ವಿಜಯಪುರ(ಅ.11): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯವು ಮೈಸೂರಿನಿಂದ ವಿಜಯಪುರಕ್ಕೆ ವಿಶೇಷ ರೈಲನ್ನು ಬಿಟ್ಟಿದೆ.

ಮೈಸೂರು- ವಿಜಯಪುರ- ಮೈಸೂರು ಸುವಿಧಾ ವಿಶೇಷ ರೈಲು (ಸಂಖ್ಯೆ - 82659/82660) ಅ. 25ರಂದು ಮೈಸೂರನ್ನು ಸಂಜೆ 4.45ಕ್ಕೆ ಬಿಡಲಿದೆ. ಮಂಡ್ಯ, ರಾಮನಗರ, ಬೆಂಗಳೂರು, ಯಶವಂತಪುರ, ತುಮಕೂರು, ಅರಸಿಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್‌, ಹೊಸಪೇಟೆ, ಕೊಪ್ಪಳ, ಗದಗ, ಹೊಳೆಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನಬಾಗೇವಾಡಿ ಮಾರ್ಗವಾಗಿ ಸಂಚರಿಸಿ ಮರುದಿನ ಬೆಳಗ್ಗೆ 10.35ಕ್ಕೆ ವಿಜಯಪುರಕ್ಕೆ ತಲುಪಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅದೇ ರೀತಿ ಮರಳಿ ವಿಜಯಪುರದಿಂದ ಅ. 29ರಂದು ಸಂಜೆ 6 ಗಂಟೆಗೆ ಹೊರಡಲಿರುವ ರೈಲು, ಬಸವನ ಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್‌, ಬಳ್ಳಾರಿ, ರಾಯದುರ್ಗ, ಚಿತ್ರದುರ್ಗ, ಚಿಕ್ಕಜಾಜೂರು, ಅರಸಿಕೇರಿ, ತುಮಕೂರು, ಯಶವಂತಪುರ, ಬೆಂಗಳೂರು, ರಾಮನಗರ, ಮಂಡ್ಯ ಮಾರ್ಗವಾಗಿ ಮರುದಿನ ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ. ಈ ರೈಲು ಒಂದು ಎಸಿ-3, 10 ಸೆಕೆಂಡ್‌ ಸ್ಲಿಪರ್‌ ಬೋಗಿಗಳನ್ನು ಹೊಂದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.