ವಾಹನ, ಪಾದಾಚಾರಿಗಳು ಸೇರಿದಂತೆ ಸಂಪೂರ್ಣ ಗಿಜಿಗಿಡುವ ರಸ್ತೆ. ಈ ರಸ್ತೆಯಲ್ಲೇ ರೋಮ್ಯಾನ್ಸ್. ಅದು ಕೂಡ ಬಾಲಿವುಡ್ ಸ್ಟೈಲ್‌ನಲ್ಲಿ ಲವ್ವಿ ಡವ್ವಿ. ಚಿಂದಿ ಆಯುವವರ ಈ ರೊಮ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು, ಈತ ಬಡವರ ಪಾಲಿನ ಇಮ್ರಾನ್ ಹಶ್ಮಿ ಎಂದಿದ್ದಾರೆ.

ಬ್ಯೂಸಿ ರಸ್ತೆಯಲ್ಲಿ ಜೋಡಿಯ ಪ್ರೀತಿ, ಪ್ರೇಮ, ಪ್ರಣಯ ಇದೀಗ ಚರ್ಚೆಯಾಗುತ್ತಿದೆ. ವಿಶೇಷ ಅಂದರೆ ಈ ಜೋಡಿಗೆ ಹಲವರು ಬೆಂಬಲ ಸೂಚಿಸಿದ್ದಾರೆ. ಚಿಂದಿ ಆಯುವ ಇಬ್ಬರ ನಡುವೆ ಪ್ರೀತಿ ಹಾಗೂ ಆಪ್ತತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಾಹನಗಳಿಂದ ರಸ್ತೆ ತುಂಬಿದೆ, ಇತ್ತ ಪಾದಾಚಾರಿಗಳು ಸೇರಿದಂತೆ ಹಲವರು ಸಾಗುತ್ತಿರುವ ಬ್ಯೂಸಿ ರಸ್ತೆ. ಈ ರಸ್ತೆಯ ಬದಿಯಲ್ಲಿ ಜೋಡಿ ಹಕ್ಕಿ ಸ್ವಚ್ಚಂದವಾಗಿ ತಮ್ಮ ಪ್ರೀತಿ, ಆಪ್ತತೆ ವ್ಯಕ್ತಪಡಿಸಿದ್ದರೆ. ಹುಡುಗಿ ಪ್ರಿಯಕರನ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ಆತನ ಮನವಿ, ಬೇಡಿಕೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ ಆತನ ಸ್ಟೈಲ್ ಹಾಗೂ ಸ್ವಾಗ್ ಯಾವ ಬಾಲಿವುಡ್‌ಗೂ ಕಡಿಮೆ ಇಲ್ಲ. ಚಿಂದಿ ಆಯುವ ಇಬ್ಬರ ನಡುವಿನ ಈ ಪ್ರೀತಿ ಹಾಗೂ ಆಪ್ತತೆಯ ವಿಡಿಯೋ ನೋಡಿದ ಹಲವರು ಈತ ಬಡವರ ಪಾಲಿನ ಇಮ್ರಾನ್ ಹಶ್ಮಿ ಎಂದಿದ್ದಾರೆ.

ಪ್ರೀತಿಗೆ ಅಡ್ಡಿಯಾಗಿಲ್ಲ ರಸ್ತೆ

ಈ ವಿಡಿಯೋ ಸೆರೆ ಹಿಡಿದ ಸ್ಥಳ, ದಿನಾಂಕದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ ವಿಡಿಯೋ ಮಾತ್ರ ಸದ್ದು ಮಾಡುತ್ತಿದೆ. ಚಿಂದಿ ಆಯುವ ಇಬ್ಬರು ರಸ್ತೆ ಪಕ್ಕದಲ್ಲೇ ರೊಮ್ಯಾನ್ಸ ಶುರು ಹಚ್ಚಿದ್ದರೆ, ಪಕ್ಕದಲ್ಲೇ ಮತ್ತೊಬ್ಬ ನೋಡುತ್ತಾ ಮಲಗಿದ್ದಾನೆ. ತುಂಬಿದ ರಸ್ತೆಯಲ್ಲಿ ಜನರು, ವಾಹನಗಳು ಸಾಗುತ್ತಲೇ ಇದೆ. ಆದರೆ ಇವರ ಪ್ರೀತಿಗೆ ಯಾವೂದೂ ಅಡ್ಡಿಯಾಗಿಲ್ಲ.

ಹುಡುಗಿಯನ್ನು ತಬ್ಬಿಕೊಂಡ ಆತ ರೊಮ್ಯಾನ್ಸ್ ಮೂಡ್‌ನಲ್ಲಿದ್ದಾನೆ. ಆದರೆ ಆಕೆ ಮಾತ್ರ ಆತನ ಮಾತು ಕೇಳಿಸಿಕೊಳ್ಳುವ ಆಸಕ್ತಿ ತೋರುತ್ತಿಲ್ಲ. ಆಕೆಯನ್ನು ಒಲಿಸುವ, ಒಪ್ಪಿಸುವ ಪ್ರಯತ್ನವನ್ನು ಆತ ಮಾಡುತ್ತಿದ್ದಾನೆ. ಈತನಿಂದ ದೂರ ಸರಿಯುವ ಪ್ರಯತ್ನವನ್ನು ಆಕೆ ಮಾಡುತ್ತಿದ್ದಾಳೆ. ಹಾಗಂತ ಆತನ ತಳ್ಳಿ ದೂರ ಸರಿಯುವ ಪ್ರಯತ್ನ ಈಕೆಯದ್ದಲ್ಲ. ಪ್ರೀತಿಯಿಂದಲೇ ನಿರಾಕರಿಸುವ ಪ್ರಯತ್ನ. ಆದರೆ ಪ್ರಣಯದ ಉತ್ತುಂಗದಲ್ಲಿರುವ ಆತನಿಗೆ ರಸ್ತೆಯಾದರೇನು ಅನ್ನೋ ಭಾವ.

Scroll to load tweet…

ಬಾಲಿವುಡ್ ಸ್ಟೈಲ್‌ನಲ್ಲಿ ಹಗ್

ಇದರ ನಡುವೆ ಈತನ ಬಾಲಿವುಡ್ ಸ್ಟೈಲ್‌ನಲ್ಲಿ ಈಕೆಯನ್ನು ಅಬ್ಬಿಕೊಂಡು ಏನೋ ಕಿವಿಯಲ್ಲಿ ಹೇಳುವ, ತುಟಿಗಳು ಮಿಡಿಯುವ, ಮನಸ್ಸು ಅರಳಿಸುವ ಪ್ರಯತ್ನಗಳನ್ನು ಮಾಡಿದ್ದಾನೆ. ಆದರೆ ಆಕೆ ಮಾತ್ರ ಯಾಕೋ ಒಲ್ಲೆ ಅಂತಿರುವಂತಿದೆ. 30 ಸೆಕೆಂಡ್‌ಗಳ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಬಡವರ ಇಮ್ರಾನ್ ಹಶ್ಮಿ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದಾರೆ. ಈತ ಬಡವರ ಪಾಲಿನ ಇಮ್ರಾನ್ ಹಶ್ಮಿ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಹಲವರು ಈ ಜೋಡಿಯ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಡಿಯೋಗಳು ವೈರಲ್ ಆಗುತ್ತಿದೆ. ಆದರೆ ಇಲ್ಲಿ ಈ ಜೋಡಿ ಯಾವುದೇ ಸಭ್ಯತೆ ಗೆರೆ ದಾಟಿಲ್ಲ. ಇಬ್ಬರು ಜೊತೆಗಿದ್ದಾರೆ. ಅಪ್ಪಿಕೊಂಡಿದ್ದಾರೆ. ಇದು ತಪ್ಪಲ್ಲ. ಅಸಭ್ಯವೂ ಅಲ್ಲ. ಹೀಗಾಗಿ ಈ ಜೋಡಿಗಳಿಂದ ಯಾವುದೇ ತಪ್ಪಾಗಿಲ್ಲ. ಆದರೆ ಆವರು ಬಡವರು, ರಸ್ತೆ ಬದಿಯಲ್ಲಿ ಚಿಂದಿ ಆಯುತ್ತಾ ಬದುತ್ತಿದ್ದಾರೆ. ಆವರ ಆಪ್ತತೆಯನ್ನು ವಿಡಿಯೋ ಮಾಡಿ ಈ ರೀತಿ ಹರಿಬಿಟ್ಟಿದ್ದೇ ತಪ್ಪು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.