ವಿಜಯಪುರ(ಅ.28): ಬೆಂಕಿ ತಗುಲಿದ ಪರಿಣಾಮ ಮನೆ ಹಾಗೂ ಅಂಗಡಿ ಹೊತ್ತಿ ಉರಿದ ಘಟನೆ ನಗರದ ಸರಾಫ್ ಬಜಾರ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮನೆಯ ಕೆಳಹಂತದ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ ಮೇಲ್ಭಾಗದ ಮನೆಗೂ ಬೆಂಕಿ ವ್ಯಾಪಿಸಿತ್ತು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮನೆಗೆ ಬೆಂಕಿ ತಗುಲಿಒದ ಕೂಡಲೇ ಮೆನಯವರು ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂಭ ಶಂಕೆ ವ್ಯಕ್ತವಾಗಿದೆ. ಬೆಂಕಿಯಲ್ಲಿ ಮನೆ ಹೊತ್ತಿ ಉರಿಯೋ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.