Asianet Suvarna News Asianet Suvarna News

2023ನೇ ಸಾಲಿನ ಆ್ಯಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ ಪ್ರಧಾನ!

ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಲಂಡನ್‌ನ ಕ್ವೀನ್ ಎಲಿಜಬೆತ್‌ 2 ಸೆಂಟರ್‌ನಲ್ಲಿ ನಡೆಯಿತು. ಭಾರತದ ಶಾಂತಿ ತೆರೆಸಾ ಲಕ್ರಾ ಫೈನಲಿಸ್ಟ್ ಆಗಿದ್ದರೆ, ಇಂಗ್ಲಂಡ್‌ನ ಮಾರ್ಗರೆಟ್‌ ಹೆಲೆನ್ ಶಫರ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಲಂಡನ್(ಮೇ.22): ಆರೋಗ್ಯ ಕ್ಷೇತ್ರದ ಪ್ರಖ್ಯಾತ ಸಂಸ್ಥೆಯಾಗಿರುವ ಆ್ಯಸ್ಟರ್‌ ಡಿಎಂ ಹೆಲ್ತ್‌ಕೇರ್‌ ಯುಕೆಯಲ್ಲಿ 2023ನೇ ಸಾಲಿನ  ಆ್ಯಸ್ಟರ್‌ ಗಾರ್ಡಿಯನ್ಸ್‌ ಗ್ಲೋಬಲ್‌ ನರ್ಸಿಂಗ್‌ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಲಂಡನ್‌ನ ಕ್ವೀನ್ ಎಲಿಜಬೆತ್‌ 2 ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಈ ವರ್ಷ 202 ದೇಶಗಳ 52 ಸಾವಿರ ನರ್ಸ್‌ಗಳು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಅಂತಾರಾಷ್ಟ್ರೀಯ ದಾದಿಯರ ದಿವಸದಂದೇ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.ಕೀನ್ಯಾದ ಕ್ರಿಸ್ಟೈನ್ ಮಾವಿಅ ಸ್ಯಾಮಿ,  ಇಂಗ್ಲಂಡ್‌ನ ಮಾರ್ಗರೆಟ್‌ ಹೆಲೆನ್ ಶಫರ್ಡ್, ತಾಂಜಾನಿಯಾದ ವಿಲ್ಸನ್ ಫಂಗಮೇಜಾ, ಫಿಲಿಪೈನ್ಸ್‌ನ ಮೈಕೆಲ್ ಜೋಸೆಫ್ ಡೀನೋ, ಯುಎಇಯ ಕ್ಯಾತಿ ಕ್ರಿಬ್ಬನ್ ಪಿಯರ್ಸ್, ಪನಾಮಾದ ಗ್ಲೋರಿಯಾ ಇಟ್ಜೆಲ್ ಸೆಬ್ಯಾಲೋ ಬಟಿಸ್ಟಾ, ಐರ್ಲ್ಯಾಂಡ್‌ನ ಜಿನ್ಸಿ ಜೆರಿ, ಸಿಂಗಾಪುರದ ಲಿಲಿಯನ್ ಇವ್‌ಸಿವ್‌ಮೀ, ಭಾರತದ ಶಾಂತಿ ತೆರೆಸಾ ಲಕ್ರಾ ಹಾಗೂ ಪೋರ್ಚುಗಲ್‌ನ ತೆರೆಸಾ ಫ್ರಾಗಾ ಫೈನಲಿಸ್ಟ್‌ಗಳಾಗಿದ್ದರು.

Video Top Stories