Asianet Suvarna News Asianet Suvarna News

Omicron Variant: ವಿಶ್ವದಲ್ಲಿ ಕೋವಿಡ್‌ ಸುನಾಮಿ, ಆರೋಗ್ಯ ವ್ಯವಸ್ಥೆಯೇ ಕುಸಿಯುವ ಆತಂಕ: WHO

ಒಮಿಕ್ರೋನ್‌ (Omicron) ಹಾಗೂ ಡೆಲ್ಟಾ ರೂಪಾಂತರಿಯ (Delta) ಕೋವಿಡ್‌ ಪ್ರಕರಣಗಳು ಒಟ್ಟಿಗೇ ವಿಶ್ವಾದ್ಯಂತ ದಾಖಲಾಗುತ್ತಿವೆ. ಹೀಗಾಗಿ ಇಡೀ ಆರೋಗ್ಯ ವ್ಯವಸ್ಥೆಯೇ ಕುಸಿದು ಬೀಳುವ ಆತಂಕ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಆತಂಕ ವ್ಯಕ್ತಪಡಿಸಿದೆ. 

ನವದೆಹಲಿ(ಡಿ. 31): ಕೊರೋನಾದ ಹೊಸ ತಳಿ ಒಮಿಕ್ರೋನ್‌ (Omicron) ಪತ್ತೆಯಾದ ಬಳಿಕ ಭಾರತವೂ ಸೇರಿದಂತೆ ವಿಶ್ವಾದ್ಯಂತ ಹೊಸದಾಗಿ ಸೋಂಕಿತರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಭಾರತದಲ್ಲಿ  ಒಂದೇ ದಿನ 13000ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿದ್ದರೆ, ಕರ್ನಾಟಕದಲ್ಲಿ ಹೊಸದಾಗಿ ಸೋಂಕಿತರ ಸಂಖ್ಯೆ ಮತ್ತೆ 700ರ ಗಡಿ ದಾಟಿದೆ. 

Local Body Poll Results: ಬಿಜೆಪಿ ಬುಡ ಗಡಗಡ, ಕಾಂಗ್ರೆಸ್ ಪರ ಒಲವು, ಮುಂದಿನ ಚುನಾವಣೆಗೆ ದಿಕ್ಸೂಚಿ.?

ಒಮಿಕ್ರೋನ್‌ (Omicron) ಹಾಗೂ ಡೆಲ್ಟಾ ರೂಪಾಂತರಿಯ (Delta) ಕೋವಿಡ್‌ ಪ್ರಕರಣಗಳು ಒಟ್ಟಿಗೇ ವಿಶ್ವಾದ್ಯಂತ ದಾಖಲಾಗುತ್ತಿವೆ. ಹೀಗಾಗಿ ಇಡೀ ಆರೋಗ್ಯ ವ್ಯವಸ್ಥೆಯೇ ಕುಸಿದು ಬೀಳುವ ಆತಂಕ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಆತಂಕ ವ್ಯಕ್ತಪಡಿಸಿದೆ. 

‘ಒಮಿಕ್ರೋನ್‌ ಇದು ಹೆಚ್ಚು ಸೋಂಕುಕಾರಕ ಆಗಿರುವ ಕಾರಣ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಬಹುದು. ಈಗಾಗಲೇ ಕೋವಿಡ್‌ನ ಮೊದಲ 2-3 ಅಲೆಗಳನ್ನು ವಿಶ್ವಾದ್ಯಂತ ಎದುರಿಸಿ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರು ಸುಸ್ತಾಗಿ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಮತ್ತೆ ಸೋಂಕಿನ ಸುನಾಮಿ ಉಂಟಾದರೆ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಚಿಕಿತ್ಸೆ ನೀಡಲೂ ಆಗದಷ್ಟುಅಸಹಾಯಕ ಸ್ಥಿತಿಗೆ ವೈದ್ಯಕೀಯ ವ್ಯವಸ್ಥೆ ಹೋಗಬಹುದು. ವೈದ್ಯಕೀಯ ಸಿಬ್ಬಂದಿಯಲ್ಲೇ ಅನೇಕರು ಕೋವಿಡ್‌ಗೆ ತುತ್ತಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದೆ. 

Video Top Stories