ಮೋದಿ, ಅದಾನಿ ವಿರುದ್ಧ ಆರೋಪ ಮಾಡಿ ಏಕಾಂಗಿಯಾದ್ರಾ ಮೊಯಿತ್ರಾ..?

ಹೀರಾ ನಂದಾನಿಯಿಂದ ಹಣ, ದುಬಾರಿ ಗಿಫ್ಟ್ ಪಡೆದು ಅದಾನಿ ವಿರುದ್ಧ ಪ್ರಶ್ನೆ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾಜಿ ಗೆಳೆಯನಿಂದ ಸಿಬಿಐಗೆ ದೂರು
ಮಹುವಾ ಮೊಯಿತ್ರಾ ಗೆಳೆಯ ಜೈ ಅನಂತ್ ದೆಹಾದ್ರೈರಿಂದ ಸಿಬಿಐಗೆ ದೂರು
 

First Published Oct 27, 2023, 12:34 PM IST | Last Updated Oct 27, 2023, 12:34 PM IST

ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ(Mahua Moitra) ವಿಚಾರಣೆಗೆ ಸದನ ನೀತಿ ನಿಯಮ ಸಮಿತಿ ದಿನ ನಿಗದಿ(lok sabha ethics committee ಮಾಡಿದೆ. ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗುವಂತೆ ಸಮಿತಿ ಸೂಚಿಸಿದೆ. ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಸೋಂಕರ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ತಮ್ಮ ವಿರುದ್ಧದ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ದೂರು ನೀಡಿರುವ ನಿಶಿಕಾಂತ್ ದುಬೆ, ವಕೀಲ ಅನಂತ್ ದೆಹದ್ರಾಯ್ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ಸಮಿತಿ ಎದುರು ಹಾಜರಾಗಿ ಮಾಹಿತಿ ಕೊಟ್ಟಿರುವ ಸಂಸದರು ಹಾಗೂ ವಕೀಲರು. ಇನ್ನು ಸಂಸದೆ  ಮಹುವಾ ಮೊಯಿತ್ರಾ ವಿಚಾರಣೆ ಮಾತ್ರ ಬಾಕಿಯಿದೆ. ಮೊಯಿತ್ರಾ ಪರವಾಗಿ ಯಾವುದೇ ಹೇಳಿಕೆಯನ್ನು ಟಿಎಂಸಿ(TMC)  ನಾಯಕರು ನೀಡಿಲ್ಲ. ಹಾಗಾಗಿ ಮೋದಿ, ಅದಾನಿ ವಿರುದ್ಧ ಆರೋಪ ಮಾಡಿ ಏಕಾಂಗಿಯಾದ್ರಾ ಮೊಯಿತ್ರಾ..? ಮೊಯಿತ್ರಾರಿಂದ ಅಂತರ ಕಾಯ್ದುಕೊಳ್ತಾ ಟಿಎಂಸಿ..? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಇದನ್ನೂ ವೀಕ್ಷಿಸಿ:  ಒಂದೂವರೆ ತಿಂಗಳ ಬಳಿಕ ದಸರಾ ಆನೆಗಳು ಕಾಡಿಗೆ : ಪೂಜೆ ಸಲ್ಲಿಸಿ ಬೀಳ್ಕೊಟ್ಟ ಅರಮನೆ ಆಡಳಿತ ಮಂಡಳಿ