ವಿಜಯಪುರ[ನ.3]: ಬಸನಗೌಡ ಪಾಟೀಲ ಯತ್ನಾಳ ಒಬ್ಬ  'ಬಿಲ್ಡಪ್ ಆಂಡ್ ಬೋಗಸ್' ಶಾಸಕರಾಗಿದ್ದಾರೆ. ಸುಳ್ಳು ಮಾತನಾಡಿ ಬರೀ ಬಿಲ್ಡಪ್ ತೆಗೆದುಕೊಳ್ತಾರೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ಅವರು ಯತ್ನಾಳ ವಿರುದ್ಧ ಹಾರಿಹಾಯ್ದಿದ್ದಾರೆ. ಈ ಮೂಲಕ ಇವರಿಬ್ಬರ ನಡುವೆ ಮತ್ತೊಮ್ಮೆ ಶೀತಲ ಸಮರ ಆರಂಭವಾಗಿದೆ. 

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಏನ್ ಕಿಸಿದರು? ಎಂದು ಶಾಸಕ ಯತ್ನಾಳ ಹೇಳಿಕೆಗೆ  ಟಾಂಗ್ ಕೊಟ್ಟ ಅಪ್ಪು ಪಟ್ಟಣಶಟ್ಟಿ ಮಹಾರಾಷ್ಟ್ರ ಚುನಾವಣೆಯಲ್ಲಿ ನಾವೇನು ಕಿಸಿದಿದ್ದೀವಿ ಅನ್ನೋದನ್ನೆ ಹೇಳ್ತಿದ್ದೀನಿ ಕೇಳಿ ಯತ್ನಾಳ್ ಅವರೆ ನೀವು ಕಳೆದ ಮಹಾ ಚುನಾವಣೆಯಲ್ಲಿ ಬೇರೆ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ನಡೆಸಿ ಪಕ್ಷಕ್ಕೆ ದ್ರೋಹ ಮಾಡಿದ್ದೀರಿ, ಇದನ್ನ ನೀವು ಮರೆಯಬಾರದು. ನನಗೆ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹೇಳಿದ್ದರು. ನಾವು ಪ್ರಚಾರ ಮಾಡಿದಲ್ಲಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಸ್ಥಳೀಯ ಸಮಸ್ಯೆಗಳಿಂದ ಏನಾದರು ಆಗಿರಬೇಕು."ಏನ್ ಕಿಸಿದರು" ಅಂತಾ ನೀವು ಮಾತನಾಡಿದ್ದು ತಪ್ಪು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂದರ್ಭ ಬಂದಂತೆ ಹೊರಳಾಡೋದು ಯತ್ನಾಳ ರಾಜಕಾರಣವಾಗಿದೆ. ಪಕ್ಷ ತಾಯಿ ಅಂತಾರೇ, ಪಕ್ಷದ ನಾಯಕರಿಗೆ ಬೈತಾರೆ. ಶೋಕಾಸ್ ನೋಟಿಸ್ ವಿಚಾರದಲ್ಲಿ ಉತ್ತರ ಕೊಡಲ್ಲ ಎಂದು ಉತ್ತರ ಕೊಟ್ಟಿದ್ದಾರೆ.ಹೈಕಮಾಂಡ್ ಗೆ ಹೆದರಲ್ಲ ಅನ್ನೊದಾದ್ರೆ ಉತ್ತರ ಯಾಕೆ ಕೊಟ್ಟರು ಎಂದು ಅಪ್ಪು ಪ್ರಶ್ನೆ ಮಾಡಿದ್ದಾರೆ. ಪಕ್ಷದವರನ್ನೇ ಟೀಕಿಸೋದು ಯತ್ನಾಳ್ ಜಾಯಮಾನ. ಯತ್ನಾಳ್ ಗೆ ತಾವು ಮಾಡಿದ್ರೆ ಖರೇ ಬೇರೆಯವರು ಮಾಡಿದ್ರೆ ಸುಳ್ಳು ಅನ್ನೋ ಭ್ರಮೆ ಇದೆ. ಯತ್ನಾಳ ಮಹಾರಾಷ್ಟ್ರದಲ್ಲಿ ಪ್ರಚಾರಕ್ಕೆ ಹೋಗಿದ್ರೆ ಎಲ್ಲಾ ಸ್ಥಾನಗಳಲ್ಲಿ ಗೆದ್ದು ಬಿಡ್ತಿತ್ತಾ.? ಹಿಂದೆ ಯತ್ನಾಳ್ ಪ್ರಚಾರಕ್ಕೆ ಹೋಗಿ ಎಷ್ಟು ಸೀಟು ಗೆಲ್ಲಿಸಿದ್ದಾರೆ ಹೇಳಲಿ ನೋಡೋನ. ಯತ್ನಾಳ್ ಬಾಯಿ ಮುಚ್ಚಿದರೇ ನಾನು ಮುಚ್ತೀನಿ ಎಂದ ಹೇಳಿದ್ದಾರೆ.

ಯತ್ನಾಳ ಸುಳ್ಳಿನ ಹವಾದಲ್ಲಿ ಹೊರಟಿದ್ದಾರೆ.ವಿಜಯಪುರ ಜನ ಮುಗ್ದರು ನಂಬಿದ್ದಾರೆ. ಒಂದು ದಿನ ಅಸಲಿಯತ್ತು ಹೊರಗೆ ಬಂದೇ ಬರುತ್ತೆ. ಯತ್ನಾಳ ಸಿಎಂ ಯಡಿಯೂರಪ್ಪ ನಿಷ್ಟೆ, ಆರ್ ಎಸ್ ಎಸ್ ನಿಷ್ಟೆ, ಹಿಂದೂತ್ವದ ನಿಷ್ಟೆಯ ಸತ್ಯ ಬಯಲಾಗಲಿದೆ. ಯತ್ನಾಳ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ. ಯತ್ನಾಳರಿಗೆ ಮಾತನಾಡಲು ಇತಿ ಮಿತಿ ಇದೆ. ಇತಿ ಮಿತಿ ಬಿಟ್ಟು ಮಾತನಾಡಿರೇ ಹಿರಿಯರು ಕ್ರಮ ತೆಗೆದುಕೊಳ್ತಾರೆ. ನಾನು ಯತ್ನಾಳ ಕುರಿತು ಹೈಕಮಾಂಡ್ ಗೆ ಯಾವುದೇ ದೂರು ನೀಡಲು ಹೋಗಲ್ಲ ಎಂದ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ಅವರು ಹೇಳಿದ್ದಾರೆ.