ಕೇರಳದ ವೈದ್ಯೆ ಡಾ. ಶಿರಿನ್ ಸುಬೈರ್, ತಮ್ಮ ಮದುವೆ ಸಮಾರಂಭವನ್ನೇ ಬದಿಗಿಟ್ಟು, ಅಸ್ವಸ್ಥಗೊಂಡ ಇಬ್ಬರು ಅಡುಗೆ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮದುಮಗಳ ಉಡುಪಿನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಲಾಂ ಎಂದಿದ್ದಾರೆ.

ಕೇರಳದ ವೈದ್ಯೆಯೊಬ್ಬರು ತಮ್ಮ ಮದುವೆ ಸಂಭ್ರಮದ ನಡುವೆಯೂ ಅಸ್ವಸ್ಥಗೊಂಡ ಅಡುಗೆ ಸಿಬ್ಬಂದಿಗೆ ತಕ್ಷಣ ಚಿಕಿತ್ಸೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮದುವೆಯಲ್ಲೂ ವೈದ್ಯಕೀಯ ವೃತ್ತಿಧರ್ಮಕ್ಕೆ ಮೊದಲ ಆದ್ಯತೆ ನೀಡಿದ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆ ನಡೆದಿದ್ದು ಎಲ್ಲಿ?

ಕೇರಳದ ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ. ಡಾ. ಶಿರಿನ್ ಸುಬೈರ್ ಮತ್ತು ಡಾ. ರಿಝಾಝ್ ಅವರ ವಿವಾಹ ಸಮಾರಂಭ ನಡೆಯುತ್ತಿತ್ತು. ಈ ವೇಳೆ, ಅಡುಗೆ ತಂಡದಲ್ಲಿದ್ದ ಇಬ್ಬರು ಮಹಿಳೆಯರು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡರು. ಒಬ್ಬ ಮಹಿಳೆಯ ಮೂಗಿನಿಂದ ರಕ್ತ ಬರಲು ಶುರುವಾದರೆ, ಇನ್ನೊಬ್ಬರಿಗೆ ತಲೆಸುತ್ತು ಬಂದಿದೆ. ಅಲ್ಲಿದ್ದ ಜನರಿಗೆ ಶಿರಿನ್ ಒಬ್ಬರು ವೈದ್ಯೆ ಎಂದು ಗೊತ್ತಾದ ತಕ್ಷಣ, ಸಹಾಯಕ್ಕಾಗಿ ಅವರ ಬಳಿ ಓಡಿ ಬಂದರು. ಶಿರಿನ್ ತಕ್ಷಣವೇ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮದುವೆ ಸಂಭ್ರಮವನ್ನು ಮುಂದುವರಿಸುವ ಬದಲು, ಮದುಮಗಳ ಉಡುಪಿನಲ್ಲೇ ಇದ್ದ ವೈದ್ಯೆ, ಅಸ್ವಸ್ಥಗೊಂಡಿದ್ದ ಅಡುಗೆ ಸಿಬ್ಬಂದಿಯ ಆರೈಕೆ ಮಾಡುವುದರಲ್ಲಿ ನಿರತರಾಗಿದ್ದರು. ಈ ದೃಶ್ಯ ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದ್ದು, ಇದೊಂದು ವೃತ್ತಿಪರತೆ ಮತ್ತು ಮಾನವೀಯತೆಗೆ ಹಿಡಿದ ಕೈಗನ್ನಡಿ ಎಂದು ಅನೇಕರು ಶ್ಲಾಘಿಸಿದ್ದಾರೆ.

ವಿಡಿಯೋ ಇಲ್ಲಿದೆ

Scroll to load tweet…

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟಿಜನ್ಸ್ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 'ಮೊದಲು ವೈದ್ಯೆ, ಆಮೇಲೆ ಮದುಮಗಳು' ಎಂದು ಅನೇಕರು ಕಮೆಂಟ್ ಮಾಡಿ, ವೈದ್ಯಕೀಯ ವೃತ್ತಿಯ ನಿಜವಾದ ಸ್ವರೂಪವನ್ನು ಶಿರಿನ್ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವೈರಲ್ ವಿಡಿಯೋ, ವೈದ್ಯರು ಎದುರಿಸಬೇಕಾದ ಸವಾಲುಗಳು ಮತ್ತು ಯಾವುದೇ ಪರಿಸ್ಥಿತಿಯಲ್ಲಿ ತುರ್ತು ಸಂದರ್ಭಗಳಿಗೆ ಸ್ಪಂದಿಸುವ ಅವರ ಬದ್ಧತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣವೇ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ವೃತ್ತಿಪರತೆ ಮತ್ತು ಮಾನವೀಯತೆಯನ್ನು ಒಟ್ಟಿಗೆ ನಿಭಾಯಿಸಿದ ಅವರ ಗುಣವನ್ನು ಎಲ್ಲರೂ ಹೊಗಳಿದ್ದಾರೆ. ಮದುವೆ ಉಡುಪಿನಲ್ಲಿ ಅವರು ಚಿಕಿತ್ಸೆ ನೀಡಿದ್ದು ಈ ದೃಶ್ಯವನ್ನು ಇನ್ನಷ್ಟು inspirational ಆಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.