ಕಲಕೇರಿ(ಅ.18): ವಿವಿಧ ಭೇಡಿಕೆ ಈಡೇ​ರಿ​ಕೆಗೆ ಆಗ್ರಹಿಸಿ ಕಲಕೇರಿಯಲ್ಲಿ ಕಳೆದ 23 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಗುರು​ವಾರ ಮುಕ್ತಾ​ಯ​ಗೊ​ಳಿ​ಸ​ಲಾ​ಯಿತು.

ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು, ಕದರಗುಂಡ ಮತ್ತು ಹುಣಶ್ಯಾಳ ಕರೆ ತುಂಬುವುದು, ಕಲಕೇರಿಯಲ್ಲಿ ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೆಂದ್ರ, ವಿವಿಧೆಡೆ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಮಂದಿಟ್ಟುಕೊಂಡು ಹಳೆ ಗ್ರಾಪಂ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಸೆ. 25 ರಿಂದ ಅನಿರ್ದಿಷ್ಟಾ​ವಧಿ ಧರಣಿ ಸತ್ಯಾಗ್ರಹ ನಡೆ​ಸ​ಲಾ​ಗು​ತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸೋಮನಗೌಡ ಪಾಟಿಲ ಸಾಸನೂರ ಹಾಗೂ ಅಧಿಕಾರಿಗಳು ಬೇಡಿಕೆ ಈಡೇ​ರಿ​ಸು​ವು​ದಾಗಿ ಭರ​ವಸೆ ನೀಡಿ​ದ್ದ​ರಿಂದ ಹೋರಾ​ಟ​ಗಾ​ರರ ಎಳ​ನೀರು ಸೇವಿಸಿ ಸತ್ಯಾ​ಗ್ರಹ ಹಿಂಪ​ಡೆ​ದರು.

ಈ ವೇಳೆ ಮಾತನಾಡಿದ ತಾಳಿಕೋಟೆ ತಹಸೀಲ್ದಾರ್‌ ಅನೀಲಕುಮಾರ ಡವಳಗಿ ಅವರು, ಗ್ರಾಮದಲ್ಲಿ ಈಗಾ​ಗಲೇ ರೈತರಿಗೆ ಅನೂಕೂವಾಗುವ ದೃಷ್ಟಿಯಿಂದ ಪಿಕೆಪಿಎಸ್‌ ಕಾರ್ಯಲಯದಲ್ಲಿ ಇಲಾಖೆಯ ಅಧಿಕಾರಿ ನೇಮಿಸಿ ಬೀಜ ಗೊಬ್ಬರ ವಿತರಿಸ​ಲಾ​ಗು​ತ್ತಿದೆ ಎಂದಾಗ, ಜನರು ಸರ್ಕಾರದ ಚಾವಡಿಯಲ್ಲಿ ಬೀಜಗೊಬ್ಬರ ವಿತರಿಸಲು ಮುಂದಾಗಬೆಕು ಎಂದು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಶಾಸಕರು ಮತ್ತು ತಹಸೀಲ್ದಾ​ರರು ಸ್ಥಳದಲಿದ್ದ ಅಧಿಕಾರಿಗಳಿಗೆ ಚಾವಡಿ ಸ್ಥಳ ಪರಿ​ಶೀ​ಲಿಸಿ ಅಲ್ಲಿಯೇ ವಿತರಿಸುವಂತೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ಪ್ರಾಂತ ರೈತ ಸಂಘದ ಕಾಶಿಂ ನಾಯ್ಕೋಡಿ, ಎಂ.ಪಿ. ನದಾಫ್‌, ಹಣಮಂತ ವಡ್ಡರ ಮಾತನಾಡಿ, ಶಾಸಕರು ಮತ್ತು ಅಧಿಕಾರಿಗಳು ನಮ್ಮೆಲ್ಲ ಬೇಡಿಕೆಗಳನ್ನುಈ​ಡೇ​ರಿ​ಸುವ ಭರವಸೆ ನಿಡಿದ್ದು, ಕಾಲಾವಕಾಶ ಕೇಳಿ​ದ್ದಾರೆ. ಆದ್ದರಿಂದ 23 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾ​ವಧಿ ಧರಣಿ ಸತ್ಯಾಗ್ರಹ ಹಿಂಪಡೆದಿದ್ದೇವೆ. ಕಾಲಮಿತಿಯಲ್ಲಿ ಕೆರೆ ತುಂಬಬೇಕು ಎಂದು ವಿನಂತಿಸಿದರು.

ಗ್ರಾಮ ಘಟಕದ ಅಧ್ಯಕ್ಷ ಸಲಿಂ ನಾಯ್ಕೊಡಿ,ರಫೀಕ್‌ ಮಂದೇವಾಲಿ, ಮೈಮೂದ ಕೆಂಭಾವಿ, ಕಾಸೀಮ್‌ ನಾಯ್ಕೋಡಿ, ದೇವಿಂದ್ರ ಬಡಗೇರ,ಡಾ.ಈರಣ್ಣ ಗುಮಶೇಟಿ,ರಾಜು ಅಡಕಿ,ಮಡಿವಾಳಪ್ಪ ಬಿರಾದಾರ,ರಮೇಶಗೌಡ ಪಾಟಿಲ,ಪದ್ಮರಾಜ್‌ ದಂಡಾವತಿ, ಟಿಪ್ಪು ಸಿಪಾಯಿ, ಹಣಮಂತ ವಡ್ಡರ, ಮೈನುದ್ದಿನ್‌ ಭಾಗವಾನ,ಸಿದ್ದು ಬುಳ್ಳಾ,ಪ್ರಭುಗೌಡ ಬಿರಾದಾರ,ರಾಮನಗೌಡ ನಾವದಗಿ,ಪ್ರಕಾಶ ಯರನಾಳ,ವಿಶ್ವನಾಥ ಹುರಕಡ್ಲಿ,ಸೊಮನಗೌಡ ಬಿರಾದಾರ,ಮುಕುಂದ ದೆಸಾಯಿ, ಸೇರಿದಂತೆ ಕಲಕೇರಿ ಹಾಗೂ ಕುದರಗುಂಡ, ಹುಣಶ್ಯಾಳದ ಗ್ರಾಮಸ್ಥರು ಉಪಸ್ಥಿತರಿದ್ದರು.