ಉದ್ಯೋಗ ಹುಡುಕುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೆಲಸ ಕೊಡಿಸುವ ಬದಲು, ಸ್ವಂತ ಉದ್ಯಮ ಆರಂಭಿಸಲು ಅವಕಾಶ ನೀಡಿದಾಗ ಏನಾಗುತ್ತದೆ? ಕೇವಲ 10 ಸಾವಿರದ ಆರಂಭಿಕ ಬಂಡವಾಳ, ಒಂದು ಸರಳ ಬಿಸಿನೆಸ್ ಐಡಿಯಾ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕರೆ ಬದುಕಿನ ದಿಕ್ಕನ್ನೇ ಬದಲಿಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.

ಉದ್ಯೋಗ ಹುಡುಕುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೆಲಸ ಕೊಡಿಸುವ ಬದಲು, ಸ್ವಂತ ಉದ್ಯಮ ಆರಂಭಿಸಲು ಅವಕಾಶ ನೀಡಿದಾಗ ಏನಾಗುತ್ತದೆ? ಕೇವಲ 10 ಸಾವಿರದ ಆರಂಭಿಕ ಬಂಡವಾಳ, ಒಂದು ಸರಳ ಬಿಸಿನೆಸ್ ಐಡಿಯಾ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕರೆ ಬದುಕಿನ ದಿಕ್ಕನ್ನೇ ಬದಲಿಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ನಿರುದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ಕೇವಲ ನಾಲ್ಕು ದಿನಗಳಲ್ಲಿ 441 ಪ್ಲೇಟ್ ಚೋಲೆ ಭಟೂರೆ ಮಾರಾಟ ಮಾಡಿ 10,530 ರೂಪಾಯಿ ಲಾಭ ಗಳಿಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಈ ವಿಚಾರವನ್ನು ಎಕ್ಸ್‌ (X) ಬಳಕೆದಾರ ಅಂಕಿತ್ ಪಾಂಡೆ ಹಂಚಿಕೊಂಡಿದ್ದು, ಅವರ ಪೋಸ್ಟ್ ವೈರಲ್ ಆಗಿದೆ.

ಕೆಲಸ ಹುಡುಕುವ ಬದಲು ಸ್ವಂತ ಉದ್ಯಮಕ್ಕೆ ನೆರವು

ಅಂಕಿತ್ ಪಾಂಡೆ ತಮ್ಮ ಊರಿಗೆ ತೆರಳಿದ್ದ ವೇಳೆ ಮನೆಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಆ ವ್ಯಕ್ತಿ ತನ್ನ ಸಹೋದರ ನಿರುದ್ಯೋಗಿಯಾಗಿರುವ ವಿಚಾರವನ್ನು ಪಾಂಡೆ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅವರ ಸಹೋದರ ಈ ಹಿಂದೆ ಧಾಬಾದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತ ಯಾವುದೇ ಉದ್ಯೋಗವಿಲ್ಲದೆ ಇದ್ದರು. ಹೀಗಾಗಿ ಅವರಿಗೆ ಕೆಲಸ ಹುಡುಕಿಕೊಡಲು ಸಾಧ್ಯವೇ ಎಂದು ಪಾಂಡೆ ಅವರ ಬಳಿ ಕೇಳಲಾಗಿತ್ತು. ಆದರೆ ಪಾಂಡೆ ಬೇರೆ ಉದ್ಯೋಗದಾತರನ್ನು ಹುಡುಕುವ ಬದಲು, ಅವರಿಗೆ ಸ್ವಂತವಾಗಿ ಏನಾದರೂ ಆರಂಭಿಸಲು ಸಹಾಯ ಮಾಡಬಹುದೇ? ಎಂದು ಯೋಚಿಸಿದರು. ನಂತರ ಅವರು ಆ ವ್ಯಕ್ತಿಯನ್ನು ಭೇಟಿಯಾಗಿ ಸರಳವಾದ ವ್ಯವಹಾರ ಐಡಿಯಾ ಹಂಚಿಕೊಂಡರು. ತಹಸಿಲ್ ಕಚೇರಿ ಹೊರಭಾಗದಲ್ಲಿ ಸ್ಟಾಲ್ ಹಾಕಲು ಸೂಕ್ತವಾದ ಸ್ಥಳವನ್ನೂ ಹುಡುಕಿಕೊಟ್ಟರು. ಬಳಿಕ ಆರಂಭಿಕ ಬಂಡವಾಳವಾಗಿ 10 ಸಾವಿರ ನೀಡಿದರು.

30 ರೂಪಾಯಿ ಚೋಲೆ ಭಟೂರೆ, ಮೊದಲ ದಿನವೇ 73 ಪ್ಲೇಟ್ ಮಾರಾಟ

ಹೀಗೆ 30 ರೂಪಾಯಿ ಬೆಲೆಯ ಒಂದು ಪ್ಲೇಟ್ ಚೋಲೆ ಭಟೂರೆ ಮಾರಾಟ ಮಾಡುವ ಮೂಲಕ ಸಣ್ಣ ಸ್ಟಾಲ್ ಆರಂಭವಾಯಿತು.ವ್ಯಾಪಾರ ಆರಂಭವಾದ ಮೊದಲ ದಿನವೇ 73 ಪ್ಲೇಟ್‌ಗಳು ಮಾರಾಟವಾದವು.

1ನೇ ದಿನ: 73 ಪ್ಲೇಟ್

2ನೇ ದಿನ: 101 ಪ್ಲೇಟ್

3ನೇ ದಿನ: 120 ಪ್ಲೇಟ್

4ನೇ ದಿನ: 147 ಪ್ಲೇಟ್

ಕೇವಲ ನಾಲ್ಕು ದಿನಗಳಲ್ಲಿ ಒಟ್ಟು 441 ಪ್ಲೇಟ್ ಚೋಲೆ ಭಟೂರೆ ಮಾರಾಟವಾಗಿದೆ.

4 ದಿನದಲ್ಲಿ 10,530 ರೂಪಾಯಿ ಲಾಭ

ಒಂದು ಪ್ಲೇಟ್‌ಗೆ 30 ರೂಪಾಯಿ ಅಂತೆ 441 ಪ್ಲೇಟ್ ಮಾರಾಟವಾಗಿದ್ದರಿಂದ ಒಟ್ಟು ಮಾರಾಟ 13,230 ರೂಪಾಯಿ ತಲುಪಿದೆ. ಇನ್ನು ನಾಲ್ಕು ದಿನಗಳ ಕಚ್ಚಾ ವಸ್ತುಗಳ ವೆಚ್ಚ ಸುಮಾರು 2,700 ರೂಪಾಯಿ ಆಗಿದೆ. ಇದನ್ನು ಹೊರತುಪಡಿಸಿದಾಗ ಒಟ್ಟು 10,530 ರೂಪಾಯಿ ಲಾಭ ಉಳಿದಿದೆ ಎಂದು ಅಂಕಿತ್ ಪಾಂಡೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅವರು ಹಂಚಿಕೊಂಡ ಲೆಕ್ಕಾಚಾರ ಹೀಗಿದೆ:

4 ದಿನಗಳ ಮಾರಾಟ: 13,230 ರೂಪಾಯಿ

ಕಚ್ಚಾ ವಸ್ತುಗಳ ವೆಚ್ಚ: 2,700 ರೂಪಾಯಿ

ಒಟ್ಟು ಲಾಭ: 10,530 ವ

ತಿಂಗಳಿಗೆ 68-70 ಸಾವಿರ ರೂಪಾಯಿ ಗಳಿಸಬಹುದೇ?

ಪ್ರಸ್ತುತ ಮಾರಾಟದ ವೇಗ ಮುಂದುವರಿದು, ಇದೇ ಮಟ್ಟದ ವ್ಯಾಪಾರ ಸ್ಥಿರವಾಗಿದ್ದರೆ ಈ ವ್ಯಕ್ತಿ ತಿಂಗಳಿಗೆ ಸುಮಾರು 68,000-70,000 ರೂಪಾಯಿ ಗಳಿಸಬಹುದು ಎಂದು ಪಾಂಡೆ ಅಂದಾಜಿಸಿದ್ದಾರೆ. ಅದೇ ವೇಗ ಮುಂದುವರಿದರೆ ವಾರ್ಷಿಕ ಆದಾಯ 8 ಲಕ್ಷಕ್ಕೂ ಹೆಚ್ಚು ಆಗುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ. ಇದು ಅವರ ಸಹೋದರ ಪ್ರಸ್ತುತ ಅಂಕಿತ್ ಪಾಂಡೆ ಅವರ ಮನೆಯ ಉಸ್ತುವಾರಿಯಾಗಿ ಗಳಿಸುವ ಆದಾಯಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಆಗಬಹುದು ಎಂಬುದು ಈ ಕಥೆಯ ಮತ್ತೊಂದು ಗಮನಾರ್ಹ ಅಂಶ.

ಕೆಲವೊಮ್ಮೆ ಕೆಲಸವಲ್ಲ, ಅವಕಾಶ ಬೇಕು

ಈ ಘಟನೆಯ ಬಗ್ಗೆ ಅಂಕಿತ್ ಪಾಂಡೆ ಹಂಚಿಕೊಂಡಿರುವ ಮಾತುಗಳು ಇದೀಗ ಸಾಕಷ್ಟು ಗಮನ ಸೆಳೆಯುತ್ತಿವೆ. ಕೆಲವೊಮ್ಮೆ ಜನರಿಗೆ ಕೆಲಸ ಬೇಕಾಗಿರುವುದಿಲ್ಲ. ಅವರಿಗೆ ತಮ್ಮದೇ ಆದದ್ದನ್ನು ನಿರ್ಮಿಸಲು ಅವಕಾಶ ಬೇಕಾಗುತ್ತದೆ ಎಂಬ ಅರ್ಥದ ಸಂದೇಶವನ್ನು ಅವರು ತಮ್ಮ ಪೋಸ್ಟ್‌ನ ಅಂತ್ಯದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ನಿರುದ್ಯೋಗಿಗೆ ಉದ್ಯೋಗ ಹುಡುಕಿಕೊಡುವ ಬದಲು, ಸ್ವಂತ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಲು ಅವಕಾಶ ನೀಡಿದರೆ ಅದು ದೀರ್ಘಕಾಲದ ಬದಲಾವಣೆಗೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ತೋರಿಸಿದೆ.