ವಿಜಯಪುರ(ಅ.08): ವಿಡಿಯೋಗಳನ್ನು ನೋಡಿ ಸಿನಿಮೀಯ ರೀತಿಯಲ್ಲಿ ದರೋಡೆ, ಕಲೆ ಮಾಡೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ವಿಜಯಪುರದಲ್ಲಿ ಸಿನಿಮಾ ಸ್ಟೈಲ್‌ನಲ್ಲಿಯೇ ಹಾಡ ಹಗಲೇ ದರೋಡೆ ಮಾಡಲಾಗಿದೆ.

ಮೂವರು ದುಷ್ಕರ್ಮಿಗಳಿಂದ ಹಗಲು ದರೋಡೆ ನಡೆದಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಮುಖಕ್ಕೆ ಮಾಸ್ಕ್  ಹಾಕಿಕೊಂಡು ಕೃತ್ಯ ನಡೆಸಲಾಗಿದ್ದು, ನಡು ರಸ್ತೆಯಲ್ಲೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಆಟೋ ಡ್ರೈವರ್ ಕೊಲೆ ಮಾಡಿ ಜಮೀನಿಗೆ ಎಸೆದು ಪರಾರಿ

ಗ್ರಾಮೀಣ ಕೊಟಕ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದಕುಮಾರ ಹಂಚನಾಳ‌ನ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಲಾಗಿದೆ. ವಿನೋದಕುಮಾರ ಹಂಚನಾಳ‌ ಹಂಜಗಿ ಗ್ರಾಮದಲ್ಲಿ ಮಹಿಳಾ ಸ್ವ ಸಹಾಯ ಸಂಘದಿಂದ‌ ಹಣ ಸಂಗ್ರಹಿಸಿಕೊಂಡು ಬರುತ್ತಿದ್ದರು.

ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಸಾವು

ಇವರನ್ನು ದಾರಿ ಮಧ್ಯೆ ತಡೆದ ದರೋಡೆಕೋರರು 1.50 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೊಲಕ್ಕೆ ಹೋಗುವ ವಿಚಾರದಲ್ಲಿ ಜಗಳ: ಯುವತಿ ಆತ್ಮಹತ್ಯೆ