ವಿಜಯಪುರ(ಅ.08): ಆಲಮಟ್ಟಿಯಲ್ಲಿರುವ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಸಿಡಿಲು ಬಡಿದು ಜನರೇಟರ್ ಬೆಂಕಿಗಾಹುತಿಯಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತು ಬಿರುಸಿನ ಮಳೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ಮಧ್ಯಾಹ್ನ ಭಾರೀ ಮಳೆಯಾಗಿದ್ದು, ವಿದ್ಯುತ್ ಕೈ ಕೊಟ್ಟಿತ್ತು. ಈ ಸಂದರ್ಭ ಜನರೇಟರ್ ಬಳಸಲು ಮುಂದಾಗಿದ್ದು, ಆಲಮಟ್ಟಿ ಎಡದಂಡೆ ಕಾಲುವೆಯ ಕಚೇರಿಯ ಜನರೇಟರ್ ಸುಟ್ಟು ಭಸ್ಮವಾಗಿದೆ. ಜನರೇಟರ್‌ ಸುಮಾರು ಐದು ಲಕ್ಷ ರೂಪಾಯಿ ಬೆಲೆಬಾಳುತ್ತಿದ್ದು, ಜನರೇಟರ್ ಸೇರಿದಂತೆ ಕಚೇರಿಯ ಕಂಪ್ಯೂಟರ್ ಹಾಗೂ ಸಲಕರಣೆಗಳೂ ಹಾನಿಗೊಳಗಾಗಿವೆ.

ಬೆಳಗಾವಿ: ಪಾಳು ಬಿದ್ದ ಬೋರ್‌ವೆಲ್‌ನಲ್ಲಿ ಏಕಾಏಕಿ ಚಿಮ್ಮಿದ ನೀರು

ಆಲಮಟ್ಟಿಯಲ್ಲಿರುವ ಮುಖ್ಯ ಇಂಜಿನಿಯರ್ ಕಚೇರಿಯ ಜನರೇಟರ್ ಹಾಗೂ ಕಂಪ್ಯೂಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಮಳೆ ಬರುತ್ತಿದ್ದ ಸಂದರ್ಭ ಮಿಂಚಿನಿಂದಾಗಿ ಘಟನೆ ಸಂಭವಿಸಿದೆ.

ಸಿನಿಮೀಯ ಸ್ಟೈಲ್‌ನಲ್ಲಿ ಹಾಡ ಹಗಲೇ ನಡೀತು ದರೋಡೆ..!