ವಿಜಯಪುರ[ಮಾ. 20]  ವಿಜಯಪುರ ನಗರದ ಚಾಲುಕ್ಯ ಕಾಲೋನಿಯಲ್ಲಿ ಮಹಿಳೆಯೊಬ್ಬಳು ವರದಕ್ಷಿಣೆ ಕಿರುಕುಳಕ್ಕೆ ತುತ್ತಾಗಿ ಬೀದಿಗೆ ಬಿದ್ದರು ಕಾನೂನಿನ ಕಣ್ಣಿಗೆ ಕಾಣಿಸುತ್ತಿಲ್ಲ. ಇಲ್ಲಿನ ಗುರುರಾಜ ಗೌಡರ ಎಂಬಾತನ ಪತ್ನಿ ಶಶಿಕಲಾ ವರದಕ್ಷಿಣೆ ಕಿರುಕುಳದಿಂದಾಗಿ ಪೊಲೀಸ್ ಠಾಣಾ ಮೆಟ್ಟಿಲು ಏರಿದ್ದರೂ ಪ್ರಯೋಜನವಾಗಿಲ್ಲ.

ಕಳೆದ 12 ವರ್ಷದಿಂದ ಶಶಿಕಲಾ ಗುರುರಾಜ ಜೊತೆಗೆ ಸಂಸಾರ ನಡೆಸುತ್ತಿದ್ರು. ಆದ್ರೆ, ಶಶಿಕಲಾನ ಅತ್ತೆ ಮಾವ ವರದಕ್ಷಿಣೆ ತರಬೇಕೆಂದು ಪ್ರತಿನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದರು. ಅತ್ತೆ ಅಕ್ಕಮಹಾದೇವಿ, ಮಾವ ಸಾವಳ್ಗೆಪ್ಪ ಮಗ ಗುರುರಾಜ ಜೊತೆಗೆ ಸೇರಿ ಶಶಿಕಲಾಗೆ ವರದಕ್ಷಿಣೆ ತರುವಂತೆ ಪೀಡಿಸಿ ಮನೆಯಿಂದ ಹೊರೆಗೆ ಹಾಕಿದ್ದಾರೆ. ಇದರಿಂದ ಶಶಿಕಲಾ ಹಾಗೂ ಇಬ್ಬರು ಮಕ್ಕಳು ಗಂಡನ ಮನೆಯ ಎದುರು ಕಣ್ಣೀರು ಇಡುತ್ತಾ ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮದ ಎದುರು ನೋವು ತೋಡಿಕೊಂಡಿದ್ದಾರೆ.