Asianet Suvarna News Asianet Suvarna News

ದೊಡ್ಡಣ್ಣನಿಗೆ ಜಲ ಪ್ರಳಯದ ಟೆನ್ಷನ್​​​​​​​​​​​​: ಅದೊಂದು ಡ್ಯಾಂ ಒಡೆದರೆ ಅಮೆರಿಕ ಮುಳುಗೋದು ಪಕ್ಕಾ!

*ಅಮೆರಿಕಕ್ಕೆ ಜಲ ಕಂಟಕ: 2,200 ಡ್ಯಾಮ್​​ಗಳು ಫುಲ್ ಡೇಂಜರ್..!
*ಅದೊಂದು ಡ್ಯಾಂ ಒಡೆದರೆ. ಕ್ಯಾಲಿಫೊರ್ನಿಯಾ, ಮೆಕ್ಸಿಕೋ ಮುಳುಗೋದು ಪಕ್ಕಾ..!
*50 ವರ್ಷ ಹಳೆಯ ಡ್ಯಾಮ್​ಗಳ ಪಟ್ಟಿ ಸಿದ್ಧ ಪಡಿಸಿದ ವಿಜ್ಞಾನಿಗಳು..!
 

ಅಮೆರಿಕಾ (ಮೇ. 08): ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳೋ ಅಮೆರಿಕಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಹಿರಿಯಣ್ಣನ ಅಂತರಾಳದಲ್ಲಿ ಕಂಟಕದ ಜ್ವಾಲೆ ಸ್ಫೋಟಗೊಂಡಿದೆ. ಇಷ್ಟು ದಿನ ನಾನೇ ನಂ1 ಅಂದಿದ್ದ ಅಮೆರಿಕಾ ಈಗ ತನ್ನ ಗುಂಡಿ ತಾನೇ ತೋಡಿಕೊಂಡಿದೆ. ಇಷ್ಟು ದಿನ ದೊಡ್ಡಣ್ಣ ನಿಸರ್ಗದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದಾ. ಆದ್ರೆ ಈಗ ಇದೇ ನಿಸರ್ಗದೇವಿಯೇ ದೊಡ್ಡಣ್ಣನಿಗೆ ಶಾಪ ಕೊಟ್ಟಿದ್ದಾಳೆ. 

ಇದನ್ನೂ ಓದಿSuvarna Focus: ಮೇ 9 ರ ಮೇಲೆ ಕಣ್ಣಿಟ್ಟಿದೆ ಅಮೆರಿಕಾ..!

ವಿಶ್ವದ ಯಾವುದೇ ಮೂಲೆಯಲ್ಲೂ ಕೇಳಸಿಗೋ ಏಕೈಕ ದೇಶದ ಹೆಸರು ಯಾವುದು ಅಂದ್ರೆ ಅದೇ ದೊಡ್ಡಣ್ಣ ಅರ್ಥಾತ್ ಅಮೆರಿಕಾ. ಇಷ್ಟು ದಿನ ಅಮೆರಿಕದ ಕರಾವಳಿಯಲ್ಲಿ ಚಂಡಿ ತಾಂಡವವಾಡ್ತಿದ್ಳು. ಫಿಲಿಫೈನ್ಸ್​​​​ನ್ನ ಚಂಡಿ ತವರುಮನೆ ಮಾಡಿಕೊಂಡಿದ್ದಳು. ಚಂಡಮಾರುತ ರಣಾರ್ಭಟಕ್ಕೆ ಇಡಿ ಅಮೆರಿಕ ಕರಾವಳಿ ಅಕ್ಷರಶಃ ನರಕದಂತಾಗ್ತಿತ್ತು ಆದ್ರೆ ಈಗ ಈ ಚಂಡಿ ತವರಲ್ಲಿ ಈಗ ಭೂಕಂಪದ ಭೀತಿಯ ಜೊತೆಗೆ ಅಮೆರಿಕಾದ ದಶದಿಕ್ಕುಗಳಲ್ಲಿರೋ ಅಣೆಕಟ್ಟುಗಳು ಛಿದ್ರವಾಗೋ ಭೀತಿ ಎದುರಾಗಿದೆ. ಅದು ಎಷ್ಟು ಅಣೆಕಟ್ಟುಗಳಿಂತಿರಾ, ಬರೊಬ್ಬರಿ 2200 ಅಣೆಕಟ್ಟುಗಳು. ಇಲ್ಲಿದೆ ಈ ಕುರಿತ ಕಂಪ್ಲೀಟ್‌ ವರದಿ 

Video Top Stories