ಉಮೇಶ ಕತ್ತಿ ನೆನೆದು ಭಾವುಕರಾದ ಸಿಎಂ: ದಸರಾ ನಂತರ ಸಿಎಂ,ಬಿಎಸ್ವೈ ಜಂಟಿ ಪ್ರವಾಸ

ನಾಡ ದೊರೆ ಸಿಎಂ ಬಸವರಾಜ್ ಬೊಮ್ಮಾಯಿ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಹೆಲಿಕಾಪ್ಟರ್ ಮೂಲಕ ವಿಜಯಪುರ ಜಿಲ್ಲೆಗೆ ಆಗಮಿಸಿದ ಅವರು ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಆಲಮಟ್ಟಿ ಆಣೆಕಟ್ಟಿಗೆ ಬಾಗೀನ ಅರ್ಪಿಸಿದರು.

Vijayapura CM gets emotional remebering Umesh katti akb

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ: ನಾಡ ದೊರೆ ಸಿಎಂ ಬಸವರಾಜ್ ಬೊಮ್ಮಾಯಿ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಹೆಲಿಕಾಪ್ಟರ್ ಮೂಲಕ ವಿಜಯಪುರ ಜಿಲ್ಲೆಗೆ ಆಗಮಿಸಿದ ಅವರು ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಆಲಮಟ್ಟಿ ಆಣೆಕಟ್ಟಿಗೆ ಬಾಗೀನ ಅರ್ಪಿಸಿದರು.


ಸೈನಿಕ ಶಾಲೆಯಲ್ಲಿ ಹಾಕಿ ಆಡಿದ ಸಿಎಂ ಬೊಮ್ಮಾಯಿ..!

ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯಿಂದ (Alamatti Dam) ಸೈನಿಕ ಶಾಲೆ ಹೆಲಿಪ್ಯಾಡ್‌ಗೆ ಸಿಎಂ ಬಂದಿಳಿದರು. ಈ ವೇಳೆ ಶಾಸಕ ಯತ್ನಾಳ್ (MLA Yatnal) ಅವರನ್ನ ಸ್ವಾಗತಿಸಿಕೊಂಡರು. ಸೈನಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಹಾಕಿ ಸ್ಟೇಡಿಯಂ ಅನ್ನು ಸಿಎಂ ಉದ್ಘಾಟಿಸಿದರು.‌ಈ ವೇಳೆ ಹಾಕಿ ಆಡುವ ಮೂಲಕ ಸಿಎಂ ಗಮನ ಸೆಳೆದರು. ನೀವು ಭಾರಿ ಹಾಕಿ ಆಡ್ತೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸಿಎಂರಿಗೆ ಹೇಳಿದ್ರ, ಹೌದು ಭಾರೀ ಚಲೋನ ಆಡ್ತೀನಿ ಎನ್ನುವ ಮೂಲಕ ಸಿಎಂ ಹಾಸ್ಯ ಮಾಡಿದರು.


ಇದಕ್ಕೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಕಾಂಗ್ರೆಸ್ (Congress Leader) ವಿರುದ್ಧ ವಾಗ್ದಾಳಿ ನಡೆಸಿದರು. ಯಾವ ಸಂಘಟನೆ ಕಾಂಗ್ರೆಸ್  ಶಾಸಕನ ಮೇಲೆ ಕೊಲೆ ಯತ್ನ ನಡೆಸಿತ್ತೋ ಅದೇ ಸಂಘಟನೆಯ ಪ್ರಕರಣವನ್ನೇ ಕಾಂಗ್ರೆಸ್ ಹಿಂಪಡೆದಿತ್ತು. ಇದಕ್ಕಿಂತ ತುಷ್ಟೀಕರಣದ ರಾಜಕಾರಣದ ಉದಾಹರಣೆ ಬೇರೆ ಬೇಕಿಲ್ಲ ಎಂದು  ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು. ಕಾಂಗ್ರೆಸ್ ಪಿ.ಎಫ್.ಐ, ಕೆ.ಎಫ್.ಡಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಇದು ತುಷ್ಟೀಕರಣ ರಾಜಕಾರಣದ ಫಲ  ಅದನ್ನು ದಮನ ಮಾಡುವ ಕೆಲಸವನ್ನು  ಕೇಂದ್ರ ಸರ್ಕಾರ ಮಾಡಿದೆ ಎಂದರು.  

ಸಿ ಎಂ ಇಬ್ರಾಹಿಂಗೆ ಮಾತಲ್ಲೆ ತಿವಿದ ಸಿಎಂ

ಶಾಸಕ ಸಿಎಂ ಇಬ್ರಾಹಿಂ ಅವರ ಪಿಎಫ್ಐ ನಿಷೇಧದ (PFI Ban) ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಅವರು  ಕೇವಲ ವಿಚ್ಛೇದನ ಹಾಗೂ ಮದುವೆ ಮಾಡಿಸುವುದರಲ್ಲಿ ಮಾತ್ರ ಪರಿಣಿತರು. ಇದು ಗಂಭೀರವಾದ ವಿಚಾರ.  5 ವರ್ಷಗಳ ಚಟುವಟಿಕೆಗಳನ್ನು ಗಮನಿಸಿ ಮುಂದಿನ  ಕ್ರಮ ಕೇಂದ್ರ ಸರಕಾರ (Central Govt) ಕೈಗೊಳ್ಳಲಿದೆ ಎಂದರು. 

ಬಿಜೆಪಿ ಫ್ಲೆಕ್ಸ್ ಹರಿದಿಲ್ಲ

ಭಾರತ್ ಜೋಡೋ ಫ್ಲೆಕ್ಸ್ (Bharat Jodo) ಗಳನ್ನು ಹರಿದ ಬಗ್ಗೆ ಮಾಧ್ಯಮಗಳು ಕೇಳಿದಾಗ, ಕಾಂಗ್ರೆಸ್ ಪಕ್ಷದವರೆ  ಹರಿದು  ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ನಮ್ಮ ಶಾಸಕರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ ಎಂದು ಸಿಎಂ ನುಡಿದರು.

ರಾಜಕೀಯ ಅಸ್ತಿತ್ವಕ್ಕಾಗಿ ಭಾರತ ಜೋಡೋ
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು. ಭಾರತ್ ಜೋಡೋ ಯಾತ್ರೆ ಆರಂಭವಾಗಿರುವುದು ತಿಳಿದಿದೆ. ಯಾರು ಭಾರತವನ್ನು ಎರಡು ದೇಶಗಳನ್ನಾಗಿ ಮಾಡಿ ಭಾರತ್ ತೋಡೋ ಮಾಡಿದ್ದರೋ ಅವರು ಸಮಾಜದಲ್ಲಿ ಕ್ಷೋಭೆ ಉಂಟು ಮಾಡಿದ್ದರು. ಇವತ್ತಿಗೂ ಆ ಗಾಯದ ಬರೆ ಯಾರೂ ಮರೆತಿಲ್ಲ. ಅವರು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಮಾಡಿಲಿ ಎಂದರು.

ದಸರಾ ನಂತರ ಸಿಎಂ, ಬಿಎಸ್ವೈ ಜಂಟಿ ಪ್ರವಾಸ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಮ್ಮ ಜಂಟಿ ರಾಜ್ಯ ಪ್ರವಾಸ, ದಸರಾ ಮುಗಿದ ಕೂಡಲೇ ಕೈಗೊಳ್ಳಲಾಗುವುದು ಎಂದರು.

ದಿ.ಉಮೇಶ್ ಕತ್ತಿ ನೆನೆದ ಸಿಎಂ 
ದಿವಂಗತ ಉಮೇಶ್ ಕತ್ತಿ ಅವರು ಮೂರೂವರೆ ದಶಕಗಳಿಂದ ಆತ್ಮೀಯ ಸ್ನೇಹಿತರು. ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ್ದೇನೆ. ಅವರ ನೆನಪು ನಮ್ಮ ಹೃದಯಂಗಳದಲ್ಲಿ ಸದಾ ಹಸಿರಾಗಿರುತ್ತದೆ. ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಅಭಿವೃದ್ಧಿ ಕುರಿತು ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ಸರ್ವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳ ಲಾಗುವುದು ಎಂದರು.
 

Latest Videos
Follow Us:
Download App:
  • android
  • ios