ಹಮಾಸ್ ಬುಡಕ್ಕೆ ಪೆಟ್ಟು ಕೊಟ್ಟವನು ಹೇಳಿದ್ದೇನು..? ಸನ್ ಆಫ್ ಹಮಾಸ್.. ರಹಸ್ಯಗಳೆಲ್ಲಾ ಬಯಲು!
ನೆತನ್ಯಾಹು ನಿಲುವಿನ ಬಗ್ಗೆ ಇಸ್ರೇಲ್ ಹೇಳೋದೇನು!
ಭಯಾನಕ ದಾಳಿಯ ಭೀಕರ ಭವಿಷ್ಯ ಹೇಗಿರಲಿದೆ..?
ಸನ್ ಆಫ್ ಹಮಾಸ್.. ರಸಹ್ಯಗಳೆಲ್ಲಾ ಬಯಲು..!
ಹಮಾಸ್ ದಾಳಿಯಿಂದಾಗಿ ಇಸ್ರೇಲ್ ಅನ್ನೋ ದೇಶ ರಣಾಂಗಣವಾಗಿ ಬದಲಾಗಿದೆ. ಗಾಜಾ (Gaza)ಪಟ್ಟಿ ಅಕ್ಷರಶಃ ಸ್ಮಶಾನವೇ ಆಗಿಬಿಟ್ಟಿದೆ. ಜಾಗತಿಕ ಮಟ್ಟದಲ್ಲಿ ಘನಘೋರ ಪ್ರಭಾವ ಬೀರ್ತಾ ಇರೋ ಈ ಯುದ್ಧದ ಇಂಚಿಂಚು ಮಾಹಿತಿನೂ ನಿಮ್ಮ ಮುಂದಿಡೋಕೆ, ಸತ್ಯದ ಅನಾವರಣ ಮಾಡೋಕೆ, ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್, ರಣಕಣಕ್ಕೇ ಕಾಲಿಟ್ಟಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನರ್, ಕ್ಯಾಮರ್ಮನ್ ಮೋಹನ್ ರಾಜ್ ಜೊತೆ ಇಸ್ರೇಲಿನ ರಣಭೂಮಿಯಲ್ಲಿ ನಿಂತು ನ್ಯೂಸ್ ರಿಪೋರ್ಟ್ ಕೊಟ್ಟಾಗ, ಕನ್ನಡದ ವೀಕ್ಷಕರು ಅಚ್ಚರಿ ಪಟ್ಟಿದ್ದಂತೂ ಸುಳ್ಳಲ್ಲ. ಇಸ್ರೇಲಿನ(Israel) ಸಂಘರ್ಷದ ಮೂಲನೆಲೆಯಿಂದ ಹಿಡಿದು, ಯುದ್ಧ ಪ್ರಭಾವಕ್ಕೆ ನಲುಗ್ತಾ ಇರೋ ಮೂಲೆಮೂಲೆಯನ್ನೂ ನಿಮ್ಮ ಮುಂದೆ ತೋರಿಸಿದ್ದಾಯ್ತು. ಸನ್ ಆಫ್ ಹಮಾಸ್(Hamas) ಅನ್ನೋ ಈ ಪುಸ್ತಕ ಇದ್ಯಲ್ಲಾ, ಇದು ಬರೀ ಪುಸ್ತಕವಲ್ಲ. ಇಸ್ರೇಲಿನ ಚರಿತ್ರೆ, ತನ್ನ ಉಳಿವಿಗಾಗಿ ಆ ದೇಶ ಎಷ್ಟೆಲ್ಲಾ ರಿಸ್ಕ್ ತಗೊಳುತ್ತೆ, ಎಂತೆಂಥಾ ಟಾಸ್ಕ್ಗೆ ಕೈಹಾಕುತ್ತೆ ಅನ್ನೋದನ್ನ ಅರ್ಥ ಮಾಡಿಸೋ ಪುಸ್ತಕವಿದು. ಹಮಾಸ್ ಸಂಸ್ಥಾಪಕನ ಮಗ, ಮೊಸಾಬ್ ಹಸನ್ ಯೂಸೆಫ್(Mosab Hasan Yousef) ಈ ಪುಸ್ತಕದ ಬರಹಗಾರ.. ಬೈ ದಿ ವೇ, ಈ ಪುಸ್ತಕ ಆತನ ಆತ್ಮ ಕಥೆ. ಹಮಾಸ್ ಸಂಸ್ಥಾಪಕನ ಮಗ, ಇಸ್ರೇಲ್ ಧ್ವಂಸಕ್ಕೆ ಹಮಾಸ್ ಮಾಡ್ತಾ ಇದ್ದ ಪ್ರತಿ ದಾಳಿಯ ವಿವರನ್ನೂ ಇಸ್ರೇಲಿನ ಸೀಕ್ರೆಟ್ ಏಜನ್ಸಿಗೆ ಹೇಳ್ತಾ ಇದ್ದ. ಉಗ್ರರು ಹಾಕಿಕೊಂಡಿದ್ದ ಫ್ಲ್ಯಾನ್‌ಗಳೆಲ್ಲಾ ಆರಂಭದಲ್ಲೇ ಫ್ಲಾಪ್ ಆಗ್ತಾ ಇದ್ವು. ಇದರಿಂದಲೇ ಸಾವಿರಾರು ಜನರ ಜೀವ ಉಳಿದಿತ್ತು. ಇಂಥಾ ಕಾರ್ಯಕ್ಕೆ ಮೊಸಾಬ್ ಮುಂದಾಗಿದ್ರೆ, ಅವನ ಹಿಂದಿದ್ದು ಇದನ್ನೆಲ್ಲಾ ಮಾಡಿಸಿದ್ದು ಯಾರು ಗೊತ್ತಾ..? ಗೊನೆನ್ ಬೆನ್ ಇಟ್ಜಾಕ್. ಇಸ್ರೇಲ್ ಪರಿಸ್ಥಿತಿ ಈಗ ಕ್ಲಿಷ್ಟಕರವಾಗಿದೆ. ನಮಗೂ ಇದರಿಂದ ಆಘಾತವಾಗಿದೆ. ನಮ್ಮ ಸ್ನೇಹಿತರು, ಪರಿಚತರನ್ನು ಕಳೆದುಕೊಂಡಿದ್ದೇವೆ. ಅಕ್ಟೋಬರ್ 7ರ ನರಮೇಧದಲ್ಲಿ ಹತರಾದವರ ಅಂತ್ಯಕ್ರಿಯೆಗಳಿಗೆ, ಸಂತ್ರಸ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದೇನೆ.
ಇದನ್ನೂ ವೀಕ್ಷಿಸಿ: ಮೋದಿ, ಅದಾನಿ ವಿರುದ್ಧ ಆರೋಪ ಮಾಡಿ ಏಕಾಂಗಿಯಾದ್ರಾ ಮೊಯಿತ್ರಾ..?