‘ಯತ್ನಾಳ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು’
ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆಗೆ ರಾಘವ ಅಣ್ಣಿಗೇರಿ ಆಗ್ರಹ| 15 ವರ್ಷಗಳಲ್ಲಿ ರಸ್ತೆಗಳ ಬಗ್ಗೆ ಮಾತನಾಡಿದ್ದಕ್ಕೆ ಅಭಿನಂದನೆಗಳು| 2 ಬಾರಿ ಸಚಿವರಾಗಿದ್ದಿರಿ| 2 ಅವಧಿಗೆ ಶಾಸಕರಾಗಿ 9 ವರ್ಷದ ವಿಜಯಪುರ ರಾಜ್ಯಭಾರ ಮಾಡಿದ್ದೀರಿ| ನಿಮ್ಮ ಅವಧಿಯಲ್ಲಿ ರಸ್ತೆ ಸುಸ್ಥಿತಿಯಲ್ಲಿಟ್ಟಿದ್ದರೆ. ಈ ಪರಿಸ್ಥಿತಿ ಬರುತ್ತಿರಲಿಲ್ಲ| 9 ವರ್ಷಗಳ ರಾಡಿಯನ್ನು ಕೇವಲ 15 ತಿಂಗಳಲ್ಲಿ ಬಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು|
ವಿಜಯಪುರ[ಅ.16]: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ದ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕೆಂದು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಅವರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರನ್ನು ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ವರ್ಷಗಳಲ್ಲಿ ರಸ್ತೆಗಳ ಬಗ್ಗೆ ಮಾತನಾಡಿದ್ದಕ್ಕೆ ಅಭಿನಂದನೆಗಳು. ನೀವು 2 ಬಾರಿ ಸಚಿವರಾಗಿದ್ದಿರಿ. 2 ಅವಧಿಗೆ ಶಾಸಕರಾಗಿ 9 ವರ್ಷದ ವಿಜಯಪುರ ರಾಜ್ಯಭಾರ ಮಾಡಿದ್ದೀರಿ. ನಿಮ್ಮ ಅವಧಿಯಲ್ಲಿ ರಸ್ತೆ ಸುಸ್ಥಿತಿಯಲ್ಲಿಟ್ಟಿದ್ದರೆ. ಈ ಪರಿಸ್ಥಿತಿ ಬರುತ್ತಿರಲಿಲ್ಲ, 9 ವರ್ಷಗಳ ರಾಡಿಯನ್ನು ಕೇವಲ 15 ತಿಂಗಳಲ್ಲಿ ಬಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮಾಜಿ ಸಚಿವ
ಯುಜಿಡಿ ಕಾಮಗಾರಿಯಲ್ಲಿ ಕಮೀಷನ್ ಕೇಳಿದೀರಿ. ಎಡಿಬಿಯಿಂದ 18 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿಯನ್ನು ಯಾಕೆ ಮುಗಿಸಲಿಲ್ಲ 15 ತಿಂಗಳ ಕೂಸನ್ನು ಎದ್ದು ಓಡಾಡಿ ಎಂದರೇ ಹೇಗೆ, ಯಾರ್ಯಾರ ಜೊತೆ ಒಳ ಒಪ್ಪಂದ ಇದೆ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು. ಸಾರ್ವಜನಿಕರ ಜೊತೆ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದೀರಿ. ಯಾರ ವಿರುದ್ದ ಹೋರಾಟ ಮಾಡುತ್ತೀರಿ. ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೀರೆಂದೇ ಅರ್ಥ. ಹಾಗಾಗಿ ತಕ್ಷಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದರು.
2013 ರಲ್ಲಿ 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೀರಿ. ನೀವು ಒಳ್ಳೆಯ ಕೆಲಸ ಮಾಡಿದ್ದರೆ ನೀವ್ಯಾಕೆ ಆ ಸ್ಥಾನಕ್ಕೆ ತಳ್ಳಲ್ಪಡುತ್ತಿದ್ದಿರಿ, ಹೀಗಾಗಿಯೇ ನಿಮಗೆ ಟಿಕೆಟ್ ತಪ್ಪಿತು ಎಂದರು. 15 ತಿಂಗಳಲ್ಲೇ ಯತ್ನಾಳರು, 500 ಕೋಟಿ ರು. ಅನುದಾನ ತಂದಿದ್ದಾರೆ. ಮಿನಿ ವಿಧಾನಸೌಧಕ್ಕೆ ಈಗಾಗಲೇ 25 ಕೋಟಿ ರು. ಬಂದಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆ ಅಡಿ 9500 ಮನೆಗಳು ಮಂಜೂರಾಗಿವೆ. ನೀವೆಷ್ಟು ತಂದಿದ್ದೀರಿ ಎಂದು ಪ್ರಶ್ನಿಸಿದ ಅವರು, ಕೇವಲ 5 ಮನೆ ತಂದಿದ್ದರೆ ನಾನು ರಾಜಕೀಯ ಬಗ್ಗೆ ಮಾತನಾಡದೆ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ. ವೃಥಾ ಆರೋಪ ಮಾಡುವ ಬದಲಿಗೆ ನಿಮ್ಮದೇ ಸಾಧನೆಯ ಪುಸ್ತಕ ಬರೆದುಕೊಳ್ಳಿ ಎಂದರು.
ಸಿದ್ದ ಸಿರಿ ಹಾಗೂ ಸಿದ್ದೇಶ್ವರ ಸಂಸ್ಥೆಯಿಂದ 3.5 ಲಕ್ಷ ರು.ಮೊತ್ತದ ಪರಿಹಾರ ಸಂತ್ರಸ್ತರಿಗೆ ಕೊಟ್ಟಿದ್ದಾರೆ. ಏನೂ ನೀಡಿಲ್ಲ ಎಂದು ಹೇಳುತ್ತಿದ್ದಿರಿ. ಇದಕ್ಕೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಸಿದ್ದಿಸಿರಿ, ಸಿದ್ದೇಶ್ವರ ಸಂಸ್ಥೆ ಹೆಸರು ದುರ್ಬಳಕೆ ಮಾಡಿದ್ದಾರೆ. ಅವರು15 ದಿನದಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರನ್ನು ತಕ್ಷಣ ಹೊರಹಾಕಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾಗಿ ಇದೇ ವೇಳೆ ತಿಳಿಸಿದರು.