ತಮಾಷೆ ಮಾಡಲು ಹೋಗಿ ಮಹಿಳೆ ಸಂಕಷ್ಟಕ್ಕೀಡಾಗಿದ್ದಾಳೆ. ಮುಂದೆ ಏನಾಯ್ತು ಎಂದು ಕಾದು ನೋಡಬೇಕಿದೆ. 

ದಕ್ಷಿಣ ಕೊರಿಯಾದಲ್ಲಿ ಒಬ್ಬ ಮಹಿಳೆ ತನ್ನ ಪುರುಷ ಸಹೋದ್ಯೋಗಿಯ ಮೇಲೆ pantsing prank ಮಾಡಿದ್ದಾರೆ. ಆ ದೇಶದ ಗ್ಯಾಂಗ್‌ವಾನ್ ಪ್ರಾಂತ್ಯದ ನ್ಯಾಯಾಲಯವು ಅವರ ಈ ಕೃತ್ಯಕ್ಕೆ ಲೈಂಗಿಕ ದುರಾಚಾರವೆಂದು ತೀರ್ಪು ನೀಡಿದೆ. ವ್ಯಕ್ತಿ ಧರಿಸಿರುವ ಪ್ಯಾಂಟ್‌ ಎಳೆಯೋದು pantsing prank ಎನ್ನಲಾಗಿದೆ. ವಿದೇಶಗಳಲ್ಲಿ ಈ ಫ್ರಾಂಕ್‌ ಬಹಳ ಚಾಲ್ತಿಯಲ್ಲಿದೆ.

ಎಷ್ಟು ದಂಡ ಹಾಕಲಾಗಿದೆ?

ಕೊರಿಯಾ ಹೆರಾಲ್ಡ್‌ನ ವರದಿಯ ಪ್ರಕಾರ, ಚುಂಚಿಯಾನ್ ಜಿಲ್ಲಾ ನ್ಯಾಯಾಲಯವು ಆ ಮಹಿಳೆಗೆ 1,71,060 ರೂಪಾಯಿ ದಂಡ ಹಾಕಿದೆ. ಅಷ್ಟೇ ಅಲ್ಲದೆ 8 ಗಂಟೆಗಳ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಶಿಕ್ಷಣದ ಕೋರ್ಸ್‌ ಕಂಪ್ಲೀಟ್‌ ಮಾಡುವಂತೆ ಹೇಳಿದೆ.

ನಿಜಕ್ಕೂ ನಡೆದಿದ್ದೇನು?

ಅಕ್ಟೋಬರ್ 3, 2024 ರಂದು,ರೆಸ್ಟೋರೆಂಟ್‌ನಲ್ಲಿ ಇತರ ಸಹೋದ್ಯೋಗಿಗಳ ಮುಂದೆಯೇ ತನ್ನ ಪುರುಷ ಸಹೋದ್ಯೋಗಿಯ ಪ್ಯಾಂಟ್‌ ಎಳೆದಿದ್ದಳು. ಆಗ ಆಕೆ ಆಕಸ್ಮಿಕವಾಗಿ ಪ್ಯಾಂಟ್‌ ಜೊತೆಗೆ ಅವನ ಒಳ ಉಡುಪನ್ನೂ ಎಳೆದುಬಿಟ್ದಿದ್ದಳು. ತಮಾಷೆ ಮಾಡಿದ ಮಹಿಳೆಗೆ 50 ವರ್ಷ, ತಮಾಷೆಗೆ ಗುರಿಯಾದ ವ್ಯಕ್ತಿ 20 ವರ್ಷದ ಹುಡುಗ ಎನ್ನಲಾಗಿದೆ.

ನ್ಯಾಯಾಲಯ ಏನು ಹೇಳಿದೆ?

ಇದು ತಮಾಷೆ ಎಂದು ಮಹಿಳೆ ವಾದ ಮಾಡಿದರೂ ಕೂಡ ದಕ್ಷಿಣ ಕೊರಿಯಾದ ಚುಂಚಿಯಾನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಈ ಕೃತ್ಯವನ್ನು ತಮಾಷೆ ಅಲ್ಲ ಎಂದು ಹೇಳಿದ್ದಾರೆ. ಈ ತಮಾಷೆಯಿಂದ ಅವಮಾನ ಆಗಿದೆ ಎಂದು ಆರೋಪಿಸಲಾಗಿದೆ. ಬಲವಂತದಿಂದ ಅನೈತಿಕ ಕೃತ್ಯ ಎಂದು ಹೇಳಲಾಗಿದೆ.

ಕ್ಷಮೆ ಕೇಳಿದ ಮಹಿಳೆ!

ಆ ಮಹಿಳೆ ಈ ಹಿಂದೆ ಯಾವುದೇ ಕ್ರಿಮಿನಲ್‌ ಕೇಸ್‌ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ತಾವು ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಲ್ಲದೆ, ಆ ಹುಡುಗನ ಪೋಷಕರಿಗೂ ಕೂಡ ಕ್ಷಮೆ ಕೇಳಿದ್ದರು. ಇದನ್ನು ಪರಿಗಣಿಸಿ ತೀರ್ಪು ನೀಡಲಾಗಿತ್ತು.

ಪ್ಯಾಂಟ್ಸಿಂಗ್ ತಮಾಷೆ ಎಂದರೇನು?

ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ತಮಾಷೆಯಾಗಿ ಯಾರಾದರೊಬ್ಬರ ಪ್ಯಾಂಟ್‌ನ್ನು ಕೆಳಗಿಳಿಸುವ ಕೆಲಸವಾಗಿದೆ. ಇದು ಸಾಮಾನ್ಯವಾಗಿ ಆ ವ್ಯಕ್ತಿಯನ್ನು ಮುಜುಗರಕ್ಕೀಡು ಮಾಡುತ್ತದೆ. ಇದನ್ನು ಕೀಟಲೆಯ ಒಂದು ರೂಪ ಎಂದು ಕರೆಯಲಾಗುತ್ತದೆ. 2019 ರಲ್ಲಿ, ದಕ್ಷಿಣ ಕೊರಿಯಾದ ಒಲಿಂಪಿಕ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಲಿಮ್ ಹ್ಯೊ-ಜುನ್ ಟೀಂ ಮೆಂಬರ್‌ ಪ್ಯಾಂಟ್‌ನ್ನು ಕೆಳಗಿಳಿಸಿದ್ದಕ್ಕಾಗಿ ಒಂದು ವರ್ಷದವರೆಗೆ ಸ್ಪರ್ಧೆಯಿಂದ ನಿಷೇಧ ಹಾಕಲಾಗಿತ್ತು.