ಖಾಸಗಿ ಕಂಪನಿ ನೌಕರರೊಬ್ಬರು ಅನಾರೋಗ್ಯ ರಜೆ ಕೇಳಿದ ಕೇವಲ 10 ನಿಮಿಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಅವರ ಬಾಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿ (ಸೆ.14) : ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುತ್ತಿದ್ದ ನೌಕರ ತಮ್ಮ ಕಂಪನಿಯ ಬಾಸ್ ಬಳಿ ಅನಾರೋಗ್ಯ ರಜೆ (Sick Leave) ಕೇಳಿ ಮೆಸೇಜ್ ಮಾಡಿದ ಕೇವಲ 10 ನಿಮಿಷದಲ್ಲಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ, ಈ ಬಗ್ಗೆ ಸ್ವತಃ ನೌಕರನ ಬಾಸ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಕೆ. ವಿ ಅಯ್ಯರ್ ಎಂಬುವವರು ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಶಂಕರ್ ಎಂಬ 40 ವರ್ಷದ ನೌಕರ ಆರೋಗ್ಯ ಸರಿಯಿಲ್ಲ ಅಂತ ಸಿಕ್ ಲೀವ್ ಕೇಳಿ ಮೆಸೇಜ್ ಮಾಡಿದ್ದರು. ಅವರು ಮೆಸೇಜ್ ಮಾಡಿದ ಕೇವಲ 10 ನಿಮಿಷದಲ್ಲೇ ಶಂಕರ್ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದು ತುಂಬಾ ಬೇಸರ ತರಿಸಿದೆ ಅಂತ ಕೆ. ವಿ ಅಯ್ಯರ್ ಎಕ್ಸ್ ನಲ್ಲಿ ಹೇಳಿದ್ದಾರೆ.

ಕೆ. ವಿ ಅಯ್ಯರ್ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್:

ಬೆಳಿಗ್ಗೆ 8:37 ಕ್ಕೆ ಶಂಕರ್ ಬೆನ್ನು ನೋವು ಅಂತ ಸಿಕ್ ಲೀವ್ ಕೇಳಿ ಮೆಸೇಜ್ ಮಾಡಿದ್ದರು. ಆಗ ನಾನು ವಿಶ್ರಾಂತಿ ತಗೋ ಅಂತ ಹೇಳಿ ಅವರಿಗೆ ರಜೆ ಅಪ್ರೂವಲ್ ಕೊಟ್ಟಿದ್ದೆನು. ಆದರೆ, 11 ಗಂಟೆಗೆ ಶಂಕರ್ ಸತ್ತು ಹೋಗಿದ್ದಾರೆ ಅಂತ ಫೋನ್ ಬಂತು. ಇದನ್ನು ಕೇಳಿ ನನಗೆ ಮೊದಲು ನಂಬಲೇ ಆಗಲಿಲ್ಲ. ಮತ್ತೊಬ್ಬ ಸಹೋದ್ಯೋಗಿ ಗೆ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡು ಶಂಕರ್ ಮನೆಗೆ ಹೋದೆ. ಕಳೆದ ಆರು ವರ್ಷದಿಂದ ನನ್ನ ಜೊತೆ ಕೆಲಸ ಮಾಡುತ್ತಿದ್ದನು. ಆಗ ನೋಡುವುದಕ್ಕೆ ತುಂಬಾ ಆರೋಗ್ಯವಾಗಿದ್ದ. ಹೀಗಾಗಿಮ, ಫಿಟ್ ಆಗಿದ್ದ ನೌಕರ ಶಂಕರ್‌ನನ್ನು ಇತರರಿಗೂ ತೋರಿಸುತ್ತಿದ್ದೆ ಎಂದು ಹೇಳಿದ್ದಾರೆ.

ಯಾವುದೇ ಕಟ್ಟ ಅಭ್ಯಾಸ ಇರಲಿಲ್ಲ: 

ಇನ್ನು ಮೃತ ಶಂಕರ್‌ಗೆ ಹೆಂಡತಿ ಮಕ್ಕಳಿದ್ದಾರೆ. ಸಿಗರೇಟ್ ಸೇದುವುದಾಗಲೀ ಅಥವಾ ಮದ್ಯಪಾನ ಸೇವನೆಯಾಗಲೀ ಯಾವಿದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ಈ ಬಗ್ಗೆ ಅವರ ಮನೆಯಲ್ಲಿ ಮಾಹಿತಿ ಕೇಳಿದಾಗ 8:37ಕ್ಕೆ ಶಂಕರ್ ನನಗೆ ಲೀವ್ ಕೇಳಿ ಮೆಸೇಜ್ ಮಾಡಿದನು. ಇದಾದ 10 ನಿಮಿಷಗಳಲ್ಲಿ ಅಂದರೆ 8:47ಕ್ಕೆ ಆತ ಸತ್ತು ಹೋದರು ಎಂಬುದನ್ನು ಕೇಳಿ ನನಗೂ ಶಾಕ್ ಆಗಿದೆ. ಜೀವನ ಎಷ್ಟು ಅನಿಶ್ಚಿತ ಅಂತ ಅಯ್ಯರ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ. ಜನರ ಜೊತೆ ಕರುಣೆ ಮತ್ತು ತಾಳ್ಮೆಯಿಂದ ಇರಿ ಅಂತ ಹೇಳಿದ್ದಾರೆ.

Scroll to load tweet…