ವಿಜಯಪುರ: ಮತ್ತೆ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ

ಜಿಲ್ಲೆಯಲ್ಲಿ ಭಾರೀ ಮಳೆ| ಕೊಚ್ಚಿ ಹೋದ ಸೇತುವೆ ಮೇಲಿನ ಡಾಂಬರ್| ಬರಟಗಿ ಎಲ್. ಟಿ-5 ರಸ್ತೆ ಸಂಪರ್ಕ ಕಡಿತ| ಕಳೆದ ಒಂದೂವರೆ ವರ್ಷದ ಹಿಂದೆ ಸೇತುವೆ ನಿರ್ಮಿಸಲಾಗಿತ್ತು|

Heavy Rain in Vijayapura: Road Damage

ವಿಜಯಪುರ[ನ.6]:  ಜಿಲ್ಲೆಯಲ್ಲಿ ಸೊಮವಾರ ಸುರಿದ ಭಾರೀ ಮಳೆಗೆ  ಕೆರೆ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿವೆ. ಭಾರೀ ಮಳೆಗೆ ಬರಟಗಿ ಬಳಿ ಸೇತುವೆಯ ಮೇಲ್ಭಾಗದ ಡಾಂಬರ್ ಕಿತ್ತು ಹೋಗಿದೆ. ಇದರಿಂದ ಬರಟಗಿ ಎಲ್. ಟಿ-5 ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯ ಮೇಲಿನ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಬರಟಗಿ ಎಲ್.ಟಿ-5, ಗುಣಕಿ ಕಾನ್ನಾಳಗೆ ತೆರಳಲು ಸುಮಾರು 20 ಕಿ. ಮೀ. ಸುತ್ತುವರೆದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸೇತುವೆಯನ್ನು ಕೇವಲ ಒಂದೂವರೆ ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಇದೀಗ ಭಾರೀ ಮಳೆಗೆ ಸೇತುವೆ ಮೇಲಿನ ಡಾಂಬರ್ ಕಿತ್ತು ಹೋಗಿದೆ. ಇದರಿಂದ ಕಳಪೆ ಗುಣಮಟ್ಟದ ಕಾಮಗಾರಿಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios