Asianet Suvarna News Asianet Suvarna News

ದುಡ್ಡಿನ ದಂಗಲ್ ಗೆಲ್ತಾರಾ ಸಿಂಗಲ್ ಸಿಂಹ ಮೋದಿ?

ಕೊರೊನಾದಿಂದ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ಕುಸಿದು ಹೋಗಿರುವ ಆರ್ಥಿಕತೆಯನ್ನು ಮೇಲೆತ್ತಲು ಸಾಕಷ್ಟು ಸಮಯ ಹಾಗೂ ಪ್ಲಾನ್‌ನ ಅವಶ್ಯಕತೆ ಇದೆ. ಜೊತೆಗೆ ಇಂತಹ ಸಂದಿಗ್ಥ ಸಮಯದಲ್ಲಿ ಆರ್ಥಿಕ ಅಭಿವೃದ್ಧಿ ಅನ್ನೋದು ಒಂದು ದೊಡ್ಡ ಸವಾಲಾಗಿದೆ. 

ನವದೆಹಲಿ (ಜು. 18): ಕೊರೊನಾದಿಂದ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ಕುಸಿದು ಹೋಗಿರುವ ಆರ್ಥಿಕತೆಯನ್ನು ಮೇಲೆತ್ತಲು ಸಾಕಷ್ಟು ಸಮಯ ಹಾಗೂ ಪ್ಲಾನ್‌ನ ಅವಶ್ಯಕತೆ ಇದೆ. ಜೊತೆಗೆ ಇಂತಹ ಸಂದಿಗ್ಥ ಸಮಯದಲ್ಲಿ ಆರ್ಥಿಕ ಅಭಿವೃದ್ಧಿ ಅನ್ನೋದು ಒಂದು ದೊಡ್ಡ ಸವಾಲಾಗಿದೆ. ಪ್ರಧಾನಿ ಮೋದಿ ವಿತ್ತ ಸಚಿವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. 

'ಭಾರತದ ಒಂದಿಂಚೂ ಭೂಮಿಯನ್ನೂ ಸ್ಪರ್ಶಿಸಲು ವಿಶ್ವದ ಯಾವುದೇ ಶಕ್ತಿಗಳಿಂದ ಆಗದು'

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯನ್ನುದ್ದೇಶಿಸಿ, ಕೊರೊನಾ ವೈರಸ್ ಕಾರಣದಿಂದ ಜಗತ್ತು ಎದುರಿಸುತ್ತಿರುವ ಸಂಕಷ್ಟಗಳನ್ನು ಉಲ್ಲೇಖಿಸುತ್ತಾ, ಕೊರೊನಾ ಅಟ್ಟಹಾಸಕ್ಕೆ ಭಾರತ ಮಾತ್ರವಲ್ಲ, ಅತ್ಯಂತ ಶಕ್ತಿಶಾಲಿ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶಗಳೇ ತತ್ತರಿಸಿ ಹೋಗಿವೆ. ಅಮೆರಿಕಾ ಅಮೆರಿಕಾವೇ ಏದುರಿಸಿ ಬಿಡುತ್ತದೆ. ಯುರೋಪ್‌ ದೇಶಗಳಿಗೆ ದಿಕ್ಕೇ ಕಾಣದಂತಾಗಿದೆ. ಆರ್ಥಿಕ ಚೇತರಿಕೆಗೆ ಇಡೀ ವಿಶ್ವವೇ ಒಂದಾಗಿ ಹೋರಾಡಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.