ಹೆದ್ದಾರಿ ಮಧ್ಯೆ ಪತ್ನಿ ರೀಲ್ಸ್ ಮಾಡುತ್ತಿದ್ದರೆ, ಪತಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು "ಹೆಂಡತಿಯ ಸಂತೋಷಕ್ಕಾಗಿ ಪತಿ ಏನೆಲ್ಲಾ ಮಾಡಬೇಕು" ಎಂದು ತಮಾಷೆ ಮಾಡಿದ್ದಾರೆ. 

ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ರೀಲ್ಸ್ ಮೇಲಿನ ಮೋಹ ನಿಯಂತ್ರಣ ತಪ್ಪುತ್ತಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೇಲಿನ ಕ್ರೇಜ್ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಜನರು ಸ್ಥಳ ಮತ್ತು ಪರಿಸ್ಥಿತಿಯನ್ನು ಸಹ ಮರೆತುಬಿಡುತ್ತಾರೆ. ಎಲ್ಲಿಂದಲಾದರೂ ಫೋನ್ ಎತ್ತಿಕೊಂಡು ವಿಡಿಯೋ ಮಾಡಿ ಅಪ್‌ಲೋಡ್ ಮಾಡುವುದು ಈಗ ದಿನಚರಿಯ ಭಾಗವಾಗಿದೆ. ಈ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆ ವೈರಲ್ ಆದ ವಿಡಿಯೋದಲ್ಲಿ ಕಂಡುಬಂದಿದ್ದು, ಇದು ಜನರನ್ನು ಅಚ್ಚರಿಗೊಳಿಸಿದೆ.

ಈ ವೈರಲ್ ವಿಡಿಯೋ ಬಿಹಾರದ ಛಪ್ರಾ ಜಿಲ್ಲೆಯದು ಎಂದು ಹೇಳಲಾಗುತ್ತದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಕೆಂಪು ಸೀರೆ ಧರಿಸಿ ತನ್ನ ಪತಿಯೊಂದಿಗೆ ರೀಲ್ಸ್ ಮಾಡಿ ನೃತ್ಯ ಮಾಡುತ್ತಿದ್ದಾರೆ ಅದು ಹೆದ್ದಾರಿಯ ಮಧ್ಯದಲ್ಲಿ. ಆದರೆ ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಮಾತ್ರ ಅವರಿಗಿಂತ ಚೆನ್ನಾಗಿಯೇ ಮೋಜು ಮಾಡುತ್ತಿದ್ದಾರೆ. 

ಇನ್‌ಸ್ಟಾಗ್ರಾಮ್ ರೀಲ್ಸ್ ಕ್ರೇಜ್ ಜನರನ್ನು ಎಷ್ಟರ ಮಟ್ಟಿಗೆ ಆವರಿಸಿದೆಯೆಂದರೆ, ಅವರು ಸ್ಥಳ ಅಥವಾ ಸಂದರ್ಭವನ್ನು ನೋಡುವುದಿಲ್ಲ. ಅವರು ಎಲ್ಲಿಂದಲಾದರೂ ಫೋನ್ ಎತ್ತಿಕೊಂಡು ವಿಡಿಯೋಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಈ ರೀಲ್ಸ್ ಹುಚ್ಚು ಜನರನ್ನು ಎಷ್ಟರ ಮಟ್ಟಿಗೆ ಕುರುಡರನ್ನಾಗಿ ಮಾಡಿದೆ ಎಂದರೆ ರೀಲ್ಸ್ ನೋಡುವುದು ಅಥವಾ ತಯಾರಿಸುವುದು ಅವರಿಗೆ ಆಹಾರ ತಿನ್ನುವಷ್ಟೇ ಮುಖ್ಯವಾಗಿದೆ. ಕೆಲವೊಮ್ಮೆ ಇಡೀ ಕುಟುಂಬವು ಅದರಲ್ಲಿ ತೊಡಗಿಸಿಕೊಂಡು ಪರಸ್ಪರ ವಿಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತದೆ.

ಗಂಡ-ಹೆಂಡತಿಯ ಡ್ರಾಮಾ ನೋಡಿ ನಕ್ಕ ಜನ
ಅಚ್ಚರಿಯ ವಿಷಯವೆಂದರೆ ಈ ರೀಲ್ಸ್ ಅನ್ನು ಹೆದ್ದಾರಿಯಲ್ಲಿಯೇ ತಯಾರಿಸಲಾಗಿದೆ. ಮಹಿಳೆ ಹೆದ್ದಾರಿಯ ಮಧ್ಯದಲ್ಲಿ ನೃತ್ಯ ಮಾಡುತ್ತಿದ್ದರೆ, ಅವರ ಪತಿ ಹತ್ತಿರದಲ್ಲಿ ನಿಂತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ಆ ಮಹಿಳೆ ಕೆಂಪು ಸೀರೆಯಲ್ಲಿ ಹಾಡಿಗೆ ನೃತ್ಯ ಮಾಡುತ್ತಾಳೆ. ಹೆಲ್ಮೆಟ್ ಧರಿಸಿದ ಆಕೆಯ ಪತಿ ತನ್ನ ಮೊಬೈಲ್‌ನಲ್ಲಿ ರೀಲ್ಸ್ ಶೂಟ್ ಮಾಡುತ್ತಾನೆ. ಇನ್ನೊಂದು ರಸ್ತೆಯಲ್ಲಿ ಹಾದುಹೋಗುವ ಜನರು ಸಹ ಈ ದೃಶ್ಯವನ್ನು ನೋಡುತ್ತಾರೆ. ಕ್ಲಿಪ್ ಅನ್ನು @ChapraZila ಎಂಬ X ಪುಟದಿಂದ ಹಂಚಿಕೊಳ್ಳಲಾಗಿದ್ದು, ಇದು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 78 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದವರು ಈ ಗಂಡ-ಹೆಂಡತಿಯ ಡ್ರಾಮಾ ನೋಡಿ ನಗಲು ಪ್ರಾರಂಭಿಸಿದ್ದಾರೆ.

Scroll to load tweet…

ಎಲ್ಲರ ಬಾಯಲ್ಲೂ ಒಂದೇ ಒಂದು ಪ್ರಶ್ನೆ
ಹೌದು, ವಿಡಿಯೋ ನೋಡಿದ ಎಲ್ಲರ ಬಾಯಲ್ಲೂ ಒಂದೇ ಒಂದು ಪ್ರಶ್ನೆ ಇತ್ತು "ಬಡ ಗಂಡ ತನ್ನ ಹೆಂಡತಿಯನ್ನು ಸಂತೋಷವಾಗಿಡಲು ಏನೆಲ್ಲಾ ಮಾಡಬೇಕು"?. ಆದರೆ ಕೆಲವು ಬಳಕೆದಾರರು ಮಾತ್ರ ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ನಿಮಗೆ ಜೀವನದಲ್ಲಿ ತೊಂದರೆ ಬೇಡವಾದರೆ, ನಿಮ್ಮ ಹೆಂಡತಿಯ ಮಾತನ್ನು ಕೇಳಿ' ಎಂದು ಬರೆದಿದ್ದಾರೆ. ಮತ್ತೆ ಕೆಲವರು 'ರೀಲ್ಸ್ ಹುಚ್ಚು. ಅದು ಕೂಡ ಮುಖ್ಯ ಹೆದ್ದಾರಿಯಲ್ಲಿ. ಇಬ್ಬರೂ ತಮ್ಮ ಮನಸ್ಸಿನ ಹತೋಟಿ ಕಳೆದುಕೊಂಡಿದ್ದಾರೆ' ಎಂದು ಹೇಳುತ್ತಿದ್ದಾರೆ. ಅನೇಕ ಜನರು ಈ ವಿಡಿಯೋವನ್ನು ಮನರಂಜನೆಯಾಗಿ ತೆಗೆದುಕೊಂಡರೆ, ಮತ್ತೆ ಕೆಲವರು ಇದನ್ನು ಟೀಕಿಸಿದ್ದಾರೆ. ಇಂತಹ ಕ್ರಮಗಳು ಜೀವಕ್ಕೆ ಅಪಾಯ ತಂದುಕೊಂಡಂತೆ ಎಂದು ಸೂಚಿಸಿದ್ದಾರೆ.

ಅಂದಹಾಗೆ ರಸ್ತೆಯಲ್ಲಿ ರೀಲ್ಸ್ ತಯಾರಿಸುವುದು ತನಗೆ ಮಾತ್ರವಲ್ಲದೆ ಇತರರಿಗೂ ಅಪಾಯಕ್ಕೆ ಕಾರಣವಾಗಬಹುದು. ಇದಕ್ಕೆ ಉದಾಹರಣೆ ಇತ್ತೀಚೆಗಷ್ಟೇ ನಡೆದ ಘಟನೆ. ಆ ಹುಡುಗಿ ರೈಲಿನ ಬಾಗಿಲ ಬಳಿ ನಿಂತು ರೀಲ್ಸ್ ಮಾಡುತ್ತಿರುವಾಗ ಕೈ ಜಾರಿ ಕೆಳಕ್ಕೆ ಬೀಳುತ್ತಾಳೆ. ಆದರೆ ಅದೃಷ್ಟವಶಾತ್ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ. ರೈಲಿನ ಹ್ಯಾಂಡಲ್ ಹಿಡಿದು ಬಚಾವ್ ಆಗುತ್ತಾಳೆ. ತಕ್ಷಣ ಜಾಗೃತರಾದ ರೈಲ್ವೆ ಅಧಿಕಾರಿಗಳು ಸಹ ಈ ಕುರಿತು ಟ್ವೀಟ್ ಮಾಡುತ್ತಾರೆ. ಇಂತಹ ಘಟನೆಗಳು ಆಗಾಗ್ಗೆ ಅಲ್ಲಲ್ಲಿ ನಡೆಯುತ್ತಿರುತ್ತವೆ.