ಬಸ್ ಚಕ್ರ ಹರಿದು ಸ್ಥಳದಲ್ಲೇ ವೃದ್ಧೆ ಸಾವು| ತನ್ನ ಮನೆಯಿಂದ ಪ್ರತ್ಯೇಕ ವಾಸವಾಗಿರುವ ವೃದ್ಧೆ ಮಗನ ಮನೆಗೆ ಉಪಹಾರ ಸೇವಿಸಲು ಹೊರಟಿದ್ದಾಗ ನಡೆದ ಘಟನೆ| ಈಕರಸಾ ಸಂಸ್ಥೆಯ ಮುದ್ದೇಬಿಹಾಳ ಘಟಕದ ಮುದ್ದೇಬಿಹಾಳ-ಲಕಲ್ ಮಾರ್ಗದ ಕೆಎ 28 ಎಫ್ 1826 ನಂಬರಿನ ಬಸ್ ಅನ್ನು ವಶಕ್ಕೆ ಪಡೆದ ಪೊಲೀಸರು| ಘಟನೆ ಬಳಿಕ ಆರೋಪಿ ಬಸ್ ಚಾಲಕ ಪರಾರಿ|
ವಿಜಯಪುರ(ಅ.17): ಸಾರಿಗೆ ಬಸ್ ಮುಂದಿನ ಚಕ್ರ ಹರಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ಮೃತ ವೃದ್ಧೆಯನ್ನು ಬಿಯಾಮಾ ನಬಿಸಾಬ ಟಕ್ಕಳಕಿ (67) ಎಂದು ಗುರುತಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತನ್ನ ಮನೆಯಿಂದ ಪ್ರತ್ಯೇಕ ವಾಸವಾಗಿರುವ ವೃದ್ಧೆ ಮಗನ ಮನೆಗೆ ಉಪಹಾರ ಸೇವಿಸಲು ಹೊರಟಿದ್ದಾಗ ಈ ಘಟನೆ ನಡೆದಿದೆ. ಈಕರಸಾ ಸಂಸ್ಥೆಯ ಮುದ್ದೇಬಿಹಾಳ ಘಟಕದ ಮುದ್ದೇಬಿಹಾಳ-ಇಲಕಲ್ ಮಾರ್ಗದ ಕೆಎ 28 ಎಫ್ 1826 ನಂಬರಿನ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಳಿಕ ಆರೋಪಿ ಬಸ್ ಚಾಲಕ ಕುಲಕರ್ಣಿ ಪರಾರಿಯಾಗಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಘಟನಾ ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಬಸ್ಸಿನ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
