ ವಿವರ ಇಲ್ಲಿವೆ. ಹಬ್ಬದ ಪ್ರಯುಕ್ತ ಕೆಲ ಆಫರ್ ಕೂಡ ಲಭ್ಯವಿದೆ.

ನೀವು ಖರೀದಿಸಬಹುದಾದ 5 ಅತ್ಯುತ್ತಮ ಪವರ್ ಬ್ಯಾಂಕ್!

AKG 371BT
ಹರ್ಮನ್/ ಕಾರ್ಡನ್ ಬ್ರ್ಯಾಂಡ್ ಕಂಪನಿಯ  AKG 371BT ಅತ್ಯುತ್ತಮ ಹೆಡ್‌ಫೋನ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶೇಷ ಅಂದರೆ 40 ಗಂಟೆ ಬ್ಯಾಟರಿ ಚಾರ್ಜ್ ಇರುವ ಈ ಹೆಡ್‌ಫೋನ್ಸ್ ಬೆಲೆ 7,999 ರೂಪಾಯಿ. 

JBL ಕ್ಲಬ್ 700BT
ಹೆಡ್‌ಫೋನ್ ಹಾಗೂ ಮ್ಯೂಸಿಕ್ ಸಿಸ್ಟಮ್‌ಗಳಲ್ಲಿ ಜೆಬಿಎಲ್ ಅತ್ಯಂತ ಜನಪ್ರಿಯವಾಗಿದೆ. ಜೆಬಿಎಲ್ ಕ್ಲಬ್ 700BT ಹೆಡ್‌ಫೋನ್ 2 ಗಂಟೆ ಚಾರ್ಜ್ ಮಾಡಿದರೆ 50 ಗಂಟೆ ಯಾವುದೇ ಸಮಸ್ಯೆ ಇಲ್ಲದೆ ಉಪಯೋಗಿಸಬಹುದು. ಸೌಂಡ್ ಕ್ಲಾರಿಟಿ ಅತ್ಯುತ್ತಮವಾಗಿದೆ.  JBL ಕ್ಲಬ್ 700BT ಹೆಡ್‌ಫೋನ್ಸ್ ಬೆಲೆ 8,499 ರೂಪಾಯಿ(ಆನ್‌ಲೈನ್ ಶಾಂಪಿಂಗ್ ಸೈಟ್)

ಪವರ್‌ ಬ್ಯಾಂಕ್‌ ಕುರಿತು ತಿಳಿದಿರಬೇಕಾದ 10 ಅಂಶಗಳು!.

Sennheiser HD 458 BT
Sennheiser HD 458 BT ಅತ್ಯುತ್ತಮ ಸೌಂಡ್ ಕ್ಲಾರಿಟಿಗೆ ಹೆಸರುವಾಸಿಯಾಗಿದೆ. ಆಕರ್ಷಕ ವಿನ್ಯಾಸದಲ್ಲಿ Sennheiser HD 458 BT ಹೆಡ್‌ಫೋನ್ಸ್ ಲಭ್ಯವಿದೆ. ಇದರ ಬೆಲೆ 7,490 ರೂಪಾಯಿ((ಆನ್‌ಲೈನ್ ಶಾಂಪಿಂಗ್ ಸೈಟ್)

Sony WH-CH710N
ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಸೋನಿ ವಿಶ್ವದಲ್ಲೇ ಪ್ರಖ್ಯಾತಿ ಪಡೆದಿದೆ. ಸೋನಿ ಬ್ರ್ಯಾಂಡ್ ಅಷ್ಟರಮಟ್ಟಿಗೆ ಗ್ರಾಹಕರನ್ನು ಮೋಡಿ ಮಾಡಿದೆ. ಇನ್ನು ಹೆಡ್‌ಫೋನ್ಸ್‌ಗಳಲ್ಲೂ ಸೋನಿ ಹೊರತಂದಿರುವ WH-CH710N ಉತ್ತಮವಾಗಿದೆ, ಇದರ ಬೆಲೆ 7,990 ರೂಪಾಯಿ

Marshall Major III
ಮಾರ್ಶಲ್ ಮೇಜರ್ 3 ಹೆಡ್‌ಫೋನ್ಸ್ ಹೆಚ್ಚಿನ ಕಂಟ್ರೋಲ್ ಬಟನ್ ಇಲ್ಲದಿದ್ದರೂ ಉತ್ತಮ ಸೌಂಡ್ ಕ್ಲಾರಿಟಿ ನೀಡಲಿದೆ. ಇದರ ಬೆಲೆ 5,999 ರೂಪಾಯಿ.

Follow Us:
Download App:
  • android
  • ios