ಪ್ರೀತಿ..ಪ್ರೇಮ..ಪ್ರಣಯದ ದೇಶದಲ್ಲಿ ಜ್ವಾಲೆ ಹುಟ್ಟಿದ್ದು ಯಾಕೆ?: ಪ್ಯಾರಿಸ್‌ನಲ್ಲೀಗ ಎಲ್ಲಿ ನೋಡಿದರೂ ಬೆಂಕಿ..!
ಫ್ರೆಂಚರ ನೆಮ್ಮದಿಯೆಲ್ಲ ಭಸ್ಮ..ಭಸ್ಮ..ಭಸ್ಮ..!
ಬೂದಿಯಾಯ್ತು ಲಕ್ಷಾಂತರ ಪುಸ್ತಕಗಳಿದ್ದ ಗ್ರಂಥಾಲಯ
ಫ್ರ್ಯಾನ್ಸ್‌ನಲ್ಲಿ ಇತಿಹಾಸವೇ ಸರ್ವನಾಶವಾಗಿ ಹೋಯ್ತು..!
ಒಂದು ಕಾಲದಲ್ಲಿ ಜಗತ್ತನ್ನೇ ಆಳುವ ಕ್ರೌರ್ಯವನ್ನು ಹೊದ್ದುಕೊಂಡಿದ್ದ ಫ್ರೆಂಚರು, ಆನಂತರ ಬದಲಾದರು. ಜಗತ್ತಿಗೇ ಪ್ರೀತಿ ಹಂಚುವ ರಾಯಭಾರಿಗಳಾದರು. ಅಂತಹವರು ಆರೇಳು ವರ್ಷಗಳ ಹಿಂದೆ ಜಗತ್ತಿಗೇ ತೋರಿಸಿದ ಮಾನವೀಯತೆ.ಇವತ್ತು ಶಾಪವಾಗಿದೆ. ಫ್ರಾನ್ಸ್ನ ಮಾರ್ಸೆಲಿ ನಗರದಲ್ಲಿದ್ದ ಯೂರೋಪಿನ ಇತಿಹಾಸವನ್ನೇ ಸುಟ್ಟು ಹಾಕಿದ್ದಾರೆ. ಅಪಾರ್ಟ್ಮೆಂಟುಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಸ್ವಂತ ಮನೆಯೂ ಸೇಫ್ ಅಲ್ಲ. ಮಾಲ್‌ಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಕದ್ದುಕೊಂಡು ಹೋಗಿದ್ದಾರೆ. ಮಾಲ್‌ಗಳೂ ಸೇಫ್ ಅಲ್ಲ. ರಸ್ತೆ ರಸ್ತೆಯಲ್ಲಿ ಬೆಂಕಿ ಬಿದ್ದಿದೆ. ಅರ್ಧ ಲಕ್ಷ ಜನ ಪೊಲೀಸರಿದ್ದರೂ ಫ್ರೆಂಚರು ಸೇಫ್ ಅಲ್ಲ.ಫ್ರೆಂಚರ ನೆಮ್ಮದಿಗೇ ಬೆಂಕಿ ಹಚ್ಚಿ ಬಿಟ್ಟಿದ್ದಾರೆ ಗಲಭೆಕೋರರು. ಇದೀಗ ಫ್ರಾನ್ಸ್ ಪ್ರಣಯ ನಗರವಾಗಿ ಉಳಿದಿಲ್ಲ. ಪ್ರೀತಿಯ ನಗರವಾಗಿ ಬದುಕಿಲ್ಲ. ನೆಮ್ಮದಿಯನ್ನು ಅರಸಿಕೊಂಡು ಹೋಗುವ ದೇಶದ ಲಿಸ್ಟಿನಲ್ಲಿ ಈಗ ಫ್ರಾನ್ಸ್ ಇಲ್ಲ. ಫ್ರಾನ್ಸ್ ಧಗಧಗಿಸುತ್ತಿದೆ.
ಇದನ್ನೂ ವೀಕ್ಷಿಸಿ: ಪ್ರತಿಪಕ್ಷ ನಾಯಕರ ರೇಸ್‌ನಲ್ಲಿದ್ದವರಿಗೆ ಬಿಗ್ ಶಾಕ್: ವೀಕ್ಷಕರ ವರದಿ ಬಳಿಕ ಆಯ್ಕೆ, ಯಾರಾಗ್ತಾರೆ ನಾಯಕ ?