ಮಗು ಹುಟ್ಟಿದ ಬೆನ್ನಲ್ಲೇ ಮಲಗಿದ ರೀತಿ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಎರಡು ಕೈಗಳನ್ನು ತಲೆಯ ಹಿಂದಿಟ್ಟು, ಒಂದು ಕಾಲನ್ನು ಮೇಲಿಟ್ಟು ಹೀರೋ ರೀತಿ ಮಲಗಿದ ಫೋಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಲೈಫ್ ಎಂಜಾಯ್ ಮಾಡಲೇ ಈ ಮಗು ಹುಟ್ಟಿದೆ ಎಂದಿದ್ದಾರೆ.
ಹುಟ್ಟಿದ ಮಗುವಿನ ಚಲನವಲನಗಳು ಬಹುತೇಕ ಒಂದೇ ರೀತಿ ಇರುತ್ತದೆ. ಕೈಕಾಲುಗಳನ್ನು ಆಡಿಸುತ್ತಾ, ಅಳುತ್ತಾ ಹೊಸಗಿನ ಪ್ರಪಂಚಕ್ಕೆ ಮಗು ಹೊಂದಿಕೊಳ್ಳುತ್ತದೆ. ಆದರೆ ಇಲ್ಲೊಂದು ಮಗು ಹುಟ್ಟಿದ ಬೆನ್ನಲ್ಲೇ ಲೈಫ್ ಎಂಜಾಯ್ ಮೂಡ್ನಲ್ಲಿರುವ ಸ್ಟೈಲ್ನಲ್ಲಿ ಫೋಸ್ ನೀಡಿದೆ. ಹುಟ್ಟಿದ ಬೆನ್ನಲ್ಲೈ ಮಗುವನ್ನು ಪ್ರತ್ಯೇಕ ಮಲಗಿಸಿದ್ದಾರೆ. ಮಗುವಿನ ಎದೆಬಡಿತ, ಉಸಿರಾಟ ಸೇರಿದಂತೆ ಹಲವು ಪರೀಕ್ಷೆಗಳನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ. ಆದರೆ ಮಗುವನ್ನು ಮಲಗಿಸಿದರೆ ಮಗು ಮಾತ್ರ ಸಿನಿಮಾ ಹೀರೋ ರೀತಿ ಎರಡು ಕೈಗಳನ್ನು ತಲೆ ಹಿಂದಿಟ್ಟು, ಒಂದು ಕಾಲನ್ನು ಮೇಲಿಟ್ಟು ಫೋಸ್ ಕೊಟ್ಟ ರೀತಿ ಮಲಗಿದೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಹುಟ್ಟಿದ ಬೆನ್ನಲ್ಲೇ ಲೈಫ್ ಎಂಜಾಯ್ ಮೂಡ್ನಲ್ಲಿ ಮಗು
ಮಕ್ಕಳು ಹುಟ್ಟಿದ ಕೆಲ ಗಂಟೆಗಳ ಕಾಲ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಹೋರಾಟ ಆರಂಭಿಸುತ್ತದೆ. ಕೈಕಾಲುಗಳನ್ನು ಆಡಿಸುತ್ತಾ, ಅಳುತ್ತಾ ನಿಧಾನವಾಗಿ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತದೆ. ಆದರೆ ಈಜಿಪ್ಟ್ನಲ್ಲಿ ಜನಿಸಿದ ಈ ಮಗು ಲೈಫ್ನ್ನು ಎಂಜಾಯ್ ಮಾಡಬೇಕು ಎಂದೇ ಹುಟ್ಟಿದಂತೆ ಫೋಸ್ ನೀಡಿದೆ. ಈಜಿಪ್ಟ್ನ ಖ್ಯಾತ ಪಿಡಿಯಾಟ್ರಿಶಿಯನ್ ಡಾ. ಇಸ್ಲಾಂ ಎಲ್ಡ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಮಗುವನ್ನು ಬೇರೆಡೆ ಮಲಗಿಸಿದರೂ ಫೋಸ್ ಮಾತ್ರ ಇದೇ. ಹೀಗಾಗಿ ವೈದ್ಯರು ಇದೇ ಫೋಸ್ನಲ್ಲಿ ಮಗುವಿನ ಎದಬಡಿತ ಪರಿಶೀಲಿಸಿದ್ದಾರೆ. ಮಗುವಿನ ಅಚ್ಚರಿ ಫೋಸ್ಗೆ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಮಗು ಜನಿಸಿದ ಕೆಲ ಗಂಟೆ ಹೊಂದಿಕೊಳ್ಳಲು ಹೋರಾಟ ಮಾಡುತ್ತದೆ. ಇದರ ನಡುವೆ ಮಗು ತಾಯಿ ಜೊತೆ ಮಲಗಿದರೆ ಸುಮ್ಮನಿರುತ್ತೆ. ವೈದ್ಯರು ಸೇರಿ ಯಾರೇ ಮುಟ್ಟಿದರೂ ಅಳುತ್ತೆ. ಆದರೆ ಈ ಮಗುವು ಫುಲ್ ರಿಲಾಕ್ಸ್ ಮೂಡ್ನಲ್ಲಿ ಇದ್ದಂತೆ ಕಾಣುತ್ತಿದೆ ಎಂದು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಗುವಿನ ತಪಾಸಣೆ ನಡೆಸಲಾಗಿದೆ. ಮಗು ಹಾಗೂ ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಡಾ. ಇಸ್ಲಾಂ ಎಲ್ಡ ಹೇಳಿದ್ದಾರೆ.
ಲೈಫ್ ಮೊದಲೇ ಡಿಸೈಡ್ ಮಾಡಿ ಆಗಿದೆ, ನೋ ರಶ್ , ಜಸ್ಟ್ ಚಿಲ್
ಈ ವಿಡಿಯೋ ಇಂಟರ್ನೆಟ್ನಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇತರ ಮಗುವಿನಂತಲ್ಲ, ಈ ಮಗು ತನ್ನ ಲೈಫ್ನ್ನು ಮೊದಲೆ ಸೆಟ್ ಮಾಡಿದೆ. ಯಾವುದೇ ಅರ್ಜೆಂಟಿಲ್ಲ, ಫುಲ್ ಚಿಲ್. ಆರಾಮಾಗಿ ಯಾವೆಲ್ಲಾ ಟೆಸ್ಟ್ ಮಾಡಬೇಕು ಮಾಡಿ, ನನಗೆ ಯಾವುದೇ ಅರ್ಜೆಂಟಿಲ್ಲ, ಫುಲ್ ಟೆಸ್ಟ್ ಬಳಿ ನನ್ನ ಪಾಡಿಗೆ ಬಿಟ್ಟುಬಿಡಿ ಎಂದ ಮಟ್ಟಿಗೆ ಫೋಸ್ ನೀಡಿದೆ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.
ಈ ಮಗು ಹುಟ್ಟುವಾಗಲೇ ತನ್ನ ಭವಿಷ್ಯದ ಪ್ಲಾನ್ ಮಾಡಿಕೊಂಡು ಬಂದಿದೆ. ಸದ್ಯ ಲೈಫ್ ಎಂಜಾಯ್ ಮಾಡಬೇಕು ಅನ್ನೋ ರೀತಿ ಫೋಸ್ ನೀಡಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಎಲ್ಲರು ಮುಂದೇನು, ನಾಳೆ ಎಲ್ಲರ ಚಿಂತೆ, ನಿಲ್ಲದ ಒಟದಲ್ಲಿದ್ದರೆ, ಈ ಮಗು ಚಿಲ್ ಆಗಿ ನನ್ನ ಲೈಫ್ ನನ್ನ ಇಷ್ಟ ಎಂದು ಮುಂದೆ ಸಾಗಿದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹಲವು ಬಾರಿ ಮಗು ತಾಯಿ ಗರ್ಭದಿಂದ ಹೊರಬಂದ ಬಳಿಕ ಹಲವು ರೀತಿಯಲ್ಲಿ ಫೋಸ್ ನೀಡುತ್ತದೆ. ಕೆಲವು ಬಾರಿ ಈ ಫೋಸ್ಗಳು ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ಮಗಳು ಅಸಾಧಾರಣ ಶಕ್ತಿ ಹೊಂದಿರುತ್ತದೆ. ಮಕ್ಕಳು ಬಹು ಬೇಗ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.


