ಈ ವಿಡಿಯೋದಲ್ಲಿ, ದಂಪತಿ ನಡೆದುಕೊಂಡ ರೀತಿ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ವಿವಿಧ ಟೆಕ್ನಿಕ್ ಫಾಲೋ ಮಾಡ್ತಾರೆ. ವೈರಲ್ ಆಗಲು ಅವರು ಏನು ಬೇಕಾದರೂ ಮಾಡೋಕೂ ರೆಡಿ ಇರ್ತಾರೆ. ಅಂತಹ ವಿಡಿಯೋಗಳನ್ನ ನೀವೂ ಈಗಾಗಲೇ ನೋಡಿರ್ಬೇಕು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವವರ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ, ಆಗ್ತಾನೆ ಇರ್ತಾವೆ. ಇವರ ಹುಚ್ಚಾಟಕ್ಕೆ ಜನರೂ ಸಾಕು ಸಾಕಾಗಿ ಹೋಗಿದ್ದಾರೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ದಂಪತಿ ನಡೆದುಕೊಂಡ ರೀತಿ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಏನಿದೆ ವಿಡಿಯೋದಲ್ಲಿ?
ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ ಕಾಲುವೆಯ ಬಳಿ ನಿಂತಿರುವುದು ಕಂಡುಬರುತ್ತದೆ. ಕಾಲುವೆಯಲ್ಲಿ ನೀರಿನ ಹರಿವು ತುಂಬಾ ವೇಗವಾಗಿದೆ. ಕಾಲುವೆ ತುತ್ತ ತುದಿಗೆ ಬಂದು ನಿಂತ ಇಬ್ಬರೂ ಪರಸ್ಪರ ಹಿಡಿದುಕೊಂಡು ನದಿಗೆ ಬೀಳುತ್ತಾರೆ. ಥೇಟ್ ಸಿನಿಮಾಗಳಲ್ಲಿ ನೋಡುವಂತೆ. ಈ ಸಮಯದಲ್ಲಿ ಅನೇಕ ಜನರು ಅಲ್ಲಿಯೇ ನಿಂತು ಅವರ ಚೆಲ್ಲಾಟ ನೋಡುತ್ತಿದ್ದಾರೆ. ವಿಡಿಯೋದಲ್ಲಿ ಒರ್ವ ವ್ಯಕ್ತಿ ದಂಪತಿಯ ವಿಡಿಯೋ ಸಹ ಮಾಡುತ್ತಿರುವುದು ಕಂಡುಬರುತ್ತದೆ. ಆದ್ರೆ ದೇವ್ರು ದೊಡ್ಡವನು ಅವರಿಬ್ಬರಿಗೂ ಏನೂ ಆಗಿಲ್ಲ.

ಇಲ್ಲಿದೆ ನೋಡಿ ವಿಡಿಯೋ..

Scroll to load tweet…

ಈ ವೈರಲ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ @imnatasha09 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋಗೆ 'ಜೀವನದ ಬಗ್ಗೆ ಚಿಂತೆ ಇಲ್ಲ, ನೀರಿನ ಭಯವಿಲ್ಲ, ಕೇವಲ ರೀಲ್ಸ್ ಮಾಡಬೇಕು ಸರ್' ಎಂಬ ಶೀರ್ಷಿಕೆ ಕೊಡಲಾಗಿದೆ. ಸುದ್ದಿ ಬರೆಯುವವರೆಗೂ, ಸಾವಿರಾರು ಜನರು ವಿಡಿಯೋ ನೋಡಿದ್ದಾರೆ. ವಿಡಿಯೋ ನೋಡಿದ ಒಳಕೆದಾರರು "ಅದ್ಭುತ ಡ್ರಾಮಾ ನಡೆಯುತ್ತಿದೆ. ಸತ್ತರೂ ರೀಲ್ಸ್ ಮಾಡೋದನ್ನ ನಿಲ್ಲಿಸಬಾರದು" ಎಂದರೆ, ಮತ್ತೆ ಕೆಲವರು " ರೀಲ್ಸ್ ಚಟ ಇನ್ನೂ ಕನಸಿನಿಂದ ಹೊರಬಂದಿಲ್ಲ" ಎಂದು ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ.

ಕಿತಾಪತಿ ತಂದ ಆಪತ್ತು
ಮಕ್ಕಳ ಕಿತಾಪತಿ ಅವರನ್ನು ಅರಿವಿಲ್ಲದೆಯೇ ಅಪಾಯಕ್ಕೆ ತಳ್ಳುತ್ತದೆ. ಅದು ಮನೆಯಾಗಿರಬಹುದು ಅಥವಾ ಸಾರ್ವಜನಿಕ ಸ್ಥಳವಾಗಿರಬಹುದು ಅವರ ಮೋಜು ಕೆಲವೊಮ್ಮೆ ಭಯಾನಕ ಅಪಾಯಕ್ಕೆ ತಳ್ಳುತ್ತದೆ. ಚೀನಾದ ಚಾಂಗ್ಕಿಂಗ್ ನಗರದಿಂದಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಒಂದು ಚಿಕ್ಕ ಬಾಲಕನ ಹುಡುಗಾಟ ಅವನ ಜೀವಕ್ಕೆ ಅಪಾಯ ಉಂಟು ಮಾಡಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಟವಾಡುವಾಗ ಓರ್ವ ಚಿಕ್ಕ ಬಾಲಕ ಎಸ್ಕಲೇಟರ್ ಹತ್ತಿದಾಗ ಉತ್ಸಾಹದಿಂದ ಗೋಡೆ ಮತ್ತು ಎಸ್ಕಲೇಟರ್ ನಡುವೆ ತನ್ನ ತಲೆಯನ್ನು ಇಡುವುದನ್ನು ಕಾಣಬಹುದು. ಪರಿಣಾಮವಾಗಿ ಅವನ ತಲೆ ಅಲ್ಲಿ ಸಿಲುಕಿಕೊಳ್ಳುತ್ತದೆ. ಆ ನಂತರ ಅವನಿಗೆ ಹೊರಬರಲು ಸಾಧ್ಯವಾಗುವುದೇ ಇಲ್ಲ.

View post on Instagram

ಈ ಘಟನೆ ನಡೆದ ಸಮಯದಲ್ಲಿ ಕೆಲವರು ಹತ್ತಿರದಲ್ಲೇ ಇದ್ದರು. ಅವರು ತಕ್ಷಣ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡರು. ಓರ್ವ ವ್ಯಕ್ತಿ ತಡಮಾಡದೆ ಎಸ್ಕಲೇಟರ್ ಅನ್ನು ನಿಲ್ಲಿಸಿದನು. ಇದರಿಂದಾಗಿ ದೊಡ್ಡ ಅಪಘಾತವೇ ತಪ್ಪಿದೆ. ಇದರ ನಂತರ ಕೆಲವರು ಬಾಲಕನನ್ನು ಹೊರಗೆಳೆಯಲು ಪ್ರಯತ್ನಿಸಲು ಪ್ರಾರಂಭಿಸಿದರು. ಬಾಲಕನ ತಲೆ ಹೊರಬರುವಂತೆ ಜನರು ಎಸ್ಕಲೇಟರ್ ಅನ್ನು ಹಿಡಿದು ಸ್ವಲ್ಪ ಅಲ್ಲಾಡಿಸಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸಾಕಷ್ಟು ಪ್ರಯತ್ನಗಳ ನಂತರ ಬಾಲಕನನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು. ಅದೃಷ್ಟವಶಾತ್ ಅವನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ ಅವನನ್ನು ಪರೀಕ್ಷಿಸಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಈ ಸಂಪೂರ್ಣ ಘಟನೆಯನ್ನು ಅಲ್ಲಿದ್ದ ಯಾರೋ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು @livingchina ಎಂಬ ಹೆಸರಿನ ಖಾತೆಯಿಂದ Instagramನಲ್ಲಿ ಶೇರ್ ಮಾಡಲಾಗಿದೆ.