ವಿಜಯಪುರ(ಅ.28): ರೈತರ ಕಬ್ಬಿನ ಬಾಕಿ ಹಣ ವಸೂಲಿ ಮಾಡಲು ಇಂಡಿ ತಾಲೂಕಾಡಳಿತ ಮುಂದಾಗಿದೆ. ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡಿದ್ದ ಸಕ್ಕರೆ ಕಾರ್ಖಾನೆಯ ಸಕ್ಕರೆಯ ಹರಾಜು ಮಾಡಲು ತಾಲೂಕಾಡಳಿತ ಮುಂದಾಗಿದೆ. 

ಜಿಲ್ಲೆ ಇಂಡಿ ತಾಲೂಕಿನ ಹಿರೇಬೇನೂರು ಗ್ರಾಮದಲ್ಲಿರುವ ಜ್ಞಾನ ಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆಯ ಸಕ್ಕರೆ ಹರಾಜು ಹಾಕಿ ರೈತರ ಬಾಕಿ ಹಣವನ್ನು ರೈತರಿಗೆ ತಾಲೂಕಾಡಳಿತ ನೀಡಿದೆ. ಸಕ್ಕರೆ ಹರಾಜು ಹಾಕಿ 5 ಕೋಟಿ ರು. ಬಾಕಿ ಹಣವನ್ನು ತಾಲೂಕಾಡಳಿತ ರೈತರಿಗೆ ನೀಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನೆ ಬಳಿಕ ಎಚ್ಚೆತ್ತ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ 4 ಕೋಟಿ ರು. ರೈತರ ಬಾಕಿ ಹಣ ಪಾವತಿಸಿದೆ. ಒಟ್ಟು 17 ಕೋಟಿ ರೂ ರೈತರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿತ್ತು. ಅದರಲ್ಲೀಗ ಶೇ. 50 ರಷ್ಟು ಬಾಕಿ ಹಣ ರೈತರಿಗೆ ತಾಲೂಕಾಡಳಿತ ಕೊಡಿಸಿದೆ. ಈ ತಿಂಗಳ 16 ರಂದು ಉಳಿದ ಬಾಕಿ ಹಣ ರೈತರಿಗೆ ನೀಡುವುದಾಗಿ ಭರವಸೆ ನೀಡಿರುವ ಕಾರ್ಖಾನೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.