Viral Wedding Kiss Video : ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಪಾರ್ಟನರ್ ಎಕ್ಸ್ಚೇಂಜ್ ಮಾಡ್ಕೊಂಡು ಕಿಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಇದು ಎಷ್ಟು ಸತ್ಯ? 

ಸೋಶಿಯಲ್ ಮೀಡಿಯಾದಲ್ಲಿ ನಾನಾ ವಿಡಿಯೋಗಳು ವೈರಲ್ ಆಗ್ತಿರುತ್ವೆ. ಕೆಲ ವಿಡಿಯೋಗಳು ಶಾಕ್ ನೀಡೋದು ಕಾಮನ್. ಆದ್ರೆ ಕೆಲ ವಿಡಿಯೋಗಳನ್ನು ಸರಿಯಾಗಿ ಅರ್ಥ ಮಾಡ್ಕೊಳ್ದೆ, ಜನ ಏನೇನೋ ಟೈಟಲ್ ಕೊಟ್ಟು ವೈರಲ್ ಮಾಡ್ತಿರ್ತಾರೆ. ಅದಕ್ಕೆ ಈಗ ಇನ್ನೊಂದು ವಿಡಿಯೋ ಸಾಕ್ಷ್ಯವಾಗಿದೆ. ಎರಡು ಕಪಲ್ ಕನ್ಫ್ಯೂಸ್ ಆಗಿ ತಮ್ಮ ಪಾರ್ಟನರ್ ಬದಲು ಬೇರೆ ಪಾರ್ಟನರ್ ಗೆ ಕಿಸ್ ನೀಡಿದ ವಿಡಿಯೋ ಒಂದು ವೈರಲ್ ಆಗಿದೆ. ಜನರು ನಾನಾ ಕಮೆಂಟ್ ಮಾಡ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಡಿಯೋದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ಫಾರೆನ್ ಮ್ಯಾರೇಜ್ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಎರಡು ಜೋಡಿ ನಿಂತಿರೋದನ್ನು ನೀವು ನೋಡ್ಬಹುದು. ಇಬ್ಬರು ಫೋಟೋಕ್ಕೆ ಫೋಸ್ ನೀಡಿದ ನಂತ್ರ ಲಿಪ್ ಕಿಸ್ ನೀಡ್ತಾರೆ. ಆದ್ರೆ ಈ ವಿಡಿಯೋ ವೈರಲ್ ಆಗಿದ್ದು ಕಪಲ್ ಲಿಪ್ ಕಿಸ್ ನೀಡಿದ್ದಕ್ಕಲ್ಲ. ಅವರಿಬ್ಬರು ಕನ್ಫ್ಯೂಸ್ ಮಾಡ್ಕೊಂಡು ಪಾರ್ಟನರ್ ಬದಲಿಸಿ ಕಿಸ್ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ. ಕಿಸ್ ನೀಡಿದ ನಂತ್ರ ಪಾರ್ಟನರ್ ಬದಲಾಗಿದ್ದು ಗೊತ್ತಾಗಿದೆ ಅನ್ನೋ ಶೀರ್ಷಿಕೆಯಲ್ಲಿ ಈ ವಿಡಿಯೋ ವೈರಲ್ ಮಾಡಲಾಗಿದೆ. ಕಿಸ್ ನೀಡಿದ ನಂತ್ರ ಹುಡುಗಿ ಶಾಕ್ ಆಗ್ತಾಳೆ. ಆಕೆ ರಿಯಾಕ್ಷನ್ ನೋಡಿದ ಕೆಲವರು, ಹುಡುಗಿ ಕನ್ಫ್ಯೂಸ್ ಮಾಡ್ಕೊಂಡು ತನ್ನ ಸಂಗಾತಿ ಬದಲು ಬೇರೆಯವನಿಗೆ ಕಿಸ್ ನೀಡಿದ್ದಾಳೆ ಅಂತಿದ್ದಾರೆ.

ಪತಿಗೆ ಮತ ನೀಡದವರ ಬಳಿ ₹ 3000 ವಸೂಲಿ ಮಾಡಿದಳು!

ಸೋಶಿಯಲ್ ಮೀಡಿಯಾ ಬಳಕೆದಾರರ ಕಮೆಂಟ್

ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋಕ್ಕೆ ನಾನಾ ಕಮೆಂಟ್ ನೀಡಿದ್ದಾರೆ. ಕೆಲವರು ಪಾರ್ಟನರ್ ಚೇಂಜ್ ಆಗೋದು ಈಗ ಕಾಮನ್. ಈಗಿನ ದಿನಗಳಲ್ಲಿ ಇಂಥ ಟ್ರೆಂಡ್ ಹೆಚ್ಚಾಗಿದೆ. ಭಾರತದಲ್ಲೂ ಇಂಥ ಟ್ರೆಂಡ್ ಜನ ಫಾಲೋ ಮಾಡ್ತಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಏನಾದ್ರೂ ಅಪ್ಪಿತಪ್ಪಿ ಇಂಥ ತಪ್ಪಾಗಿದ್ರೂ ಕಥೆ ಮುಗಿದಿತ್ತು. ಕೊ*ಲೆ ಗ್ಯಾರಂಟಿ, ಹೆಂಡ್ತಿ ಭಯಕ್ಕೆ ಅವನಿಗೆ ಹಾರ್ಟ್ ಅಟ್ಯಾಕ್ ಆಗ್ತಿತ್ತು ಎನ್ನುವ ಕಮೆಂಟ್ ಗಳನ್ನು ಬಳಕೆದಾರರು ಮಾಡಿದ್ದಾರೆ.

'ಶಾದಿ ಮುಬಾರಕ್' ಎಂದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್ ಇದು.. ಅಂದ್ರೆ, ವಿಜಯ್-ರಶ್ಮಿಕಾ

ವಿಡಿಯೋ ಸತ್ಯ ಏನು?

ವಿಡಿಯೋದಲ್ಲಿ ಜೋಡಿಗಳು ಲಿಪ್ ಕಿಸ್ ನೀಡಿದ್ದು ಸತ್ಯ. ಆದ್ರೆ ಪಾರ್ಟನರ್ ಅದಲು ಬದಲಾಗಿಲ್ಲ. ಮದುವೆಯಾಗ್ತಿರುವ ಜೋಡಿ ಹಾಗೂ ವರನ ಫ್ರೆಂಡ್ ಹಾಗೂ ವಧುವಿನ ಫ್ರೆಂಡ್ ಈ ವಿಡಿಯೋದಲ್ಲಿದ್ದಾರೆ. ವಧು – ವರ ಪರಸ್ಪರ ಕಿಸ್ ಕೊಟ್ಕೊಂಡಿದ್ದಾರೆ. ಆದ್ರೆ ಅದೇ ಟೈಂನಲ್ಲಿ ಫ್ರೆಂಡ್ಸ್ ಕೂಡ ಕಿಸ್ ಮಾಡಿದ್ದಾರೆ. ವಧುವಿಗೆ ತನ್ನ ಸ್ನೇಹಿತೆ ಪ್ರೀತಿ ಬಗ್ಗೆ ತಿಳಿದಿರಲಿಲ್ಲ. ಎಲ್ಲರ ಎದುರು ತನ್ನ ಸಂಗಾತಿಗೆ ಮುತ್ತಿಟ್ಟಾಗ ಆಕೆ ಶಾಕ್ ಆಗಿದ್ದಾಳೆ. ಗಂಡನ ಸ್ನೇಹಿತನನ್ನೇ ತನ್ನ ಸ್ನೇಹಿತೆ ಡೇಟ್ ಮಾಡ್ತಿರೋದು ಆಕೆಗೆ ಅಚ್ಚರಿ ನೀಡಿದೆ. ಹಾಗಾಗಿ ಆಕೆ ಶಾಕಿಂಗ್ ರಿಯಾಕ್ಷನ್ ನೀಡಿದ್ದಾಳೆ. ಖುಷಿಯಲ್ಲಿ ನಂತ್ರ ಇಬ್ಬರೂ ಹಗ್ ಮಾಡೋದನ್ನು ವಿಡಿಯೋದಲ್ಲಿ ನೋಡ್ಬಹುದು. ಅನೇಕರು ವಿಡಿಯೋವನ್ನು ಕ್ಲೀನ್ ಆಗಿ ನೋಡಿ, ಸತ್ಯ ಏನು ಎಂಬುದನ್ನು ಅರ್ಥ ಮಾಡ್ಕೊಂಡಿದ್ದಾರೆ. ತಪ್ಪಾಗಿ ತೋರಿಸ್ಬೇಡಿ, ಇಲ್ಲಿ ಪಾರ್ಟನರ್ ಅದಲು ಬದಲಾಗಿಲ್ಲ ಅಂತ ಕ್ಲಾರಿಟಿ ನೀಡಿದ್ದಾರೆ. ತಮಾಷೆಯಾಗಿ ತೆಗೆದುಕೊಂಡಿದ್ದಾರೆ.

View post on Instagram