ವಿಜಯಪುರ, (ಮಾ.12): ವಿಜಯಪುರ ‌ನಗರದ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ‌ ಬಸವ ತತ್ವದಡಿಯಲ್ಲಿ‌ ವಿಶೇಷ ಮದುವೆಯೊಂದು ನಡೆದಿದೆ.

 ಅಂತರ್ಜಾತಿ ವಿವಾಹದ ಜತೆಗೆ ಪರಸ್ಪರ ವಧು-ವರರು ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ. ಮಾರ್ಚ್ 10 ರಂದು ನಾಲತವಾಡದ ಹಳ್ಳೂರ್ ಪ್ಯಾಲೇಸ್‌ನಲ್ಲಿ ಬಸವ ತತ್ವದ ವಿವಾಹ ನಡೆಯಿತು. 

ಈ ವೇಳೆ ವಧು-ವರರಾದ ಉದ್ಯಮಿ ಪ್ರಭುರಾಜ್-ಅಂಕಿತಾ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಅಮಿತ್- ಪ್ರಿಯಾ ಪರಸ್ಪರ ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ.

 ಇನ್ನು ಈ ವಿವಾಹಕ್ಕೆ ಮಹೂರ್ತ‌ ನಿಗದಿ ಮಾಡಿರಲಿಲ್ಲ. ಅಲ್ಲದೆ ಅಕ್ಷತೆ ಹಾಕದೇ ಪುಷ್ಷವೃಷ್ಟಿ ಮಾಡಲಾಗಿದೆ. ಸಮಾನತೆಯ ಸಂಕೇತವಾಗಿ ವಧು ವರರು ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. 

ಈ ಮೂಲಕ ಗಂಡ-ಹೆಂಡತಿ ಇಬ್ಬರೂ ಸಮಾನರು ಎಂಬ ಸಂದೇಶ ರವಾನಿಸಿದ್ದಾರೆ. ಈ ವಿಶೇಷ ವಿವಾಹಕ್ಕೆ ವಿವಿಧ ಮಠಾಧೀಶರು ಸಾಕ್ಷಿಯಾದ್ದರು.