Asianet Suvarna News Asianet Suvarna News

ಹಮಾಸ್-ಇಸ್ರೇಲ್ ಯುದ್ಧಕ್ಕೆ ಬೈಡನ್ ಕೊಟ್ಟ ಕಾರಣವೇನು? ಮಹಾಯುದ್ಧಕ್ಕೆ ಕಾರಣವಾಗುತ್ತಾ ಕಾಳಗ..?

ಅಚ್ಚರಿ ಮೂಡಿಸಿದೆ ಅಮೆರಿಕಾ ಅಧ್ಯಕ್ಷನ ಹೇಳಿಕೆ!
ಚೀನಾ ಮಸಲತ್ತು ಮಣಿಸುತ್ತಾ ಭಾರತದ ರಾಜತಂತ್ರ?
ಕಾರಿಡಾರ್ ಯುದ್ಧಕಾಂಡದ ಅಸಲಿ ರಹಸ್ಯವೇನು!
 

ಹಮಾಸ್ ಇಸ್ರೇಲ್ ಯುದ್ಧಕ್ಕೆ ಇಲ್ಲೀ ತನಕ ಇದ್ದ ಕಾರಣಗಳೇ ಒಂದು.. ಆದ್ರೆ ಈಗ ಅಮೆರಿಕಾ ಅಧ್ಯಕ್ಷ ಬೈಡನ್(Joe biden) ಪತ್ತೆ ಹಚ್ಚಿರೋ ಕಾರಣವೇ ಒಂದು.  ಆ ಕಾರಣ ಕೇಳಿದ್ರೆ, ಹಮಾಸ್ ದಾಳಿ ಹಿಂದೆ ಡ್ರ್ಯಾಗನ್ ಸಂಚಿದೆಯಾ ಅನ್ನೋ ಅನುಮಾನ ಮೂಡುತ್ತೆ. ಅದೊಂದೇ ಕಾರಣಕ್ಕೆ ಇಸ್ರೇಲ್ ಅಂಗಳದಲ್ಲಿ  ಹತ್ಯಾಕಾಂಡ ನಡೀತಿದೆಯಾ ಅನ್ನೋ ಸಂದೇಹ ಮೂಡುತ್ತೆ. ಗಾಜಾದ ಮೇಲೆ ಇಸ್ರೇಲ್(Israel) ಮಾರಣಾಂತಿಕ ಪ್ರಹಾರ ಮಾಡ್ತಾ ಇದೆ. ಆದ್ರೆ ಅದನ್ನ ಯುದ್ಧ ಅಂತ ಕರೆಯೋಕೆ ಇಸ್ರೇಲ್ ಸಿದ್ಧವಿಲ್ಲ. ಯಾಕಂದ್ರೆ, ಇದು ಇಸ್ರೇಲ್ ಪಾಲಿಗೆ ಪ್ರತೀಕಾರ ಅಷ್ಟೆ. ಹಮಾಸ್(Hamas) ಉಗ್ರರ ದಾಳಿಗೆ, ಗಾಜಾದಲ್ಲಿ ಇಸ್ರೇಲ್ ಪ್ರತಿದಾಳಿ ನಡೆಸ್ತಾ ಇದೆ. ಈ ಯುದ್ಧವಲ್ಲದ ಯುದ್ಧ ಆರಂಭವಾಗಿ 20 ದಿನಗಳೇ ಕಳೆದಿವೆ. ಆದ್ರೆ, ಇನ್ನೂ ಇಸ್ರೇಲ್ ಹಸಿವು ಮಾತ್ರ ಎಳ್ಳುಕಾಳಷ್ಟೂ ಇಂಗಿಲ್ಲ. ಹಮಾಸ್ ಉಗ್ರರು ಇಸ್ರೇಲಿಗೆ ಅತಿ ದೊಡ್ಡ ಆಘಾತ ನೀಡಿದ್ರು.ಇಸ್ರೇಲಿನ ಆಯಕಟ್ಟಿನಲ್ಲೇ ಇದ್ದುಕೊಂಡು, ಜಗತ್ತಿನ ಮೋಸ್ಟ್ ಫೇಮಸ್ ಗುಪ್ತಚರ ಘಟಕ ಹೊಂದಿರೋ ಇಸ್ರೇಲನ್ನೇ ಯಾಮಾರಿಸೋದು, ಭೂಮಿ, ಸಮುದ್ರ, ವಾಯು ಮಾರ್ಗದ ಮೂಲಕ ಒಳಗೆ ನುಗ್ಗಿ ವಿಧ್ವಂಸ ಸೃಷ್ಟಿಸೋದು, ಇದೆಲ್ಲವೂ ಕೂಡ ಇಸ್ರೇಲ್ ಮಾತ್ರವೇ ಅಲ್ಲ, ಜಗತ್ತೇ ಊಹಿಸದ ಘಟನೆಗಳು.. ತನ್ನ ಮೇಲಾದ ದಾಳಿಗೆ ಇಸ್ರೇಲ್ ಕಟುವಾಗಿಯೇ ಪ್ರತ್ಯುತ್ತರ ನೀಡುತ್ತೆ ಅಂತ ಪ್ರಪಂಚ ಭಾವಿಸಿತ್ತು. ಆದ್ರೆ ಇಸ್ರೇಲ್, ಅತ್ಯಂತ ನಿಧಾನವಾಗಿ-ಆದ್ರೆ, ಪ್ರಭಾವಶಾಲಿಯಾಗಿ ಉಗ್ರರ ಹೆಡೆಮುರಿ ಕಟ್ತಾ ಇದೆ.

ಇದನ್ನೂ ವೀಕ್ಷಿಸಿ:  ನಿರ್ಜನ ಪ್ರದೇಶದಲ್ಲಿ ಬಿದ್ದಿತ್ತು ರೌಡಿಶೀಟರ್ ಹೆಣ: ಮುದಿರೌಡಿ ಎಂದು ಕೆಣಕಿದ್ದೇ ಕೊಲೆಗೆ ಕಾರಣವಾಯ್ತಾ..?