ವಾರ ಭವಿಷ್ಯ: ಕಟಕ ರಾಶಿಗೆ ಈ ವಾರ ವೃತ್ತಿ ಬದುಕಿನಲ್ಲಿ ನೆಮ್ಮದಿ
ಮಿಥುನಕ್ಕೆ ಯೋಗದಿಂದ ಆದಾಯ, ತುಲಾಕ್ಕೆ ಮಿಶ್ರಫಲ.. ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 2 ಜನವರಿ 2023ರಿಂದ 8 ಜನವರಿ 2023ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.
ಮೇಷ(Aries):ನಿಮ್ಮ ಬಹುದಿನಗಳ ಕನಸು ಈ ವಾರ ನನಸಾಗಲಿದೆ. ಪ್ರಮುಖವಾದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಹಣಕಾಸಿನ ಲಾಭವೂ ನಿಶ್ಚಿತ. ಜನರೊಂದಿಗೆ ವ್ಯವಹರಿಸುವಾಗ ತುಸು ಎಚ್ಚರ ಅಗತ್ಯ. ಹಿರಿಯರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಯುತ್ತದೆ. ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಅನೇಕ ಅವಕಾಶಗಳು ಸಿಗಲಿವೆ. ಆದರೆ, ನಿರ್ಲಕ್ಷ್ಯದಿಂದ ದೊಡ್ಡ ಬೆಲೆ ತೆರಬೇಕಾಗಿ ಬರಬಹುದು, ಎಚ್ಚರ. ಈ ವಾರ ಸತ್ಯ ಮಾತನಾಡೋದ್ರಿಂದ ಅನೇಕ ಲಾಭಗಳಿವೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ.
ವೃಷಭ(Taurus):ಈ ವಾರ ನಿಮ್ಮ ಮನಸ್ಸಿನ ಆಸೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೀರಿ. ಉದ್ಯಮದಲ್ಲಿ ಲಾಭ ಗಳಿಸಲಿದ್ದೀರಿ. ಮನೆಯಲ್ಲಿ ಉತ್ತಮ ವಾತಾವರಣ ಇರಲಿದೆ. ತಲೆನೋವು ಬಾಧಿಸುವ ಸಾಧ್ಯತೆ. ಧಾರ್ಮಿಕ ಭಾವನೆಗಳು ಜಾಗೃತಗೊಳ್ಳಲಿವೆ. ದಾನ-ಧರ್ಮಕ್ಕೆ ಮುಂದಾಗುತ್ತೀರಿ. ಸಹೋದರನ ವಿಚಿತ್ರ ವರ್ತನೆ ಮನಸ್ಸಿಗೆ ನೋವುಂಟು ಮಾಡಬಹುದು. ಅವಸರದಿಂದ ಪೂರ್ಣಗೊಳಿಸಿದ ಕೆಲಸಗಳಲ್ಲಿ ತೊಂದರೆ ಎದುರಿಸುತ್ತೀರಿ. ಮಕ್ಕಳ ವರ್ತನೆಯಿಂದ ಕೂಡ ಮನಸ್ಸಿಗೆ ನೋವುಂಟಾಗಲಿದೆ.
ಮಿಥುನ(Gemini):ನಿಮ್ಮೊಳಗಿನ ಅಂತಃಶಕ್ತಿ ಈ ವಾರ ಜಾಗೃತಗೊಳ್ಳಲಿದೆ. ಪ್ರಮುಖ ವ್ಯಕ್ತಿಗಳೊಂದಿಗಿನ ನಿಮ್ಮ ಬಾಂಧವ್ಯ ಸದೃಢವಾಗಲಿದೆ. ನೀವು ಕಲಿತಿರುವ ಯೋಗ ವಿದ್ಯೆ ನಿಮ್ಮ ಸಂಪತ್ತಿನ ಮೂಲವಾಗಿ ಪರಿವರ್ತನೆಯಾಗಲಿದೆ. ನಿಮ್ಮ ಕ್ರಿಯಾಶೀಲತೆ ಅನಾವರಣಕ್ಕೆ ಸೂಕ್ತ ವೇದಿಕೆ ದೊರಕಲಿದೆ. ನಿಮ್ಮ ಪ್ರತಿಭೆಯಿಂದ ವಿಶೇಷವಾದ ಸಾಧನೆ ಮಾಡಲಿದ್ದೀರಿ. ನಿಮ್ಮ ಆಲೋಚನೆಗಳ ದಿಕ್ಕು ನಿಮಗೆ ಹೊಸ ದಾರಿಯನ್ನು ತೆರೆಯಲಿದೆ. ಹಿರಿಯರ ಅನುಭವಗಳಿಂದ ನಿಮಗೆ ಲಾಭವಾಗಲಿದೆ. ಅನಗತ್ಯ ವಾಗ್ವಾದದಿಂದ ಕುಟುಂಬ ಸದಸ್ಯರ ಮನಸ್ಸಿಗೆ ನೋವಾಗಲಿದೆ. ಆಲಸ್ಯದಿಂದ ಸಮಯ ಹಾಳು ಮಾಡುತ್ತೀರಿ, ಪರಿಣಾಮ ಮನಸ್ಸಿಗೆ ಕಸಿವಿಸಿ.
ಕಟಕ(Cancer):ಈ ವಾರ ವೃತ್ತಿ ಬದುಕಿನಲ್ಲಿ ನೆಮ್ಮದಿ. ಉದ್ಯಮ ವಿಸ್ತರಣೆಯಿಂದ ಸಂತಸ ಹಾಗೂ ಗೌರವ ಹೆಚ್ಚಾಗುವ ಸಾಧ್ಯತೆ. ಮರೆತ ಹಳೆಯ ಹೂಡಿಕೆ ಈ ವಾರ ಕೈಸೇರಲಿದೆ. ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳುತ್ತೀರಿ, ಆದರೆ ಅದರೊಂದಿಗೆ ಗೊಂದಲ ಕೂಡ ಹೆಚ್ಚಿ ಮನಸ್ಸಿನ ನೆಮ್ಮದಿ ಕೆಡಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಕೆಲವೊಂದು ಹಿನ್ನಡೆಗಳ ಬಳಿಕ ಯಶಸ್ಸು ಸಿಗಲಿದೆ. ಪ್ರಮುಖ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಈ ಲಕ್ಷಣಗಳು ನಿಮ್ಮ ಮೇಷ ರಾಶಿಯ ಗೆಳೆಯನಲ್ಲಿದ್ದರೆ, ಆತ ನಿಮ್ಮ ಪ್ರೀತಿಯಲ್ಲಿದಾನೆ ಅಂತಲೇ ಅರ್ಥ!
ಸಿಂಹ(Leo):ಈ ವಾರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತೀರಿ. ಹಿರಿಯರಿಂದ ನಿಮಗೆ ಸಾಕಷ್ಟು ನೆರವು ಸಿಗಲಿದೆ. ಹಳೆಯ ಸಂಕೀರ್ಣ ಸಮಸ್ಯೆಯೊಂದು ಈ ವಾರ ಬಗೆಹರಿಯಲಿದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತೀರಿ. ಬಡ್ತಿಯ ಸಾಧ್ಯತೆ ಕೂಡ ಇದೆ. ಮಾತನಾಡುವಾಗ ಎಚ್ಚರವಿರಲಿ, ನೀವು ಏನೇ ಹೇಳಿದರೂ ಅದನ್ನು ತಿರುಚಿ ಪರಿಸ್ಥಿತಿಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಾರೆ. ಆಸ್ತಿಗೆ ಸಂಬಂಧಿಸಿದ ಹಳೆಯ ವಿಚಾರವೊಂದು ಈ ವಾರ ಇತ್ಯರ್ಥವಾಗಲಿದೆ.
ಕನ್ಯಾ(Virgo):ಈ ವಾರ ನಿಮ್ಮ ಮೇಲಿನ ನಂಬಿಕೆಯೇ ನಿಮಗೆ ಯಶಸ್ಸು ತಂದುಕೊಡಲಿದೆ. ವಿದೇಶಿ ಸಂಪರ್ಕದಿಂದ ಲಾಭ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರಗಳಲ್ಲಿ ಮುನ್ನಡೆ. ಮಕ್ಕಳಿಗೆ ಸಂಬಂಧಿಸಿದ ಚಿಂತೆಯೊಂದು ಕಾಡಲಿದೆ. ಸಣ್ಣಪುಟ್ಟ ವಿಚಾರಗಳ ಬಗ್ಗೆ ಅತೀಯಾಗಿ ಆಲೋಚಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತೀರಿ. ವ್ಯತಿರಿಕ್ತ ಪರಿಸ್ಥಿತಿಗಳಲ್ಲಿ ಕೂಡ ನೀವು ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.
ತುಲಾ(Libra):ಈ ವಾರ ಮಿಶ್ರಫಲಗಳು ದೊರಕಲಿವೆ. ಕೈಗೊಂಡ ಕಾರ್ಯಗಳಲ್ಲಿ ಏರಿಳಿತಗಳನ್ನು ಅನುಭವಿಸುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಹೋದ್ಯೋಗಿಗಳು ಈ ವಾರ ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಈ ವಾರದ ಪ್ರಾರಂಭದಲ್ಲಿ ದಾನ-ಧರ್ಮದಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಪವಿತ್ರವಾದ ಕಾರ್ಯವೊಂದನ್ನು ಪೂರ್ಣಗೊಳಿಸುತ್ತೀರಿ. ಕೆಲವೊಂದು ನಕಾರಾತ್ಮಕ ಸುದ್ದಿಗಳು ನಿಮ್ಮ ಚಿಂತೆಯನ್ನು ಹೆಚ್ಚಿಸಿ ನೆಮ್ಮದಿ ಹಾಳು ಮಾಡುವ ಸಾಧ್ಯತೆಯಿದೆ. ಕಾಲು ಹಾಗೂ ಬೆನ್ನು ನೋವು ಬಾಧಿಸಲಿದೆ.
ವೃಶ್ಚಿಕ(Scorpio):ಈ ವಾರ ಯಶಸ್ಸು ಗಳಿಸುತ್ತೀರಿ. ಮಾತು ಹಾಗೂ ಬುದ್ಧಿವಂತಿಕೆಯಿಂದ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಹೊಸ ಆದಾಯ ಮೂಲವೊಂದು ಸಿಗಲಿದೆ. ದೊಡ್ಡ ಅವಕಾಶಗಳಿಗಾಗಿ ನಿಮ್ಮ ಹುಡುಕಾಟ ಈ ವಾರ ಅಂತ್ಯವಾಗಲಿದೆ. ವಾರದ ಪ್ರಾರಂಭದಲ್ಲಿ ಕೆಲವು ಪ್ರಮುಖ ಕಾರ್ಯಗಳು ನಿಮ್ಮ ಅರಿವಿಗೆ ಬಾರದಂತೆ ನಡೆದು ಬಿಡುತ್ತವೆ. ಇನ್ನೂ ಕೆಲವು ಕಾರ್ಯಗಳನ್ನು ನೀವು ಯೋಚಿಸಿ ಕೈಗೊಳ್ಳುತ್ತೀರಿ. ಎರಡರಿಂದಲೂ ನಿಮಗೆ ಒಂದೋ ಯಶಸ್ಸು ಇಲ್ಲವೆ ವಿಶೇಷ ಅನುಭವ ಪ್ರಾಪ್ತವಾಗಲಿದೆ.
ಧನುಸ್ಸು(Sagittarius):ಹಳೆಯ ಸಂಬಂಧವೊಂದರಿಂದ ಈ ವಾರ ಖುಷಿ ಸಿಗಲಿದೆ. ಉನ್ನತ ವರ್ಗದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದುವ ಮೂಲಕ ಪ್ರಯೋಜನ ಪಡೆಯಲಿದ್ದೀರಿ. ಯಾವುದೇ ವಿಷಯಕ್ಕೂ ತಕ್ಷಣ ಪ್ರತಿಕ್ರಿಯಿಸಬೇಡಿ. ಅನಗತ್ಯವಾಗಿ ಸಾಹಸ ಪ್ರದರ್ಶಿಸೋದು ಕೂಡ ಅಪಾಯಕಾರಿ. ಹಳೆಯ ಹೂಡಿಕೆಯಿಂದ ಈ ವಾರ ಲಾಭ ಗಳಿಸಲಿದ್ದೀರಿ. ಅನುಭವಿ ವ್ಯಕ್ತಿಗಳ ಒಡನಾಟದಿಂದ ಪ್ರಯೋಜನ. ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ.
ಮಕರ(Capricorn):ಈ ವಾರ ಖರ್ಚು ಹೆಚ್ಚಲಿದೆ. ಆದರೆ, ಆದಾಯ ಕೂಡ ಉತ್ತಮವಾಗಿರುವ ಕಾರಣ ಚಿಂತಿಸುವ ಅಗತ್ಯವಿಲ್ಲ. ಧೈರ್ಯ ಹಾಗೂ ಯೋಚನಾಶಕ್ತಿ ಹೆಚ್ಚಲಿದೆ. ಹೊಸ ಭರವಸೆಗಳು ಸಂತಸ ಮೂಡಿಸಲಿವೆ. ದಾನ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಹೊಸ ವ್ಯಕ್ತಿಗಳ ಸಂಪರ್ಕದಿಂದ ಲಾಭ. ಸೊಂಟ ಅಥವಾ ಬೆನ್ನು ನೋವು ಕಾಡುವ ಸಾಧ್ಯತೆ. ಸಂಗಾತಿಯ ಬೆಂಬಲದಿಂದ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದೀರಿ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ.
ತಿರುಪತಿ ಗರ್ಭಗುಡಿ ಮುಚ್ಚಲ್ಲ: ಮುಖ್ಯ ಅರ್ಚಕ ಸ್ಪಷ್ಟನೆ
ಕುಂಭ(Aquarius):ಈ ವಾರ ಭೌತಿಕ ವಸ್ತುಗಳ ಮೂಲಕ ಖುಷಿ ಪಡೆಯುತ್ತೀರಿ. ನಿಮ್ಮ ಸರಿಯಾದ ಲೆಕ್ಕಾಚಾರದಿಂದ ಯಶಸ್ಸು ಗಳಿಸುತ್ತೀರಿ. ಸಹನೆ ಹಾಗೂ ಅರ್ಥೈಸಿಕೊಳ್ಳುವ ನಿಮ್ಮ ಗುಣದಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. ಆರೋಗ್ಯದಲ್ಲಿ ಏರಿಳಿತ ಇದ್ದೇಇದೆ. ಕಲಿಕೆಯ ಎಡೆಗಿನ ನಿಮ್ಮ ತುಡಿತ ಹೆಚ್ಚಲಿದೆ. ಬಹುದಿನಗಳಿಂದ ಯೋಚಿಸುತ್ತಿದ್ದ ಮಹತ್ವದ ಕಾರ್ಯವೊಂದಕ್ಕೆ ಈ ವಾರ ಚಾಲನೆ ನೀಡಲಿದ್ದೀರಿ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ನೆಮ್ಮದಿಯನ್ನು ಕೂಡ ಗಳಿಸಲಿದ್ದೀರಿ. ಹಿರಿಯರ ಸಲಹೆಯಿಂದ ಪ್ರಯೋಜನ. ಕಾಲು ಹಾಗೂ ಸ್ನಾಯು ಸೆಳೆತ ಬಾಧಿಸಲಿದೆ.
ಮೀನ(Pisces):ಪ್ರತಿಕೂಲ ಸನ್ನಿವೇಶಗಳಿಂದ ಹೊರ ಬರುತ್ತೀರಿ. ವಿರೋಧಿಗಳನ್ನು ಅವರು ಹೆಣೆದ ಬಲೆಯಲ್ಲೇ ಕೆಡವಿ ಸೋಲಿಸುತ್ತೀರಿ. ನಿಮ್ಮ ಕೆಲವು ಸಂಕೀರ್ಣ ಕಾರ್ಯಗಳು ಈ ವಾರ ಪರಿಹಾರವಾಗಲಿವೆ. ಈ ವಾರದ ಪ್ರಾರಂಭದಲ್ಲಿ ಕೈಗೊಂಡ ಪ್ರಯತ್ನಗಳಿಂದ ಯಶಸ್ಸು ಸಿಗಲಿದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಹೊಸ ಯೋಚನೆಗಳಿಂದ ಲಾಭ ಗಳಿಸಲಿದ್ದೀರಿ. ಧಾರ್ಮಿಕ ವಿಚಾರಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.